ಕಾಪುದಪ್ಪೆ ಶ್ರೀ ಮಾರಿಯಮ್ಮ ದೇವಿಗ್ ಸುಗ್ಗಿ ಜಾತ್ರೆದ ಸಂಭ್ರಮ…!!

kapudappe mariyamma devig suggi jatreda sambhrama-naadle
Share This:

ಉಡುಪಿ ಜೆಲ್ಲೆಯ ಅನೇಕ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ, ಪುರಾಣ ಕಾಲದಿಂದಲೂ “ಹೂವಿನ ಹಿತ್ತಿಲು” ಎಂದೇ ಖ್ಯಾತಿಯನ್ನು ಪಡೆದಿರುವ ಕಾಪು ಸಾವಿರ ಸೀಮೆಯ ಒಡತಿ ಗದ್ದುಗೆಯನ್ನೇರಿ ಶರಣು ಬಂದ ಭಕ್ತರನ್ನು ತಥಾಸ್ತು ಎಂದು ಸದಾ ಹರಸುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಶ್ರೀ ಮಾರಿಯಮ್ಮ ದೇವಿ. ಕಾಪುವಿನ ಶ್ರೀ ಮಾರಿಯಮ್ಮ ಮಾರಿಯಾಗಿ, ಮಾರಿಯಮ್ಮಳಾಗಿ, ಮಹಾಕಾಳಿಯಾಗಿ, ಮಹಾಲಕ್ಷ್ಮಿಯಾಗಿ, ಮಹಾಸರಸ್ವತಿಯಾಗಿ ಸಕಲರನ್ನು ಕಾಯುವ ಮಹಾಶಕ್ತಿಯಾಗಿ ನೆಲೆಸಿರುತ್ತಾಳೆ.kapudappe mariyamma devig suggi jatreda sambhrama-naadle

Upcoming and Ongoing events

View More Events

Want to Promote your Event, contact Naadle at 9035030300 or Email us at info@naadle.com


ವಿಜಯನಗರ ಆಳ್ವಿಕೆಯ ಬಳಿಕ ಕೆಳದಿ ರಾಜರು ತುಳುನಾಡಿನ ಅಧಿಕಾರ ಸೂತ್ರವನ್ನು ಹಿಡಿದ ನಂತರ ಮಾರಿಯ ಪ್ರವೇಶವೆಂದು ಅಂದಾಜಿಸಲಾಗಿದೆ. ಲಿಂಗಣ್ಣ ಕವಿಯ “ಕೆಳದಿನೃಪವಿಜಯ” ಗ್ರಂಥದಲ್ಲಿ ತಿಳಿಸಿದಂತೆ ಕ್ರಿ.ಶ 1743 ರಲ್ಲಿ ಕೆಳದಿಯ ರಾಜ ಬಸಪ್ಪನಾಯಕನು ಕಾಪು ಕಡಲ ತೀರದಲ್ಲಿ ಮನೋಹರಗಡ ಎಂಬ ಕೋಟೆಯನ್ನು, ಕಾಪು ಹೊರವಲಯದ ಮಲ್ಲಾರಿನಲ್ಲಿ ಸೇನೆ  ವಿಶ್ರಾಮಿಸಲು ದೊಡ್ಡಕೋಟೆಯನ್ನು ರಚಿಸಲೆನ್ನಲಾಗಿದೆ. ಈ ಸೈನಿಕರು ತಮ್ಮ ಯುದ್ಧದೇವತೆಯಾಗಿ ಕರೆತಂದ “ದಂಡಿನ ಮಾರಿ” ಎಂಬ ಶಕ್ತಿಯೇ ಇಂದಿನ ಕಾಪುವಿನ ಮಾರಿಯಮ್ಮ ಎಂದು ಭಕ್ತಜನರಿಂದ ಆರಾಧಿಸಲ್ಪಡುತ್ತಲೇ. ಕ್ರಿ.ಶ 1830ರಲ್ಲಿ ಈಗಿನ ಹೊಸ ಮಾರಿಗುಡಿಯನ್ನು ನಿರ್ಮಿಸಲಾಗಿತ್ತೆಂದು ಇತಿಹಾಸದಿಂದ ತಿಳಿದುಬರುತ್ತದೆ.kapudappe mariyamma devig suggi jatreda sambhrama-naadleಕಾಪುರಾಜ ಮಹಾರಾಜರುಗಳು ಆಳಿದ ಪ್ರದೇಶ ಇಲ್ಲಿನ ಗದ್ದುಗೆಯಲ್ಲಿ ವಿರಾಜಮಾನಳಾಗಿ ಭಕ್ತಾಧಿಗಳ ಇಷ್ಟಾರ್ಥವನ್ನು ಪೂರೈಸುವ ದಂಡಿನ ಮಾರಿಯಾಗಿ ಕಾಪುವಿನಲ್ಲಿ ನೆಲೆ ನಿಂತಳು ಎನ್ನುವುದು ಪುರಾಣ ಪ್ರಸಿಧ್ಧ ಐತಿಹ್ಯ. ಯುದ್ದಕ್ಕಾಗಿ ಹೊರಡುವಾಗ ಮಾರಿಯಮ್ಮನ ದರ್ಶನ ಪಡೆದು ಹೋಗುವವರಿಗೆ ಮಾರಿಯಮ್ಮಳು ತನ್ನ ಶಕ್ತಿಯ ಮೂಲಕ ವಿಜಯವನ್ನು ದೊರಕಿಸಿಕೊಡುವ “ಕಾಪುದಪ್ಪೆ” ಎಂದೇ ಕರೆಯಿಸಿಕೊಂಡ ಶಕ್ತಿ. ಸ್ವರಕಾಪು ಸಾವಿರ ಸೀಮೆಯ ಒಡೆಯ ಶ್ರೀ ಲಕ್ಷ್ಮೀಜನಾರ್ದನ ದೇವರ ಪ್ರೇರಣೆಯಂತೆ ಸತ್ಯದ ಮಾರ್ಗದಲ್ಲಿ ನಡೆಯುವವರಿಗೆ ಸತ್ಯದಪ್ಪೆಯಾಗಿ, ಶರಣೆಂದು ಬಂದವರನ್ನು ಶರಣು ದುರ್ಗೆಯಾಗಿ ಸದಾ ಕಾಪಾಡಿಕೊಂಡು ಬರುವ ಮಹಾ ಮಾತೆಯಾಗಿ ಮಾರಿಯಮ್ಮ ದೇವಿ ಕಾಪುವಿನಲ್ಲಿ ಮೆರೆಯುತ್ತಿದ್ದಾಳೆ. ಮಾರಿಯಮ್ಮನಿಗೆ ಮಂಗಳವಾರ ಅತ್ಯಂತ ಪ್ರೀತಿಯ ದಿನ ಇದಕ್ಕೆ ಪ್ರತಿ ಮಂಗಳವಾರ ಶ್ರೀ ದೇವಿಯ ದರ್ಶನಕ್ಕೆ ಬರುವ ಭಕ್ತರ ಸಮೂಹವೇ ಸಾಕ್ಷಿ. ಮಂಗಳವಾರ ಗದ್ದುಗೆಪೂಜೆ, ತುಲಾಭಾರ ಸೇವೆಗಳು ಅತ್ಯಂತ ಮಹತ್ವವನ್ನು ಪಡೆದಿವೆ. ಮುಂದಿನ ಏಳೆಂಟು ವರ್ಷಗಳ ವರೆಗೆ ದೇವಿಯ ಸಾನ್ನಿಧ್ಯದಲ್ಲಿ ಹರಕೆಯ ಮಾರಿಪೂಜೆಗೆ ದಿನ ನಿಗದಿಯಾಗಿದೆ. ಗದ್ದಿಗೆಯ ಮೇಲೇರಿ ಭಕ್ತರನ್ನು ಹರಸುವ ಮಾರಿಯಮ್ಮ ದೇವಿಗೆ ಪ್ರತಿ ಕಾಲಾವಧಿ ಮಾರಿಪೂಜೆಯ ಸಂದರ್ಭಗಳಲ್ಲಿ 50,000 ಕ್ಕೂ ಮಿಕ್ಕಿ ಗದ್ದಿಗೆ ಪೂಜೆಯು ಹರಕೆ ರೂಪದಲ್ಲಿ ಸಮರ್ಪಣೆಗೊಳ್ಳುತ್ತದೆ. ಮಹಾ ಮಾತೆಯು ಸರ್ವಧರ್ಮಗಳ ಜನರ ಕಷ್ಟ – ದುಃಖಗಳಿಗೆ ಕ್ಷಣಮಾತ್ರದಲ್ಲಿ ಪರಿಹಾರ ಸೂಚಿಸಿ ಸನ್ಮಂಗಳವನ್ನುಂಟುಮಾಡುವ  ಮಂಗಲಾಂಭಿಕೆಯಾಗಿದ್ದಾಳೆ.kapudappe mariyamma devig suggi jatreda sambhrama-naadleಗದ್ದಿಗೆ ಪೂಜೆ ಪ್ರಧಾನವಾಗಿರುವ ಮಾರಿಯಮ್ಮಳ ಸನ್ನಿಧಾನದಲ್ಲಿ ಕುಂಕುಮಾರ್ಚನೆ ಹೂವಿನ ಪೂಜೆ ಮುಂತಾದ ಸೇವೆಗಳು ಆಪಾರ ಸಂಖ್ಯೆಯಲ್ಲಿ ನಡೆಯುತ್ತದೆ. ಸಮಾಜದ ಎಲ್ಲಾ ವರ್ಗದ ಜನರು ಮಾರಿಕಾಂಬೆಯ ಸನ್ನಿಧಿಯಲ್ಲಿ ಪ್ರತಿ ಮಂಗಳವಾರ ನಡೆಯುವ ಅನ್ನಸಂತರ್ಪಣೆಯಲ್ಲಿ ಸಹಸ್ರ- ಸಹಸ್ರ ಸಂಖ್ಯೆಯಲ್ಲಿ ಭಕ್ತರು ಭಾವುಕರಾಗಿ ಪಾಲ್ಗೊಳ್ಳುತ್ತಾರೆ. ಮಾರಿಯಮ್ಮನ ಸನ್ನಿಧಾನದಲ್ಲಿ ವರ್ಷಕ್ಕೆ 3ಬಾರಿ ನಡೆಯುವ ಕಾಲಾವಧಿ ಮಾರಿಪೂಜೆಯು ಪರಶುರಾಮ ಸೃಷ್ಟಿಯ ತುಳುನಾಡಿನ 7 ಪ್ರಸಿದ್ಧ ಜಾತ್ರೆಗಳಲ್ಲಿ ಒಂದು ಎಂಬ ಖ್ಯಾತಿಯನ್ನು ಪಡೆದಿದೆ. ಸುಗ್ಗಿ, ಆಟಿ, ಜಾರ್ದೆ ಹೀಗೆ 3 ಬಾರಿ ನಡೆಯುವ ಕಾಲಾವಧಿ ಮಾರಿಪೂಜೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಮತ್ತು ಮಲೆನಾಡು ಜಿಲ್ಲೆಗಳು ಮಾತ್ರವಲ್ಲದೆ, ದೂರದ ಮುಂಬಯಿಯಿಂದಲೂ ಜನ ಸಾಗರವೇ ಹರಿದು ಬರುತ್ತದೆ.
naadle If you like this article, click on the button below

Offers

Want to Add your Offers, contact Naadle at 9035030300 or Email us at info@naadle.com