ಕರ್ನಾಟಕದ ಮುಖ್ಯಮಂತ್ರಿಯಾಗಿ ಬಿ.ಯಸ್ ಯಡಿಯೂರಪ್ಪ 4ನೇ ಬಾರಿಗೆ ಪ್ರಮಾಣವಚನ ಸ್ವೀಕಾರ..!!

karnatakada mukhyamantriyagi BS yediyurappa 4ne baarige pramanavachana swikara-naadle
Share This:

ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದ ಗಾಜಿನಮನೆಯ ಆವರಣದಲ್ಲಿ ಕಿಕ್ಕಿರಿದು ತುಂಬಿದ್ದ ಸಮಾರಂಭದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ಅವರು ಯಡಿಯೂರಪ್ಪಗೆ ಪ್ರತಿಜ್ಞಾ ವಿಧಿ ಬೋಧಿಸಿದರು.karnatakada mukhyamantriyagi BS yediyurappa 4ne baarige pramanavachana swikara-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ನಂತರ ಮೊದಲ ಸಂಪುಟ ಸಭೆಯಲ್ಲಿ ಎರಡು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದ್ದು, ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರಾಜ್ಯ ಸರ್ಕಾರದಿಂದಲೂ ಎರಡು ಕಂತುಗಳಲ್ಲಿ ಎರಡು ಸಾವಿರ ರೂ. ನೀಡುವುದಾಗಿ ಘೋಷಿಸಿದ್ದಾರೆ.ಜತೆಗೆ ನೇಕಾರರ ಸಾಲ ಮನ್ನಾ ಮಾಡುವುದಾಗಿಯೂ ಪ್ರಕಟಿಸಿದ್ದಾರೆ. ಇದರೊಂದಿಗೆ ರೈತರು ಹಾಗೂ ಬಡವರ ಪರ ತಮ್ಮ ಕಾಳಜಿ ಪ್ರದರ್ಶಿಸಿದ್ದಾರೆ. ರೈತ ಫ‌ಲಾನುಭವಿಗಳಿಗೆ ವರ್ಷಕ್ಕೆ 6,000 ರೂ ನೀಡುವ ಕಿಸಾನ್‌ ಸಮ್ಮಾನ್‌ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಈ ಯೋಜನೆಗೆ ಹೆಚ್ಚುವರಿಯಾಗಿ ನಾಲ್ಕು ಸಾವಿರ ರೂಗಳನ್ನು ರಾಜ್ಯ ಸರ್ಕಾರ ಸೇರಿಸಿದೆ. ಇದರೊಂದಿಗೆ ರೈತರಿಗೆ ವರ್ಷಕ್ಕೆ 10,000 ರೂ ಕೊಡುಗೆ ಸಿಗಲಿದೆ.karnatakada mukhyamantriyagi BS yediyurappa 4ne baarige pramanavachana swikara-naadleಮುಂದಿನ ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವುದು, ಈ ತಿಂಗಳ ಅಂತ್ಯದೊಳಗೆ ಹಣಕಾಸು ಮಸೂದೆಗೆ ಸದನದಲ್ಲಿ ಒಪ್ಪಿಗೆ ಪಡೆಯುವುದು, ಅತೃಪ್ತ ಶಾಸಕರನ್ನು ಮತ್ತು ನಿಷ್ಠಾವಂತರನ್ನು ಸರ್ಕಾರದಲ್ಲಿ ಒಟ್ಟು ಸೇರಿಸುವುದು, ಮುಂದಿನ ಆರು ತಿಂಗಳಲ್ಲಿ ಎದುರಾಗುವ ಉಪ ಚುನಾವಣೆಯಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಈ ಎಲ್ಲಾ ಸವಾಲುಗಳು ಯಡಿಯೂರಪ್ಪನವರಿಗೆ ಸದ್ಯ ಇವೆ. ಯಡಿಯೂರಪ್ಪನವರ ನಂತರದ ಬಹುದೊಡ್ಡ ಸವಾಲು ಸಚಿವ ಸಂಪುಟ ರಚನೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಬೀಳಿಸಲು ಸಹಾಯ ಮಾಡಿದ ಅತೃಪ್ತ ಶಾಸಕರನ್ನು ಕೂಡ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಅನಿವಾರ್ಯತೆ ಯಡಿಯೂರಪ್ಪನವರಿಗೆ ಇದೆ. ಅದರ ಜೊತೆಗೆ ತಮ್ಮ ಪಕ್ಷದ ಹಿರಿಯ ನಾಯಕರು ಸೇರಿದಂತೆ ಸಕ್ರಿಯ ಶಾಸಕರನ್ನು ಕೂಡ ತೃಪ್ತಿಪಡಿಸಬೇಕು. 34 ಸದಸ್ಯರುಗಳಿಗಿಂತ ಹೆಚ್ಚು ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ. 

 

Offers

Want to Add your Offers, contact Naadle at 7090787344 or Email us at info@naadle.com