Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಕರಗುತ್ತಿದೆ ಓಜೋನ್ ಅಪಾಯದಲ್ಲಿ ಜೀವಸಂಕುಲ, ಭೂಮಿಯ ಮೇಲಿನ ಜೀವಿಗಳ ಉಳಿವಿಗಾಗಿ, ಓಜೋನ್ ಪದರವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ..!!

karagutide ozone apayadalli jeevasankula bhoomiya melina jeevigala ulivigagi ozone padaravannu kapadikolludu nammellara karthavya-naadle
Share This:

ಇತ್ತೀಚೆಗೆ ಪ್ರಕೃತಿಯಲ್ಲಿ ಆಗುತ್ತಿರುವ ಅನಾಹುತಗಳನ್ನು ನಾವು ಕಣ್ಣಾರೆ ಕಾಣುತ್ತಿದ್ದೇವೆ. ಇದಕ್ಕೆಲ್ಲಾ ಕಾರಣ ನಾವು ಪ್ರಕೃತಿಯನ್ನು ಹಾಳು ಮಾಡುತ್ತಿರುವುದು. ಆದ್ದರಿಂದ ಭೂಮಿಯಿಂದ ಬಹಳ ದೂರದಲ್ಲಿರುವ ಓಝೋನ್ ಪದರವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಭೂಮಂಡಲವನ್ನು ಆವರಿಸಿರುವ ಓಜೋನ್‌ ಪದರ ಭೂಮಿಯನ್ನು ಮತ್ತು ಅಲ್ಲಿರುವ ಜೀವ ಸಂಕುಲಗಳನ್ನು ಸೂರ್ಯನ ಹಾನಿಕಾರಕ ವಿಕಿರಣಗಳಿಂದ ರಕ್ಷಿಸುತ್ತದೆ. ಈ ಪದರದ ಕಾರಣದಿಂದಲೇ ಭೂಮಿ ಮತ್ತು ಅದರಲ್ಲಿರುವ ಜೀವಿಗಳು ಅನಾದಿ ಕಾಲದಿಂದಲೂ ಸುರಕ್ಷಿತವಾಗಿವೆ. ಮುಂದಿನ ಪೀಳಿಗೆಯೂ ಇದೇ ರೀತಿ ಸುರಕ್ಷಿತವಾಗಿರುವ ನಿಟ್ಟಿನಲ್ಲಿ ಓಜೋನ್‌ ಪದರದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆದರೆ ಕೆಲವು ವರ್ಷಗಳಿಂದ ಮಾನವರು ಮಾಡುತ್ತಿರುವ ಅಭಿವೃದ್ಧಿ ಸಂಬಂಧಿ ಯೋಜನೆಗಳು, ತಂತ್ರಜ್ಞಾನಗಳು, ಕೈಗಾರಿಕೆ ಮುಂತಾದ ಚಟುವಟಿಕೆಗಳಿಂದ ಹೊರಹೊಮ್ಮುವ ರಾಸಾಯನಿಕ ಮತ್ತು ವಿಷಕಾರಕ ವಸ್ತುಗಳು, ಹೆಚ್ಚುತ್ತಿರುವ ಜಾಗತಿಕ ತಾಪಮಾನ ಓಜೋನ್‌ ಪದರದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಈ ಕಾರಣದಿಂದ ಈ ಪದರ ಕ್ಷೀಣಿಸುತ್ತಿದ್ದು, ಮುಂದೊಂದು ದಿನ ಇದು ಭೂಮಂಡಲ ಮತ್ತು ಅದರಲ್ಲಿರುವ ಜೀವಿಗಳಿಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ ಎಂಬುದು ಕಳವಳ ವ್ಯಕ್ತವಾಗಿದೆ. ಆದ್ದರಿಂದ ಓಜೋನ್‌ ಪದರವನ್ನು ರಕ್ಷಿಸುವ ಅಭಿಯಾನವೊಂದು ಜಗತ್ತಿನಾದ್ಯಂತ ಶುರುವಾಗಿದೆ. ಓಜೋನ್‌ ಪದರ ಉಳಿಸಿ ಅಭಿಯಾನದ ಒಂದು ಭಾಗವೇ ವಿಶ್ವ ಓಜೋನ್‌ ದಿನಾಚರಣೆಯಾಗಿದೆ. ಪ್ರತಿವರ್ಷ ಸೆಪ್ಟೆಂಬರ್‌ 16 ಅನ್ನು ವರ್ಲ್ಡ್‌ ಓಜೋನ್‌ ಡೇ ಎಂದು ಆಚರಿಸಲಾಗುತ್ತದೆ.karagutide ozone apayadalli jeevasankula bhoomiya melina jeevigala ulivigagi ozone padaravannu kapadikolludu nammellara karthavya-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಓಜೋನ್ ಎಂಬುದು ಮೂರು ಆಮ್ಲಜನಕ ಪರಮಾಣುಗಳಿಂದ ಉಂಟಾದ ಒಂದು ಅಣು. ಇದು ಅನಿಲ ರೂಪದಲ್ಲಿ ಭೂಮಿಯನ್ನು ಸುತ್ತುವರೆದಿರುತ್ತದೆ. ಈ ಪದರವು ಸೂರ್ಯನಿಂದ ಬರುವ ನೇರಳಾತೀತ ವಿಕಿರಣಗಳನ್ನು ತಡೆಗಟ್ಟಿ ಜೀವಿಗಳನ್ನು ರಕ್ಷಿಸುತ್ತದೆ. ಈ ಓಜೋನ್ ಪದರವು ಭೂಮಧ್ಯ ರೇಖೆಯ ಬಳಿ ತೆಳುವಾಗಿದ್ದು ಧ್ರುವ ಪ್ರದೇಶಗಳ ಬಳಿ ದಪ್ಪವಾಗಿರುತ್ತದೆ. ಸೂರ್ಯನಿಂದ ಬರುವ ನೇರಳಾತೀತ ವಿಕಿರಣಗಳಲ್ಲಿ ಗುರುತಿಸಲಾಗಿದೆ.

೧. ಯುವಿ-ಎ (ತರಂಗಾಂತರ 400-315 ನ್ಯಾನೋ ಮೀಟರ್)
೨. ಯುವಿ-ಬಿ (ತರಂಗಾಂತರ 315-280 ನ್ಯಾನೋ ಮೀಟರ್)
೩. ಯುವಿ-ಸಿ (ತರಂಗಾಂತರ 280-100 ನ್ಯಾನೋ ಮೀಟರ್)

(100 ಕೋಟಿ ನ್ಯಾನೋ ಮೀಟರ್ = 1 ಮೀಟರ್)

ಇವುಗಳಲ್ಲಿ ಯುವಿ-ಬಿ ಮತ್ತು ಯುವಿ-ಸಿ ನೇರಳಾತೀತ ವಿಕಿರಣಗಳು ಜೀವಿಗಳಿಗೆ ಅತ್ಯಂತ ಮಾರಕವಾಗಿವೆ. ಆಶ್ಚರ್ಯದ ಸಂಗತಿಯೆಂದರೆ ವಿಶೇಷ ನೇರಳಾತೀತ ವಿಕಿರಣಗಳೇ ವಾತಾವರಣದಲ್ಲಿನ ಆಮ್ಲಜನಕದ (12) ಅಣುವನ್ನು ವಿಭಜಿಸಿ ಎರಡು ಆಮ್ಲಜನಕದ ಪರಮಾಣುಗಳನ್ನು ಬಿಡುಗಡೆ ಮಾಡುತ್ತವೆ. ಈ ಒಂದೊಂದು ಆಮ್ಲಜನಕದ ಪರಮಾಣುಗಳು ಆಮ್ಲಜನಕದ ಅಣು (02) ವಿನೊಂದಿಗೆ ಸಂಯೋಗಗೊಂಡು ಒಂದು ಓಜೋನ್ ಅಣುವಾಗಿ ಮಾರ್ಪಡುತ್ತದೆ. ಭೂಮಿಯ ಮೇಲ್ಮೈಯ ಹತ್ತಿರ ಓಜೋನ್ ಕಡಿಮೆ ಪ್ರಮಾಣದಲ್ಲಿದ್ದು, ಎತ್ತರಕ್ಕೆ ಹೋಗುತ್ತಿದ್ದಂತೆ ವಲಯವೊಂದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಓಜೋನ್ ತುಂಬ ಚಂಚಲ ಅನಿಲ. ಸಾಮಾನ್ಯ ಆಮ್ಲಜನಕಕ್ಕೆ ಹೋಲಿಸಿದರೆ ಓಜೋನ್ ಬಹುಬೇಗ ರಾಸಾಯನಿಕ ಕ್ರಿಯೆಯಲ್ಲಿ ಪಾಲ್ಗೊಂಡು ರಾಸಾಯನಿಕ ಪರಿಣಾಮಗಳನ್ನು ಬೀರಬಲ್ಲದು. ಓಜೋನ್ ಹೆಚ್ಚಿನ ಪ್ರಮಾಣದಲ್ಲಿ ಭೂಮಿಯ ಕೆಳ ವಾತಾವರಣದಲ್ಲಿದ್ದರೆ ಉಸಿರಾಟದ ಅಂಗಾಂಗಗಳಿಗೆ ತೊಂದರೆ ಒಡ್ಡಬಲ್ಲದು. ಕೆಳ ವಾತಾವರಣದಲ್ಲಿದ್ದರೆ ಜೀವಿಗಳಿಗೆ ತೊಂದರೆ ನೀಡುವ ಓಜೋನ್, ಭೂಮಿಯ ಮೇಲ್ಮೈಯಿಂದ ಸುಮಾರು 15-35 ಕಿ.ಮೀ. ಎತ್ತರದಲ್ಲಿ ಜೀವಿಗಳ ಉಳಿವಿಗೆ ಕಾರಣವಾಗುತ್ತದೆ

 

Offers

Want to Add your Offers, contact Naadle at 7090787344 or Email us at info@naadle.com