ಸಸ್ಯಹಾರಿಗಳೇ, ಚೀಸ್ ತಯಾರಿಸುವ ವಿಧಾನದ ಬಗೆ ನಿಮಗೆ ತಿಳಿದಿದೆಯೇ?

Share This:

ಯಾರಿಗೆ ಚೀಸ್ ಅಂದ್ರೆ ಇಷ್ಟವಿಲ್ಲ ಹೇಳಿ. ನಾವು ತಿನ್ನುವಂತಹ ತಿಂಡಿ ತಿನಸುಗಳಲ್ಲಿ ಹೆಚ್ಚು ಚೀಸ್ ಅನ್ನು ಅಪೇಕ್ಷಿಸುತ್ತೇವೆ. ಪೀಜಾ ಮತ್ತು ಬರ್ಗರ್ ಅನ್ನು ಹೆಚ್ಚು ರುಚಿಕರಗೊಳಿಸುವ ಪ್ರಮುಖ ಸಾಮಾಗ್ರಿ ಅಂದರೆ ಚೀಸ್. ಹಾಗಾದರೆ ಈ ಚೀಸ್ ಅನ್ನು ತಯಾರಿಸುವುದು ಹೇಗೆ ಎಂದು ತಿಳಿದ್ದಿದ್ದೀರಾ?

ಚೀಸ್ ಅನ್ನು ಹಾಲಿನಿಂದ ತಯಾರಿಸಲಾಗುತ್ತದೆ. ಮೊದಲಿಗೆ ಅದನ್ನು ಆಮ್ಲೀಕೃತಗೊಳಿಸಿ, ಕಿಣ್ವ ರೆನ್ನೆಟ್ ಅನ್ನು ಹಾಕುವುದರಿಂದ ಹಾಲಿನಲ್ಲಿ ಇರುವ ಪ್ರೊಟೀನ್ಗಳು ಮೊಸರಾಗಿ ಪರಿವರ್ತನೆಗೊಳ್ಳುತ್ತದೆ. ವಿವಿಧ ಬಗೆಯ ಚೀಸ್ ತಯಾರಿಸುವಾಗ ಬಳಸುವ ರೆನ್ನೆಟ್ ನ ಪ್ರಮಾನವು, ನಿರ್ಧಿಷ್ಟ ಚೀಸ್ಗೆ ಬೇಕಾದಂತೆ ಬದಲಾಗುತ್ತದೆ. ಇದರಿಂದ ಹೊರಬರುವ ಗಟ್ಟಿ ಪದಾರ್ಥವನ್ನು ಪ್ರತ್ಯೇಕಗೊಳಿಸಿದರೆ ಚೀಸ್ ತಯಾರಿಕೆಯಾಗುತ್ತದೆ.

ಈಗ ನಮ್ಮ ಮನಸ್ಸಿನಲ್ಲಿ ಮೂಡುವ ಪ್ರಶ್ನೆ ಏನಂದರೆ, ಈ ಕಿಣ್ವ ರೆನ್ನೆಟ್ ಎಂದರೇನು? ಸಂಕ್ಷಿಪ್ತವಾದ ವಿವರ ಇಲ್ಲಿದೆ ನೋಡಿ.
ಕಿಣ್ವ ರೆನ್ನೆಟ್ (ಮೊಲೆಯುಣ್ಣುವ ಕರುವಿನ ಜಠರದ ಪೊರೆಯಿಂದ ಚೀಸ್ ತಯಾರಿಸಲು ಬಳಸುವ ವಿಶಿಷ್ಟ ಪದಾರ್ಥ) ಎಂದರೆ ಕರುಗಳು, ಕುರಿಮರಿ ಅಥವಾ ಆಡು ಮರಿಯ ಹೊಟ್ಟೆಯಿಂದ ಪಡೆದ ಒಂದು ಕಿಣ್ವವಾಗಿದೆ. ರೆನ್ನೆಟ್ ನಲ್ಲಿ ಒಂದು ಕಿಣ್ವ ಹೊಂದಿದ್ದು, ಇದು ಹಾಲು ಚೀಸ್ ಆಗಲು ಕಾರಣವಾಗುತ್ತದೆ. ವಿವಿಧ ಪ್ರಾಣಿಯ ರೆನ್ನೆಟ್ ಬಳಸಿ ಬಗೆ ಬಗೆಯ ಚೀಸ್ ತಯಾರಿಸಲಾಗುತ್ತದೆ. ಕರುವಿನ ಜಠರದ ಒಳಗಿನ ಲೋಳೆಪೊರೆಯಿಂದ ರೆನ್ನೆಟ್ ಅನ್ನು ಹೊರತೆಗೆಯಲಾಗುತ್ತದೆ. ಹಳೆಯ ಮರಿಗಳಿಂದ ರೆನ್ನೆಟ್ ಅನ್ನು ಹೊರತೆಗೆದರೆ, ಅದರಲ್ಲಿ ಚಿಮೋಸಿನ್ ನ ಅಂಶ ಕಡಿಮೆ ಇರುತ್ತದೆ, ಆದರೆ ಉನ್ನತ ಮಟ್ಟದ ಪೆಪ್ಸಿನ್ ಅನ್ನು ಪಡೆಯಬಹುದು. ಇದರಿಂದ ವಿವಿಧ ಬಗೆಯ ವಿಶೇಷ ಚೀಸ್ ಅನ್ನು ತಯಾರಿಸಬಹುದು.

ಸಾಂಪ್ರದಾಯಿಕವಾಗಿ ಅನುಸರಿಸಿದ ಒಂದು ವಿಧಾನದಲ್ಲಿ ಅವರು, ಒಣಗಿಸಿ ಸ್ವಚ್ಛಗೊಳಿಸಿದ ಕರುಗಳ ಜಠರವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ನಂತರ ವಿನೆಗರ್ ಅಥವಾ ವೈನ್ ಮಿಶ್ರಿತ ಉಪ್ಪು ನೀರಿನಲ್ಲಿ ಹಾಕಿ ಕೆಲ ಹೊತ್ತು ಇಡುತ್ತಿದ್ದರು. ಸ್ವಲ್ಪ ಸಮಯದ ನಂತರ ಈ ಮಿಶ್ರನವನ್ನು ಫಿಲ್ಟರ್ ಮಾಡಿ, ದ್ರಾವಣದಲ್ಲಿ ಉಳಿದಿರುವ ಕಚ್ಚಾ ರೆನ್ನೆಟ್ ಅನ್ನು ನಂತರ ಹಾಲು ಕುಗ್ಗಿಸಲು ಬಳಸಲಾಗುತ್ತಿತ್ತು. ಸುಮಾರು 1 ಗ್ರಾಂ ನಷ್ಟು ಈ ದ್ರಾವಣ ಮಿಶ್ರನ ಸಾಮಾನ್ಯವಾಗಿ 2 ರಿಂದ 4 ಲೀಟರ್ ಹಾಲನ್ನು ಕುಗ್ಗಿಸಬಹುದು.

ಆಧುನಿಕ ವಿಧಾನದಲ್ಲಿ, ಆಳವಾಗಿ ಹೆಪ್ಪುಗಟ್ಟಿದ ಜಠರವನ್ನು ಕಿಣ್ವ-ಹೊರತೆಗೆಯುವ ದ್ರಾವಣದಲ್ಲಿ ಇಡಲಾಗುತ್ತದೆ. ಆಸಿಡ್ ಸೇರಿಸುವ ಮೂಲಕ ಕಚ್ಚಾ ರೆನ್ನೆಟ್ ಸಾರವನ್ನು ಸಕ್ರಿಯಗೊಳಿಸಲಾಗುತ್ತದೆ. ಹೊಟ್ಟೆಯಲ್ಲಿನ ಕಿಣ್ವಗಳು ನಿಷ್ಕ್ರಿಯ ರೂಪದಲ್ಲಿ ಉತ್ಪತ್ತಿಯಾಗಿದ್ದು ಮತ್ತು ಹೊಟ್ಟೆಯಲ್ಲಿರುವ ಆಸಿಡ್ ನಿಂದಾಗಿ ಸಕ್ರಿಯವಾಗುತ್ತವೆ. ಆಸಿಡನ್ನು ನಂತರ ತಟಸ್ಥಗೊಳಿಸಿ ರೆನ್ನೆಟ್ ಸಾರವನ್ನು ಹಲವಾರು ಹಂತಗಳಲ್ಲಿ ಫಿಲ್ಟರ್ ಮಾಡಿ 1:15 ಅನುಪಾತದಷ್ಟು ನಿರ್ಧಿಷ್ಟ ಶಕ್ತಿಯನ್ನು ತಲುಪುವವರೆಗೆ ಕೇಂದ್ರೀಕೃತಗೊಳಿಸಲಾಗುತ್ತದೆ. ಅಂದರೆ 1 ಕೆ.ಜಿ ರೆನ್ನೆಟ್ ಸಾರ 15 ಲೀಟರ್ ನಷ್ಟು ಹಾಲನ್ನು ಕುಗ್ಗಿಸಬಹುದು.
naadle If you like this article, click on the button below