ಕರ್ನಾಟಕ ಪ್ರೀಮಿಯರ್ ಲೀಗ್ – 2018..!!

karnataka premier league-2018-naadle
Share This:

ಇಂಡಿಯನ್ ಪ್ರೀಮಿಯರ್ ಲೀಗ್ ನಂತರ ಭಾರತದಾದ್ಯಂತ ಕ್ರೀಡಾಭಿಮಾನಿಗಳಿಗೆ ಕ್ರಿಕೆಟ್ ರಸದೌತಣ ಬಡಿಸುವ ಮತ್ತೊಂದು ಹಬ್ಬ ಕರ್ನಾಟಕ ಪ್ರೀಮಿಯರ್ ಲೀಗ್. ಟೀಮ್ ಇಂಡಿಯಾದಲ್ಲಿ ಕನ್ನಡ ಮಣ್ಣಿನ ಹೆಮ್ಮೆಯ ಆಟಗಾರರು ಸಾಕಷ್ಟು ಮಂದಿ ಇರುವುದರಿಂದ ಕೆಪಿಎಲ್ ಸಹಜವಾಗೇ ಜನಾಕರ್ಷಿಸುತ್ತಿದೆ. ಈ ಬಾರಿ ಇನ್ನಷ್ಟು ವಿಶೇಷತೆಗಳೊಂದಿಗೆ ನಿಮ್ಮ ಕಣ್ಮನ ತಣಿಸಲು ಕೆಪಿಎಲ್ ಸಜ್ಜಾಗುತ್ತಿದೆ.karnataka premie-nadler league-2018

Upcoming and Ongoing events

View More Events

Want to Promote your Event, contact Naadle at 9035030300 or Email us at [email protected]


ಕೆಪಿಎಲ್ 2018ರಲ್ಲಿ ಒಟ್ಟು 7 ತಂಡಗಳು ಕಾದಾಡಲಿದ್ದು ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರು ಈ ಮೂರು ತಾಣಗಳಲ್ಲಿ ಪಂದ್ಯಾಟಗಳು ನಡೆಯಲಿವೆ. ಈ ಬಾರಿಯ ಕೆಪಿಎಲ್ ಹರಾಜಿನಲ್ಲಿ ರಾಬಿನ್ ಉತ್ತಪ್ಪ ಅವರು ಪಾಲ್ಗೊಳ್ಳುತ್ತಿರುವುದು ಮತ್ತೊಂದು ವಿಶೇಷ. ಆಗಸ್ಟ್ 15ರಿಂದ ಆರಂಭಗೊಳ್ಳಲಿದೆ. ಇಂದು ನಡೆಯಲಿರುವ ಕೆಪಿಎಲ್ 2018ರ ಆಟಗಾರರ ಹರಾಜಿನಲ್ಲಿ ಕರುಣ್ ನಾಯರ್ ದುಬಾರಿ ಬೆಲೆಗೆ ಮಾರಾಟವಾಗುವುದನ್ನು ನಿರೀಕ್ಷಿಸಲಾಗಿತ್ತು. ಆದರೆ ಕರುಣ್ ನಾಯರ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಗಾಗಿ ಭಾರತ ತಂಡವನ್ನು ಪ್ರತಿನಿಧಿಸಲಿರುವುದರಿಂದ ನಾಯರ್ ಬದಲಿಗೆ ರಾಬಿನ್ ಉತ್ತಪ್ಪ ಕೆಪಿಎಲ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ರಾಬಿನ್ ಉತ್ತಪ್ಪ ಅವರೂ ಹರಾಜಿನಲ್ಲಿ ದುಬಾರಿ ಆಟಗಾರರೆನಿಸಲಿದ್ದಾರೆ.karnataka premier league-2018-naadleಲಕ್ಷ್ಮೀ ವಿಲಾಸ್ ಬ್ಯಾಂಕ್ ಸಹಯೋಗದೊಂದಿದೆ ಕಾರ್ಬನ್ ಸ್ಮಾರ್ಟ್ ಫೋನ್ಸ್ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಕೆಪಿಎಲ್ 2018ರ ಈ ಸೀಸನ್ ನಲ್ಲಿ ಬಿಜಾಪುರ ಬುಲ್ಸ್, ಬೆಳಗಾವಿ ಪ್ಯಾಂಥರ್ಸ್, ಬಳ್ಳಾರಿ ಟಸ್ಕರ್ಸ್, ಹುಬ್ಳಿ ಟೈಗರ್ಸ್, ಮೈಸೂರ್ ವಾರಿಯರ್ಸ್, ಶಿವಮೊಗ್ಗ ಲಯನ್ಸ್, ಬೆಂಗಳೂರು ಬ್ಲಾಸ್ಟರ್ಸ್ ಹೀಗೆ ಏಳು ತಂಡಗಳ ನಡುವೆ ಜಿದ್ದಾಜಿದ್ದಿ ನಡೆಯಲಿದ್ದು ಪಂದ್ಯಾಟ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ. ಏಳೂ ಫ್ರಾಂಚೈಸಿಗಳು ಪ್ರತಿಭಾನ್ವಿತ ಆಟಗಾರರನ್ನು ಒಳಗೊಳ್ಳಲಿದ್ದು ಕ್ರೀಡಾಭಿಮಾನಿಗಳಿಗೆ ಭರಪೂರ ಮನರಂಜನೆ ದೊರೆಯಲಿದೆ.karnataka premier league-2018-naadleಹಿಂದಿನ ಆರು ಆವೃತ್ತಿಗಳಲ್ಲಿ 2008ರಲ್ಲಿ ಪ್ರಾವಿಡೆಂಟ್ ಬೆಂಗಳೂರು ರೂರಲ್, 2009ರಲ್ಲಿ ಮ್ಯಾಂಗಲೂರ್ ಉನೈಟೆಡ್, 2014ರಲ್ಲಿ ಮೈಸೂರ್ ವಾರಿಯರ್ಸ್, 2015ರಲ್ಲಿ ಬಿಜಾಪುರ್ ಬುಲ್ಸ್, 2016ರಲ್ಲಿ ಬಳ್ಳಾರಿ ಟಸ್ಕರ್ಸ್, 2017ರಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮಿದ್ದವು. ಈ ಬಾರಿ ಚಾಂಪಿಯನ್ ಪಟ್ಟ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದೆ.
naadle If you like this article, click on the button below

Offers

Want to Add your Offers, contact Naadle at 9035030300 or Email us at [email protected]