ಈ ವರ್ಷದ ಮಂಗಳೂರು ದಸರಾದ ಶೋಭಾಯಾತ್ರೆಯಲ್ಲಿ ನೀವು ಊಹಿಸಲಾಗದಂತಹ ಒಂದು ಟ್ಯಾಬ್ಲೊ!!!

Share This:

ಮಂಗಳೂರು ದಸರ , ಎಷ್ಟೊಂದು ಸುಂದರ…

ಹೌದು, ಮಂಗಳೂರು ದಸರದ ಅಂದ ಹೆಚ್ಚಿಸಲು , ಶೋಭಾಯಾತ್ರೆಯ ಶೋಭೆ ಯನ್ನು ಹೆಚ್ಚಿಸಲು ಹಲವಾರು ವೈವಿಧ್ಯಮಯ ಟ್ಯಾಬ್ಲೊಗಳನ್ನು ಸಿದ್ದಪಡಿಸಿ ಪ್ರದರ್ಶಿಸುತ್ತಾರೆ. ಅದರಲ್ಲಿ ಖ್ಯಾತಿ ಪಡೆದಿರುವವರು ಬರ್ಕೆ ಫ್ರೆಂಡ್ಸ್. ಕಳೆದ ವರ್ಷ ಅವರು ಹಾಲಿವುಡ್ ಖ್ಯಾತಿಯ ಕಿಂಗ್ ಕಾಂಗ್, 2015ರಲ್ಲಿ ಬಾಹುಬಲಿ ಚಿತ್ರದ ಕಾಲೆಕೇಯ ಟ್ಯಾಬ್ಲೊ ಪ್ರದರ್ಶಿಸಿದ್ದರು. ಇದರ ಹಿಂದೆ ಇರುವ ವ್ಯಕ್ತಿ ಯಾರೆಂದರೆ, ಮಂಗಳೂರಿನಲ್ಲಿ ಪ್ರಖ್ಯಾತ ಪಡೆದಿರುವ ಬ್ಲಾಕ್ ರಾಕ್ ಬೌನ್ಸರ್ ತಂಡದ ಮಾಲೀಕ ಹಾಗು ರಾಕ್ ಜಿಮ್ ನ ಸ್ಥಾಪಕರಾಗಿರುವ ದೀಪಕ್ ಶೆಟ್ಟಿ. ಕಳೆದ 2 ವರ್ಷಗಳಿಂದ ದಸರಾ ಶೋಭಾಯಾತ್ರೆಯಲ್ಲಿ ಅವರ ಸೃಜನಶೀಲ ಟ್ಯಾಬ್ಲೋದೊಂದಿಗೆ ಅವರು ಜನಮೆಚ್ಚುಗೆ ಪಡೆದಿದ್ದಾರೆ. ಈಗ ಅವರು ಎಷ್ಟು ಯಶಸ್ವಿಯಾಗಿದ್ದಾರೆ ಎಂದು ಅಲ್ಲರಿಗೂ ತಿಳಿದಿರುವ ವಿಷಯ, ಆದರೆ ಅವರು ಬೆಳೆದು ಬಂದ ದಾರಿಯ ಬಗ್ಗೆ ಕೆಲವರಿಗಷ್ಟೇ ಗೊತ್ತು. ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದು, ಜೀವನದಲ್ಲಿ ಏರಿಳಿತಗಳನ್ನು ಕಂಡರೂ ಅವರು ಭರವಸೆ ಕಳೆದುಕೊಂಡಿಲ್ಲ. ಅವರ ಆತ್ಮವಿಶ್ವಾಸ ಮತ್ತು ಸಮರ್ಪಣೆಯಿಂದಾಗಿ ಮಂಗಳೂರಿನಲ್ಲಿ ಅವರು ಹೆಸರು ಪಡೆಯುವಂತಾಯಿತು.

ಈ ವರ್ಷ ಅವರು ಯಾವ ಪರಿಕಲ್ಪನೆಯೊಂದಿಗೆ ಟ್ಯಾಬ್ಲೊ ಪ್ರದರ್ಶಿಸುತ್ತಾರೆ ಎಂದು ನೋಡಲು ಪ್ರತಿಯೊಬ್ಬರೂ ಉತ್ಸುಕರಾಗಿದ್ದಾರೆ. ನಾವು ದೀಪಕ್ ಶೆಟ್ಟಿ ಅವರನ್ನು ಸಂಪರ್ಕಿಸಿ ಈ ವರ್ಷದ ದಸಾರದಲ್ಲಿ ಏನಿದೆ ಎಂದು ತಿಳಿದಾಗ ನಮಗೆ ಅನಿಸಿದ್ದು, ಮಂಗಳೂರಿನ ಜನತೆಗೆ ಇದು ದೊಡ್ಡ ಆಶ್ಚರ್ಯಕರವಾದ ಟ್ಯಾಬ್ಲೊ ಎಂದು!!! ಈ ವರ್ಷ ಬರ್ಕೆ ಫ್ರೆಂಡ್ಸ್ ನ 25ನೇ ವರ್ಷವಾಗಿರುವುದರಿಂದ ಅವರು ಕುತೂಹಲ ಮೂಡಿಸುವಂತಹ ಟ್ಯಾಬ್ಲೋ ಸಿದ್ಧ ಪಡಿಸುವುದು ಖಂಡಿತ!!!

2015ರಲ್ಲಿ ಮಂಗಳೂರು ದಸರಾದಲ್ಲಿ ಕಾಲೆಕೇಯನ ಟ್ಯಾಬ್ಲೊ ನೋಡಿದಾಗ, ಆ ತಂಡವು ಆಂಧ್ರಪ್ರದೇಶದಿಂದ ಬಂದದ್ದು ಎಂಬ ಗಾಳಿ ಸುದ್ದಿ ಹಬ್ಬಿತ್ತು. ಆದರೆ ಆ ಕಾಲೆಕೇಯನ ಹಿಂದೆ ಇದ್ದ ವ್ಯಕ್ತಿ ಮಂಗಳೂರಿನವರೇ ಆದ ದೀಪಕ್ ಶೆಟ್ಟಿ ಎಂದು ಯಾರಿಗೂ ತಿಳಿದಿರಲಿಲ್ಲ. ಅವರ ಅಭಿನಯ, ವೇಷ ಭೂಷಣ, ದೇಹ ಭಾಷೆ ಎಲ್ಲವೂ ಬಾಹುಬಲಿ 1 ಚಿತ್ರದ ಕಾಲೆಕೇಯನನ್ನು ಹೋಲುತ್ತಿತ್ತು. ಅವರು ಕಣ್ಣಿಗೆ ಬಳಸಿದ ಲೆನ್ಸ್ ಕೇವಲ 6 ಘಂಟೆ ಬಳಸುವಂತೆ ವೈದ್ಯರು ಸೂಚಿಸಿದ್ದರು, ಆದರೆ ಹ್ಯಾಲೋಜೆನ್ ಬೆಳಕಿನ ಎದುರು ಅವರು 11 ಘಂಟೆಗಳ ಕಾಲ ಅದನ್ನು ಬಳಸಿದ್ದರು. ಅದೇ ರೀತಿ 2016ರ ಮಂಗಳೂರು ದಸರಾದಲ್ಲಿ ನಾವು ಕಂಡದ್ದು ಹಾಲಿವುಡ್ ಖ್ಯಾತಿಯ ಕಿಂಗ್ ಕಾಂಗ್. ಇದು ಅವರಿಗೆ ಒಂದು ದೊಡ್ಡ ಸವಲಾಗಿತ್ತು, ಅದರ ಭಾರ 30 ಕೆ.ಜಿ ವರೆಗಿದ್ದು, ಮಳೆಯಿಂದಾಗಿ ಅದು ಸರಿಸುಮಾರು 40 ಕೆ.ಜಿ. ವರೆಗೇರಿತ್ತು. ಇದರ ಖರ್ಚು 6 ಲಕ್ಷದವರೆಗೆ ಆಗಿತ್ತು, ಈ ವರ್ಷ ಕೂಡ ದೊಡ್ಡ ಬಜೆಟ್ ನ ಟ್ಯಾಬ್ಲೊ ಸಿದ್ಧಪಡಿಸುತ್ತಿದ್ದಾರೆ.

ಬರ್ಕೆ ಫ್ರೆಂಡ್ಸ್ ನ ಸ್ಥಾಪಕರಾಗಿರುವ ಯಜ್ಞೇಶ್ವರ ಶೆಟ್ಟಿಯವರು ಇವರಿಗೆ ಟ್ಯಾಬ್ಲೊ ಸಿದ್ಧಪಡಿಸುವಲ್ಲಿ ತುಂಬಾ ಸಹಾಯ ಮಾಡಿದ್ದಾರೆ. ಯಜ್ಞೇಶ್ವರ ಶೆಟ್ಟಿಯವರು ತಮ್ಮ ಪರಿಕಲ್ಪನೆಯ ಆಲೋಚನೆಗಳನ್ನು ಕಾರ್ಯಗತಗೊಳಿಸಲು ಒಂದು ತಂಡದ ಹುಡುಕಾಟದಲ್ಲಿರುವ ಸಮಯದಲ್ಲೇ, ದೀಪಕ್ ಅವರ ಸ್ನೇಹಿತರೊಬ್ಬರು ಯಜ್ಞೇಶ್ವರ ಶೆಟ್ಟಿಯವರನ್ನು ಭೇಟಿಯಾಗಲು ಸೂಚಿಸಿದರು. ದೀಪಕ್ ಅವರು ಯಜ್ಞೇಶ್ವರ್ ಅವರನ್ನು ಸಂಪರ್ಕಿಸಿದರು ಮತ್ತು ತಮ್ಮಲ್ಲಿದ್ದ ಕಲ್ಪನೆಗಳನ್ನೂ ಅವರಿಗೆ ವಿವರಿಸಿದರು. ದೀಪಕ್ ಮತ್ತು ಯಜ್ಞೇಶ್ವರ್ ಒಟ್ಟಾಗಿ ಚರ್ಚಿಸಿ ತಮ್ಮಿಬ್ಬರ ಪರಿಕಲ್ಪನೆಯ ಟ್ಯಾಬ್ಲೊ ರೂಪಿಸುವಲ್ಲಿ ಯಶಸ್ವಿಗೊಂಡರು. ಮೂಡುಬಿದಿರೆ, ಕೃಷ್ಣಾಪುರ, ಮಂಗಳೂರು, ಉಡುಪಿ, ಬಂಟ್ವಾಳ, ಕಾರ್ಕಳ, ಮಂಗಳದೇವಿ ಮುಂತಾದ ಸ್ಥಳಗಳಲ್ಲಿ ಪ್ರದರ್ಶನ ನೀಡಿದ್ದಾರೆ.  ಟ್ಯಾಬ್ಲೊದಲ್ಲಿ ಅಭಿನಯಿಸುವುದರಿಂದ ತಮ್ಮ ಪ್ರತಿಷ್ಠೆ ಎಲ್ಲಿ ಕಡಿಮೆಯಾಗುತ್ತೋ, ರಸ್ತೆಯಲ್ಲಿ ಮೆರವಣಿಗೆ ಹೋಗುವುದರಿಂದ ಅವಮಾನವಾಗುತ್ತೋ ಎಂದು ಯೋಚಿಸಿ ಆರಂಭದಲ್ಲಿ ಯಾರೂ ಕೂಡ ಅವರಿಗೆ ಸಹಕಾರ ನೀಡಿರಲಿಲ್ಲ, ಆದರೆ ಮೊದಲ ವರ್ಷದ ಟ್ಯಾಬ್ಲೊದ ಯಶಸ್ಸಿನ ನಂತರ ಮಂಗಳೂರಿನಲ್ಲಿ ಇದೊಂದು ಪ್ರವೃತ್ತಿಯಾಗಿ ಬದಲಾಗಿದ್ದು, ಈಗ ಎಲ್ಲರೂ ಟ್ಯಾಬ್ಲೊದಲ್ಲಿ ಭಾಗವಹಿಸುವ ಅವಕಾಶ ಕೋರುತ್ತಿದ್ದಾರೆ ಹಾಗೆ ಕಲಾವಿದರನ್ನು ಹೊಂದುವಲ್ಲಿ ಯಾವುದೇ ಕಷ್ಟವಿಲ್ಲ ಎನ್ನುತ್ತಾರೆ. ಕಷ್ಟಕಾಲದಲ್ಲಿ ಅವರಿಗೆ ಸಹಕರಿಸಿದ ಕಲಾವಿದರಿಗೆ ಈಗಲೂ ಮೊದಲ ಆಧ್ಯತೆ ನೀಡುತ್ತಾರೆ.

ತನ್ನ ಕಾಲೇಜ್ ದಿನಗಳಲ್ಲಿಯೇ ಅವರಿಗೆ ಜಿಮ್ ಕಡೆಗೆ ಆಸಕ್ತಿಯಿತ್ತು.  ಯುವಕರು ತಮ್ಮ ಕ್ಲಾಸ್ ತಪ್ಪಿಸಿ ಎಲ್ಲೆಲ್ಲಿ ತಿರುಗಾಡಲು ಹೋಗುವುದು ತುಂಬಾ ಸಾಮಾನ್ಯವಾಗಿದೆ, ಆದರೆ ದೀಪಕ್ ಶೆಟ್ಟಿಯವರು ಕ್ಲಾಸ್ ತಪ್ಪಿಸಿ ಹೋಗುತ್ತಿದ್ದದ್ದು ಜಿಮ್ ಕಡೆಗೆ. ಬೇರೆಯವರಂತೆ ತಮ್ಮ ಪದವಿ ಮುಗಿಸಿದ ನಂತರ ಅವರು ಕೆಲಸ ಹುಡುಕುವುದಕ್ಕೆ ಹೋಗಲಿಲ್ಲ. 2003ರಲ್ಲಿ ಜಿಮ್ ನಲ್ಲಿ ಕೋಚ್ ಆಗಿ ಸೇರಿ 2008ರವರೆಗೆ ಉದ್ಯೋಗ ನಿರ್ವಹಿಸಿದರು. ಈ ಸಮಯದಲ್ಲಿ ಅವರು ತಿಂಗಳಿಗೆ ಕೇವಲ 1,000ರೂ. ಪಡೆಯುತ್ತಿದ್ದರು.  ‘ಇಷ್ಟು ವರ್ಷವಾದರು ಅದೇ ಕೆಲಸಕ್ಕೆ ಅಂಟಿಕೊಂಡಿದ್ದೀಯವಲ್ಲಾ, ಅದು ನಿನ್ನ ಊಟಕ್ಕೂ ಸಾಕಾಗುವುದಿಲ್ಲ, ನಿನಗೆ ಸರಿಯಾದ ವೃತ್ತಿಯಲ್ಲ’ ಎಂದು ಹೆಚ್ಚಿನವರು ಅವರನ್ನು ಟೀಕಿಸುತ್ತಿದ್ದರು. ಆದರೆ ಅವರು ಯಾವತ್ತೂ ಭರವಸೆ ಕಳೆದುಕೊಂಡಿಲ್ಲ ಅವರ ಮನಸ್ಸು ಸೂಚಿಸಿದ್ದನ್ನು ಮುಂದುವರಿಸಿದರು.

ಇಷ್ಟೆಲ್ಲಾ ಕಷ್ಟ ಎದುರಿಸಿದ ನಂತರ, ಒಂದು ಒಳ್ಳೆ ಸಮಯ ಬಂದೇ ಬಿಟ್ಟಿತ್ತು ನೋಡಿ. ಮಂಗಳೂರಿನಲ್ಲಿ ಒಂದು ಜಿಮ್ ಮಾರಾಟಕ್ಕಿದೆ ಎಂದು ಅವರ ಗೆಳೆಯ ನಾಸಿರ್ ಅವರಿಗೆ ಸೂಚಿಸಿದರು. ಜಿಮ್ ಉಪಕರಣಗಳನ್ನು ಖರೀದಿಸಿ ಜಿಮ್ ಸ್ಥಾಪಿಸಲು ಯೋಚಿಸಿದರು, ಆದರೆ ಸರಿಯಾದ ಜಾಗ ಇರಲಿಲ್ಲ. ಈ ಸಮಯದಲ್ಲಿ ಅವರ ಮಾವ ಜಗದೀಶ್ ಶೆಟ್ಟಿಯವರು ಅವರ ಪೂರ್ವಜರ ಮನೆಯನ್ನು ಅವರಿಗೆ ನೀಡಿ ಜಿಮ್ ಪ್ರಾರಂಭ ಮಾಡಲು ಸಹಕರಿಸಿದರು.ಅವರು ಹಳೆಯ ಮನೆಯನ್ನು ನವೀಕರಿಸಿ ಜಿಮ್ ಅನ್ನು ಪ್ರಾರಂಭಿಸಿದರು. ಅವರ ಜಿಮ್ ನಗರದಿಂದ ದೂರವಿದ್ದರೂ, ಮಂಗಳೂರು ಹಾಗು ಸುರತ್ಕಲ್ ನ ಅತೀ ಹೆಚ್ಚು ಜನರು ಇಲ್ಲಿಗೆ ಬರುತ್ತಾರೆ. ರಾಕ್ ಜಿಮ್ ಪ್ರಾರಂಭಿಸಿ 10 ವರ್ಷ ಕಳೆಯಿತು.

ಬ್ಲಾಕ್ ರಾಕ್ ಬೌನ್ಸರ್ ತಂಡ ಸ್ಥಾಪಿಸಿ 8 ವರ್ಷವಾಯಿತು. ಇದು ಅವಮಾನಕರ ಎಂದು ಯೋಚಿಸಿ ಪ್ರಾರಂಭದಲ್ಲಿ ಇದಕ್ಕೂ ಕೂಡ ಯಾರೂ ಸಹಕರಿಸಲಿಲ್ಲ. ಇದನ್ನೂ ಕೂಡ ಪ್ರವೃತ್ತಿಯಾಗಿ ಬದಲಾಯಿಸಿದವರು ದೀಪಕ್ ಶೆಟ್ಟಿ. ಈಗ ಇದರಲ್ಲೂ ಎಲ್ಲರಿಗೂ ಆಸಕ್ತಿ ಹೊಂದ್ದಿದ್ದು ತಮಗೆ ಅವಕಾಶ ನೀಡುವಂತೆ ಕೋರುತ್ತಾರೆ. ಸಂತ ಜೋಸೆಫ್ ಕಾಲೇಜಿನಲ್ಲಿ ಶಿಲ್ಪಾ ಶೆಟ್ಟಿಯವರ ಸಂಭಂದಿಕರೊಬ್ಬರು ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ದೀಪಕ್ ಶೆಟ್ಟಿಯವರನ್ನು ಬೌನ್ಸರ್ ಆಗಿ ಆಹ್ವಾನಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಅವರಿಗೆ ಬೌನ್ಸರ್ ತಂಡ ಸ್ಥಾಪಿಸುವ ಕಲ್ಪನೆ ಮೂಡಿತು. ಸ್ಥಾಪಿಸಿದ ಪ್ರಾರಂಭದಲ್ಲಿ ಕೇವಲ 2 ರಿಂದ 3 ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಿದ್ದರು. ಈವರೆಗೆ 250ಕ್ಕಿಂತಲೂ ಹೆಚ್ಚು ಕಾರ್ಯಕ್ರಮದಲ್ಲಿ ಬೌನ್ಸರಾಗಿ ಭಾಗವಹಿಸಿದ್ದಾರೆ. ಈಗ ಅವರು ಯಾವುದೇ ರೀತಿಯ ಗುಂಪನ್ನು ನಿಭಾಯಿಸಬಲ್ಲ ಪ್ರಭಲ ತಂಡವನ್ನು ಹೊಂದಿದ್ದಾರೆ. ಈಗ ಮಂಗಳೂರಿನಲ್ಲಿ ಸೆಲಬ್ರಿಟಿಗಳನ್ನು ನಿಭಾಯಿಸುವ ಅನೇಕ ಬೌನ್ಸರ್ ತಂಡಗಳಿದ್ದರೂ ಕೂಡ ಕಾರ್ಯಕ್ರಮ ಆಯೋಜಿಸುವ ಸಂಘಟಕರು ಮೊದಲಿಗೆ ಬ್ಲಾಕ್ ರಾಕ್ ಬೌನ್ಸರ್ ತಂಡವನ್ನು ಸಂಪರ್ಕಿಸುತ್ತಾರೆ. ಕ್ರಿಸ್ ಗೇಲ್, ಜೋಂಟಿ ರೋಡ್ಸ್, ಸುನಿಲ್ ಶೆಟ್ಟಿ, ಹರ್ಭಜನ್ ಸಿಂಗ್, ಸೋನು ಸೂದ್, ಸಲೀಮ್-ಸುಲೈಮಾನ್, ಕುನಾಲ್ ಗಾಂಜವಾಲ, ಜಾನ್ ಅಬ್ರಹಮ್, ಸುದೀಪ್, ಶ್ರೀ ಮುರಳಿ, ಗಣೇಶ್, ರಾಗಿನಿ, ರಮ್ಯ, ಐಂದ್ರಿತಾ ರೇ ಹಾಗು ಇನ್ನಿತರರಿಗೆ ಬೌನ್ಸರ್ ಆಗಿ ಕೆಲಸ ನಿರ್ವಹಿಸಿದ್ದರು. ಈ ಎಲ್ಲಾ ಸೆಲಬ್ರಿಟಿಯವರೊಂದಿಗಿನ ಅನುಭವ ಹೇಳುವುದಾದರೆ, ಶ್ರೀ ಮುರಳಿಯವರು ಒಬ್ಬ ಸಾಮಾನ್ಯ ಗೆಳೆಯನಂತೆ ಇದ್ದು, ನಮ್ಮೊಂದಿಗೆ ಊಟ ಮಾಡಿ, ಸ್ಥಳೀಯ ಸ್ಥಳಗಳಿಗೆ ಭೇಟಿ ನೀಡಿದ್ದೆವು. ಬೇರೆ ಸೆಲಬ್ರಿಟಿಯವರು ಕೂಡಾ ತುಂಬಾ ಆತ್ಮೀಯವಾಗಿ ನಮ್ಮೊಂದಿಗೆ ಬೆರೆಯುತ್ತಿದ್ದರು. ಸಾರ್ವಜನಿಕರನ್ನು ಯಾವಾಗಲೂ ಕಾಳಜಿಯಿಂದ ಮತ್ತು ಸಭ್ಯತೆಯೊಂದಿಗೆ ನಿರ್ವಹಿಸಲು ತಮ್ಮ ತಂಡವನ್ನು ಸೂಚಿಸುತ್ತಿದ್ದರು.

ದೀಪಕ್ ಶೆಟ್ಟಿಯವರು ಇಲ್ಲಿಯವರೆ ಸುಮಾರು 12 ಚಿತ್ರಗಳಲ್ಲಿ ಕಳನಾಯಕನಾಗಿ ಅಭಿನಯಿಸಿದ್ದಾರೆ. ಮುಂಬರುವ ಹಿಂದಿ ಚಿತ್ರ ಗಂಧದ ಗುಡಿಯಲ್ಲಿ  ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಅದೇ ರೀತಿ ಜಾನಿ, ಬರ್ಸ, ಜುಗಾರಿ ಮುಂತಾದ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಪ್ರಮುಖ ಖಳನಾಯಕನಾಗಿ ಕಾಣಿಸಿಕೊಳ್ಳಬೇಕೆಂದು ಇವರ ಕನಸಾಗಿದೆ. ಜಿಮ್ ಸ್ಥಾಪಿಸಲು ಯೋಚಿಸುತ್ತಿರುವ ಯುವಕರನ್ನು ಅವರು ತಮ್ಮ ನುಡಿಗಳಿಂದ ಪ್ರೇರೇಪಿಸಿದರು, “ಜಿಮ್ ನ ಯಶಸ್ಸು ತರಬೇತುದಾರರನ್ನು ಅವಲಂಭಿಸುತ್ತದೆ. ನೀವು ಉತ್ತಮ ರೀತಿಯಲ್ಲಿ ತರಬೇತಿ ನೀಡಿದರೆ, ಜನರು ನಿಮ್ಮ ಜಿಮ್ ಹುಡುಕಿಕೊಂಡು ಬರುತ್ತಾರೆ”

ಜಿಮ್ ಅನ್ನು ಶೈಕ್ಷಣಿಕ ಕ್ಷೇತ್ರದಲ್ಲೂ ಸೇರಿಸಿಕೊಳ್ಳಬೇಕು ಎಂಬುವುದು ಅವರ ವೈಯಕ್ತಿಕ ಭಾವನೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ದಿನನಿತ್ಯ ಎಲ್ಲಾ ಯುವಕರು ಕನಿಷ್ಠ ಅರ್ಧ ಘಂಟೆಯಾದರು ಜಿಮ್ಗೆ ಹೋಗಬೇಕು ಎಂಬ ಸಂದೇಶ ನೀಡಿದರು. ಇದರಿಂದ ಮತ್ತೊಂದು ಲಾಭವೇನೆಂದರೆ, ನಿಮ್ಮ ಪದವಿ ಮುಗಿದ ನಂತರ ನೀವು ಕೆಲಸ ಸಿಗದ್ದಿದ್ದರೆ, ನೀವು ಜಿಮ್ ತರಬೇತುದಾರರಾಗಿ ಕೆಲಸ ನಿರ್ವಹಿಸಬಹುದು. ಜಿಮ್ ಗಳು ಬಹಳಷ್ಟು ಇದೆ, ಆದರೆ ತರಬೇತುದಾರರ ಸಂಖ್ಯೆ ಕಡಿಮೆ ಇದೆ. ಕೆಲಸದ ಅವಶ್ಯಕತೆ ಇರುವವರಿಗೆ ಇದೊಂದು ಅದ್ಭುತ ಅವಕಾಶ.

ನಾಡ್ಲೆ ತಂಡದೊಂದಿಗೆ ತನ್ನ ಜೀವನ ಪ್ರಯಾಣವನ್ನು ಹಂಚಿಕೊಂಡಿದ್ದಕ್ಕಾಗಿ ದೀಪಕ್ ಶೆಟ್ಟಿ ಅವರಿಗೆ ಧನ್ಯವಾದಗಳು. ನಿಮ್ಮೊಂದಿಗಿನ ಸಂಭಾಷಣೆ ಬಹಳ ಸ್ಪೂರ್ತಿದಾಯಕ ಮತ್ತು ಪ್ರೇರಣೆಯಾಗಿತ್ತು. ಮುಂಬರುವ ದಿನಗಳಲ್ಲಿ ಪ್ರಮುಖ ಖಳನಾಯಕ ಪಾತ್ರಗಳಲ್ಲಿ ನಿಮ್ಮನ್ನು ನೋಡಲು ನಾವು ಬಯಸುತ್ತೇವೆ. ನೀವು ಯುವಕರಿಗೆ ಅತ್ಯುತ್ತಮ ಉದಾಹರಣೆಯಾಗಿದ್ದೀರ. ಅಸಾಧ್ಯವಾದದ್ದು ಯಾವುದು ಇಲ್ಲ!!! ನೀವು ನಿಮ್ಮ ಗುರಿ ಮುಟ್ಟಲು ದೃಢವಾದ ನಿರ್ಣಯ ಅಗತ್ಯವಿರುತ್ತದೆ !!

To follow Deepak Shetty log in to facebook: https://www.facebook.com/Rockgymmangaluru/

For English version click on the link: http://blog.naadle.com/do-you-know-face-behind-king-kong-and-kalakeyas-of-dasara/

naadleIf you like this article, click on the button below