ಕರಾವಳಿಗೂ ಬಂತು ಸುಂದರ ಬೋಟ್ ಹೌಸ್..!!!

karavaligu bantu sundara boat house-naadle
Share This:

ಉಪ್ಪುನೀರು ಮತ್ತು ಹಿನ್ನೀರು ಎರಡೂ ಇರುವ ಕಡೆ ಮನರಂಜನೆಗೇನು ಕೊರತೆ? ಕರಾವಳಿಯಲ್ಲಂತೂ ಕಡಲತೀರ ಮತ್ತು ಬ್ಯಾಕ್ ವಾಟರ್ ಪ್ರವಾಸಿಗರಿಗೆ ಭರಪೂರ ಮನರಂಜನೆ ನೀಡುತ್ತಿದ್ದು, ಈ ವರ್ಷದ ಬೇಸಿಗೆ ಮಜಾಕ್ಕೆ ಈಗಲೇ ಉಡುಪಿಯಲ್ಲಿ ಬೋಟ್ ಹೌಸ್ ಸಿದ್ಧಗೊಂಡಿದೆ. ಉಡುಪಿ ಜಿಲ್ಲೆಯ ಪಡುತೋನ್ಸೆ, ಕೋಡಿಬೆಂಗ್ರೆ ಸ್ವರ್ಣನದಿಯಲ್ಲೂ ಶುರುವಾಗಿದೆ. ವರ್ಷದ ಹಿಂದೆ ಇಲ್ಲಿ ಪಾಂಚಜನ್ಯ ಬೋಟ್‌ಹೌಸ್‌ ಆರಂಭಗೊಂಡಿದ್ದು, ಈಗ ರಾಜ್ಯದಲ್ಲೇ ದೊಡ್ಡ ಗಾತ್ರದ ತಿರುಮಲ ಕ್ರೂಸ್‌ ಬೋಟ್‌ಹೌಸ್‌ ಕೋಡಿಬೆಂಗ್ರೆ ದುರ್ಗಾಪರಮೇಶ್ವರೀ ದೇವಸ್ಥಾನದ ಸಮೀಪ ಪ್ರವಾಸಿಗರಿಗೆ ತೆರೆದುಕೊಂಡಿದೆ.
karavaligu bantu sundara boat house-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com


ಸುಮಾರು 200 ಮಂದಿಯನ್ನು ಹೊತ್ತೂಯ್ಯಬಲ್ಲ ಸಾಮರ್ಥ್ಯ ಹೊಂದಿರುವ ಈ ಅತ್ಯಾಧುನಿಕ ಶೈಲಿಯ ದೋಣಿ ಮನೆ 120 ಅಡಿ ಉದ್ದ, 20 ಅಡಿ ಅಗಲವಿದೆ. 16 x 11 ಚದರಡಿಯ ಹವಾನಿಯಂತ್ರಿತ ಐಷಾರಾಮಿ ಅಟ್ಯಾಚ್‌ಡ್‌ 5 ಬೆಡ್‌ ರೂಮುಗಳು, ಅಡುಗೆ ಕೋಣೆ, ಲಿವಿಂಗ್‌ ರೂಮ್‌ ಇದೆ. ಮೇಲ್ಭಾಗದಲ್ಲಿ ಸುಮಾರು 80 ಮಂದಿಗೆ ಕುಳಿತುಕೊಳ್ಳಲು ಅವಕಾಶವಿರುವ 95×20 ಚದರ ಅಡಿಯ ಹಾಲ್‌ ಇದ್ದು, ಪಾರ್ಟಿಗಳನ್ನು ಆಯೋಜಿಸಬಹುದು. ಬೋಟಿನಲ್ಲಿ 100 ಲೈಫ್‌ ಜಾಕೆಟ್‌ ಇರಿಸಲಾಗಿದೆ. ಡೇ ಕ್ರೂಸ್‌ ಬೆಳಗ್ಗೆ 10ರಿಂದ ಸಂಜೆ 4ರವರೆಗೆ, ನೈಟ್‌ಕ್ರೂಸ್‌ ಸಂಜೆ 5ರಿಂದ ರಾತ್ರಿ 9.30, ಓವರ್‌ನೈಟ್‌ ಕ್ರೂಸ್‌ ಸಂಜೆ 5ರಿಂದ ಮರುದಿನ ಬೆಳಗ್ಗೆ 8.30ರವರೆ‌ಗೆ ಇರುತ್ತದೆ. ದೋಣಿಮನೆಯಲ್ಲಿ ಉತ್ತರ, ದಕ್ಷಿಣ ಭಾರತದ ಶೈಲಿಯ ಆಹಾರ ಪದಾರ್ಥಗಳು, ತುಳುನಾಡಿನ ಖಾದ್ಯ ಪದಾರ್ಥಗಳು, ಎಲ್ಲ ರೀತಿಯ ಮೀನಿನ ಖಾದ್ಯ ಆಕರ್ಷಣೆಯಾಗಿರಲಿದೆ. ಜತೆಗೆ ಪ್ರವಾಸಿಗರು ಬಯಸಿದ ಆಹಾರ ಪದಾರ್ಥಗಳನ್ನು ನೀಡಲಾಗುತ್ತದೆ.karavaligu bantu sundara boat house-naadle
ಬೋಟ್‌ಹೌಸ್‌ನಲ್ಲಿ ಕುಳಿತು ಸುವರ್ಣ ನದಿ, ಸೀತಾನದಿ, ಎಣ್ಣೆಹೊಳೆ ನದಿಗಳ ಸಂಗಮ ಸ್ಥಾನ ಡೆಲ್ಟ ಬೀಚ್‌, ಹಂಗಾರ ಕಟ್ಟೆ, ಬೆಂಗ್ರೆ, ಹೂಡೆ, ಮೂಡುಕುದ್ರು, ಕಲ್ಯಾಣಪುರ ಸಂತೆಕಟ್ಟೆ ಬ್ರಿಜ್‌ ಸೇರಿದಂತೆ ಸುಮಾರು 14 ಕಿ.ಮೀ. ದೂರ ಸುತ್ತಾಡಬಹುದಾಗಿದೆ. ಈ ಮಧ್ಯೆ ಮೂರ್‍ನಾಲ್ಕು ಕುದ್ರುಗಳನ್ನು ವೀಕ್ಷಿಸಬಹುದಾಗಿದೆ.
naadle If you like this article, click on the button below

Offers

Want to Add your Offers, contact Naadle at 7090787344 or Email us at info@naadle.com