Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಕರಾವಳಿಯಲ್ಲಿಯೂ ಓಖೀ ಚಂಡಮಾರುತದ ರೌದ್ರನರ್ತನ..!!!

Share This:

Upcoming and Ongoing events

View More Events

Want to Promote your Event, contact Naadle at 9035030300 or Email us at info@naadle.com


ಓಖೀ ಚಂಡಮಾರುತದಿಂದ ದಕ್ಷಿಣಾ ತಮಿಳುನಾಡಿನಲ್ಲಿ ಭಾರಿ ಮಳೆಯಾಗಲಿದೆ. ಈ ಚಂಡಮಾರುತಕ್ಕೆ ಬಾಂಗ್ಲಾದೇಶವು ಓಖೀ ಎಂಬ ಹೆಸರನ್ನು ನೀಡಿದೆ, ಓಖೀ ಎಂದರೆ ಬಂಗಾಳಿಯಲ್ಲಿ ‘ಕಣ್ಣು’ ಎಂಧರ್ಥ. ಓಖೀ ಚಂಡಮಾರುತವು ಕರ್ನಾಟಕದ ಕರಾವಳಿಯ ಹಲವು ಕಡೆ ಭಾರಿ ಅನಾಹುತವನ್ನೇ ಸೃಷ್ಟಿಸಿದೆ. ಚಂಡಮಾರುತ ಮತ್ತು ಸೂಪರ್ ಮೂನ್ ಪರಿಣಾಮಗಳು ಜತೆಯಾಗಿ ಪಕ್ಷುಬ್ಧಗೊಂಡ ಕಡಲ ತೀರ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ಮತ್ತು ಮೀನುಗಾರರು ಅಪಾಯದಲ್ಲಿ ಸಿಲುಕಿದ್ದಾರೆ, ಅವರ ರಕ್ಷಣೆಗಾಗಿ ರಕ್ಷಣಾ ತಂಡ, ಅಗ್ನಿಶಾಮಕದಳ ಮತ್ತು ಹೆಲಿಕ್ಯಾಪ್ಟರ್ ನ ವ್ಯವಸ್ಥೆ ಮಾಡಲಾಗಿದೆ.ಅರಬ್ಬೀ ಸಮುದ್ರದಲ್ಲಿ ಕಡಲ್ಕೊರೆತ ಹೆಚ್ಚಾಗಿದ್ದು ಅದಕ್ಕಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಪರಿಸ್ಥಿತಿಗಳನ್ನು ಎದುರಿಸಲು ಕಡಲತೀರದ ಜನರಿಗೆ ತಾತ್ಕಾಲಿಕ ನಿಯಂತ್ರಿತ ಕೊಠಡಿಗಳನ್ನು ಸ್ಥಾಪಿಸಲಾಗಿದೆ, ಆಂಬುಲೆನ್ಸ್ ವ್ಯವಸ್ಥೆ ಮತ್ತು ಗಂಜಿ ಕೇದ್ರಗಳನ್ನು ತೆರೆಯಲಾಗಿದೆ. ಹಾಗೆಯೇ ಮೀನುಗಾರರು, ಪ್ರವಾಸಿಗರು ಮತ್ತು ಇತರರು ಸಮುದ್ರಕ್ಕೆ ಇಳಿಯದಂತೆ ಹೈಅಲರ್ಟ್ ಘೋಷಿಸಲಾಗಿದ್ದು,  ಯಾವುದೇ ತುರ್ತು ಪರಿಸ್ಥಿತಿಯಲ್ಲಿಯು 1077 ಟೋಲ್ ಫ್ರೀ ನಂಬರ್ ಗೆ ಕರೆ ಮಾಡಬಹುದು.ಓಖೀ ಚಂಡಮಾರುತದ ಪ್ರಭಾವ ಕರಾವಳಿಯಲ್ಲಿ ಮಾತ್ರವಲ್ಲದೆ, ತಮಿಳುನಾಡು ಮತ್ತು ಕೇರಳದಲ್ಲಿಯು ಈ ಚಂಡಮಾರುತದಿಂದ ಅಪಾರ ಹಾನಿಯಾಗಿ ಸಾವು ನೋವುಗಳು ಸಂಭವಿಸಿದೆ. ಹಾಗಾಗಿ ಕಡಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೈಕ್ಲೋನ್ ನ ಹೆಸರುಗಳ ಮೂಲಕ ಭವಿಷ್ಯದಲ್ಲಿ ಚಂಡಮಾರುತದ ಮುನ್ಸೂಚನೆ ಅಥವಾ ಎಚ್ಚರಿಕೆ ನೀಡಲು ಸುಲಭವಾಗುತ್ತದೆ.

Source:  http://epaper.udayavani.com/home.php?edition=Manipal&date=2017-12-        04&pageno=1&pid=UVANI_MAN#Article/UVANI_MAN_20171204_1_3/354px

naadleIf you like this article, click on the button below