Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಕಟೀಲ್ ಕ್ಷೇತ್ರದಲ್ಲಿ ಮಾಯಾವಿ ಮಹೂರ್ತ..!!

kateel-kshetradalli-maayaavi-mahurta-naadle
Share This:

ಸ್ಯಾಂಡಲ್ ವುಡ್ ನಲ್ಲಿ ಮೇಲೊಬ್ಬ ಮಾಯಾವಿ? ಎಂಬ ಶೀರ್ಷಿಕೆ ಇಟ್ಟುಕೊಂಡು ಒಂದು ಚಿತ್ರ ತಯಾರಾಗುತ್ತಿದೆ. ಈ ಚಿತ್ರದಲ್ಲಿ ಪ್ರತಿಯೊಂದು ಪಾತ್ರವೂ ಸಮಾಜದಲ್ಲಿ ನಡೆಯುವ ಮಾಫಿಯಾವನ್ನು ಬಯಲಿಗೆಳೆಯಲು ಪ್ರಯತ್ನಿಸುತ್ತಿರುತ್ತವೆ, ಈ ಪ್ರಯತ್ನದಲ್ಲಿ ಯಾರು ಜಯಶಾಲಿಯಾಗುತ್ತಾರೋ ಅವರೇ ಮೇಲೊಬ್ಬ ಮಾಯಾವಿ? ಎಂಬ ಕಥಾಹಂದರವನ್ನು ಇಟ್ಟುಕೊಂಡು ಸ್ಯಾಂಡಲ್ ವುಡ್ ನಲ್ಲಿ ಒಂದು ಚಿತ್ರವೂ ಸೆಟ್ಟೇರಿದೆ. ಈ ಚಿತ್ರದಲ್ಲಿ ಕಾಮಿಡಿ, ಹಾಡು, ಪ್ರೀತಿ ಎಲ್ಲವೂ ಇರುವ ಒಂದು ಥ್ರಿಲ್ಲರ್ ಕಮರ್ಷಿಯಲ್ ಸಿನಿಮಾ.kateel-kshetradalli-maayaavi-mahurta-naadleಈ ಸಿನಿಮಾದ ಮುಹೂರ್ತ ಕಾರ್ಯಕ್ರಮವು ಮಂಗಳೂರಿನ ಕಟೀಲ್ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಾನದಲ್ಲಿ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕರಾದ ಪುತ್ತೂರು ಭರತ್, ನಿರ್ದೇಶಕರಾದ ನವೀನ್ ಕೃಷ್ಣ.ಬಿ, ಚಿಂತಕ/ಪತ್ರಕರ್ತ/ನಿರ್ದೇಶಕರಾದ ಚಕ್ರವರ್ತಿ ಚಂದ್ರಚೂಡ್, ಚಿತ್ರದ ನಾಯಕನಟ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್, ಚಿತ್ರದ ನಾಯಕಿ ಅನನ್ಯ ಶೆಟ್ಟಿ ಹಾಗೂ ಸ್ಥಳೀಯ ರಂಗಕಲಾವಿದರ ಜೊತೆಗೆ ಚಿತ್ರದ ತಾಂತ್ರಿಕ ವರ್ಗದವರು ಹಾಜರಿದ್ದರು. ಚಿತ್ರದ ಛಾಯಾಗ್ರಾಹಕರಾದ ದೀಪಿತ್ ಬಿಜೈ ರತ್ನಾಕರ್ ಕ್ಯಾಮೆರಾಗೆ ಚಾಲನೆ ನೀಡಿದರೆ, ಚಕ್ರವರ್ತಿ ಚಂದ್ರಚೂಡ್ ಅವರು ಕ್ಲಾಪ್ ಮಾಡುವುದರ ಮೂಲಕ ಚಿತ್ರಕ್ಕೆ ಶುಭ ಹಾರೈಸಿದರು.

ನಿಮ್ಮ ಚಿತ್ರವೂ ಬಿಡುಗಡೆಗೊಂಡು ಉತ್ತಮ ಪ್ರದರ್ಶನಗೊಳ್ಳಲಿ ಹಾಗೂ ಒಳ್ಳೆಯ ಗಳಿಕೆಗಳಿಸಿ , ಶತದಿನೋತ್ಸವವನ್ನು ಆಚರಿಸಲಿ ಎಂದು ನಮ್ಮ Naadle ತಂಡವು ಹಾರೈಸುತ್ತದೆ.

naadle If you like this article, click on the button below