Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಇಂಗ್ಲಿಷ್ ಕ್ಯಾಲೆಂಡರ್ಗಿಂತಲೂ ಅತೀ ಪ್ರಾಚೀನವಾಗಿದೆ ನಮ್ಮ ತುಳು ಕ್ಯಾಲೆಂಡರ್

Share This:

For English article please click on the link: http://blog.naadle.com/tulu-calenders-emerged-before-english-calenders/

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬಳಸುವ ಸಾಂಪ್ರದಾಯಿಕ ಭಾರತೀಯ ಸೌರ ಕ್ಯಾಲೆಂಡರ್ಗಳಲ್ಲಿ ತುಳು ಕ್ಯಾಲೆಂಡರ್ ಒಂದಾಗಿದೆ. ಹಿಂದೆ ತುಳುವರು ತಮ್ಮದೇ ಆದ ಕ್ಯಾಲೆಂಡರ್ ಅನ್ನು ಅಭಿವೃದ್ಧಿಪಡಿಸಿದ್ದು, ಇದು ತುಳುವ ರಾಜ್ಯ ಮಾತ್ರವಲ್ಲದೆ ಕೇರಳದ ಕೆಲ ಭಾಗಗಳಲ್ಲಿಯೂ ಬಳಸಲ್ಪಡುತ್ತಿತ್ತು ಎಂದು ಹೇಳಲು ಹೆಮ್ಮೆಯಾಗುತ್ತದೆ.

ತುಳು ಭಾಷೆಯಲ್ಲಿ ವರ್ಷವನ್ನು ‘ವರ್ಸ’ ಎಂದು ಕರೆಯಲಾಗುತ್ತದೆ ಮತ್ತು ತುಳು ಕ್ಯಾಲೆಂಡರ್ ಅನ್ನು ಹಳೆಯ ಸೌರ ಭಾರತೀಯ ಕ್ಯಾಲೆಂಡರ್ ಎಂದು ಪರಿಗಣಿಸಲಾಗಿದೆ. ಈ ಕ್ಯಾಲೆಂಡರ್ನಲ್ಲಿ, ಹೊಸ ವರ್ಷ ಅಥವಾ ವರ್ಸದ ಮೊದಲ ದಿನ ‘ಪಗ್ಗು’ ತಿಂಗಳಲ್ಲಿ ಬರುತ್ತದೆ ಮತ್ತು ಆ ದಿನವನ್ನು’ ಬಿಸು ‘ಎಂದು ಕರೆಯುತ್ತಾರೆ (ಏಪ್ರಿಲ್ 14). ಈ ದಿನವನ್ನು ತುಳುನಾಡಿನಲ್ಲಿ ಭಾರೀ ವೈಭವದಿಂದ ಆಚರಿಸಲಾಗುತ್ತದೆ. ‘ಮೇಷ ಸಂಕ್ರಮಣ’ ದಂದು ಈ ಹಬ್ಬವನ್ನು ‘ಬಿಸು ಪರ್ಬಾ’ ಎಂಬ ಹೆಸರಿನಲ್ಲಿ ಆಚರಿಸುತ್ತಾರೆ, ಇದು “ದೀಪಾವಲಿ” ಹಬ್ಬದಷ್ಟೇ ಪ್ರಮುಖವಾದ ಹಬ್ಬ.

ತುಳು ಜನರಿಗೆ ಸಾಂಪ್ರದಾಯಿಕವಾಗಿ ಹನ್ನೆರಡು ತಿಂಗಳಿರುವ ಪ್ರತ್ಯೇಕ ಕ್ಯಾಲೆಂಡರ್ ಇತ್ತು. ಅದರಲ್ಲಿ ಮೊದಲನೇ ತಿಂಗಳಾಗಿ
1.  ಪಗ್ಗು (ಏಪ್ರಿಲ್-ಮೇ): ತುಳು ಕ್ಯಾಲೆಂಡರ್ ’ಪಗ್ಗು’ ತಿಂಗಳಿನಿಂದ ಪ್ರಾರಂಭವಾಗುತ್ತದೆ. ರಾವಣನ ವಿರುದ್ಧ ರಾಮ ಲಕ್ಷ್ಮಣರ ವಿಜಯದ ನೆನಪಿಗಾಗಿ ಮುಂಡ ಬುಡಕಟ್ಟಿನ ಜನರು ಆಚರಿಸುತ್ತಿದ್ದ ವಾರ್ಷಿಕ ಉತ್ಸವವನ್ನು ಪಗ್ಗು ಎನ್ನುತ್ತಾರೆ. ಛೋಟಾನಾಗಪುರ್-ಜಾರ್ಖಂಡ್ ಪ್ರದೇಶದ ಮುಂಡ ಬುಡಕಟ್ಟು ಸಮುದಾಯಗಳು ಇನ್ನೂ ಪಗ್ಗು ಉತ್ಸವವನ್ನು ಆಚರಿಸುತ್ತವೆ. ಈ ಜನರಿಂದ ತುಳು ಜನರು ಪಗ್ಗು ತಿಂಗಳ ಹೆಸರನ್ನು ಪಡೆದುಕೊಂಡಿದ್ದಾರೆ. ಈ ತಿಂಗಳಲ್ಲಿ ಯಕ್ಷಗಾನ, ನೇಮೋತ್ಸವ ಮತ್ತು ದೇವಸ್ಥಾನಗಳ ಉತ್ಸವಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತವೆ.

2. ಬೇಷ್ಯ (ಮೇ-ಜೂನ್): ಬೇಷ್ಯ ತಿಂಗಳಲ್ಲಿ ‘ಪತ್ತನಾಜೆ’ ಅಂದರೆ ಯಕ್ಷಗಾನ, ನೇಮೋತ್ಸವ ಮತ್ತು ದೇವಸ್ಥಾನಗಳ ಉತ್ಸವಗಳಂತಹ ಎಲ್ಲಾ ಮಂಗಳಕರ ಚಟುವಟಿಕೆಗಳು ಕೊನೆಗೊಳ್ಳುತ್ತದೆ . ಪ್ರಮುಖವಾಗಿ ಕೃಷಿ ಚಟುವಟಿಕೆಗಳು ಈ ತಿಂಗಳಲ್ಲಿ ಪ್ರಾರಂಭವಾಗುತ್ತದೆ.

3. ಕಾರ್ತೆಲ್ (ಜೂನ್-ಜುಲೈ): ಈ ತಿಂಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಇದನ್ನು ಹೊರತುಪಡಿಸಿ ಈ ತಿಂಗಳಲ್ಲಿ ಇತರ ಚಟುವಟಿಕೆಗಳನ್ನು ಬಹಳ ಕಡಿಮೆ ಪ್ರಮಾಣದಲ್ಲಿ ನಡೆಸಲಾಗುತ್ತದೆ.

4. ಆಟಿ (ಜುಲೈ-ಆಗಸ್ಟ್): ತುಳುವರು ಆಟಿತಿಂಗಳನ್ನು ಒಂದು ಕಠಿನ ತಿಂಗಳೆಂದು ನಂಬುತ್ತಿದ್ದರು. ಹಾಗಾಗಿ ಆಟಿ ತಿಂಗಳಲ್ಲಿ ಮದುವೆಗಳು, ಗೃಹಪ್ರವೇಶ, ದೇವಸ್ಥಾನಗಳ ಉತ್ಸವಗಳು, ಆಸ್ತಿಯ ಖರೀದಿ, ವಾಹನ ಮತ್ತು ಚಿನ್ನದ ಖರೀದಿ ಈ ತಿಂಗಳಿನಲ್ಲಿ ನಡೆಯುವಂತಿಲ್ಲ.

5. ಸೋನ (ಆಗಸ್ಟ್-ಸೆಪ್ಟೆಂಬರ್): ಈ ಎಲ್ಲಾ ತಿಂಗಳಲ್ಲಿ ’ಸೋನ’ ತಿಂಗಳು ತುಳುನಾಡಿನಲ್ಲಿ ಬಹಳ ಮಜಾ ಮತ್ತು ಸಂತೋಷದ ತಿಂಗಳು. ತುಳುನಾಡಿನ ಪ್ರಕೃತಿ ಆರಾಧಕರು, ಅವರ ಪ್ರತಿ ಆಚರಣೆಯಲ್ಲಿ ಭೂಮಿಯ ಕಡೆಗೆ ಕೃತಜ್ಞತೆ ತೋರಿಸುತ್ತಾರೆ. ತುಳುವಿನಲ್ಲಿ “ಆಟಿ ಆನೆಡ್ ಪೋಪಿನಿ, ಸೋನಾ ಕುದುರೆಡ್ ಪೋಪಿನಿ” ಎಂಬ ಜನಪ್ರಿಯ ನುಡಿಗಟ್ಟು ಇದೆ. ಇದರರ್ಥ ಆಟಿ ತಿಂಗಳು ಆನೆ ಸವಾರಿ ಮಾಡಿದಂತೆ, ಮನೆಯಲ್ಲಿ ಯಾವುದೇ ಕೆಲಸವಿಲ್ಲದೆ ನಿಧಾನವಾಗಿ ಚಲಿಸುತ್ತದೆ, ಮತ್ತು ಸೋನ ತಿಂಗಳು ಕುದುರೆಯ ಮೇಲೆ ಸವಾರಿ ಮಾಡಿದಂತೆ ಅಂದರೆ ಬಹಳ ವೇಗವಾಗಿ ಮುಗಿಯುತ್ತದೆ!. ತುಳುವರಿಗೆ ಸೋನ ತಿಂಗಳಲ್ಲಿ ಮುಖ್ಯವಾದ ಮೊದಲ ಹಬ್ಬ ನಾಗರ ಪಂಚಮಿ. ಸೋನ ಸಂಕ್ರಾಂತಿ ಈ ನಿರ್ದಿಷ್ಟ ತಿಂಗಳಲ್ಲಿ ಗಮನಾರ್ಹವಾಗಿದೆ. ಸಂಕ್ರಾಂತಿ ನಂತರ, ಮೊದಲ ಹುಣ್ಣಿಮೆಯನ್ನು ರಕ್ಷಾ ಬಂಧನ ಎಂದು ಆಚರಿಸಲಾಗುತ್ತದೆ ತದ ನಂತರ ಅಷ್ಟಮಿ ಅಥವಾ ಕೃಷ್ಣ ಜನ್ಮಾಷ್ಟಮಿ ಹೀಗೆ ದೀಪಾವಳಿಯವರೆಗೆ ಬೇರೆ ಬೇರೆ ಹಬ್ಬಗಳನ್ನು ಆಚರಿಸಲಾಗುತ್ತದೆ. ಆಟಿ ತಿಂಗಳಲ್ಲಿ ತನ್ನ ತವರು ಮನೆಗೆ ಬಂದ ಹೊಸ ವಧು, ಸೋನ ತಿಂಗಳಲ್ಲಿ ಗಂಡನ ಮನೆಗೆ ಹಿಂದಿರುಗುತ್ತಾಳೆ.

6. ನಿರ್ನಾಲ (ಸೆಪ್ಟೆಂಬರ್-ಅಕ್ಟೋಬರ್): ಉಡುಪಿ ಮತ್ತು ಕಾರ್ಕಳದ ಸುತ್ತಮುತ್ತಲಿನ ಜನರು ಈ ತಿಂಗಳನ್ನು ಕನ್ಯಾ ಎಂದು ಕರೆಯುತ್ತಾರೆ. ಅಷ್ಟಮಿ ಮತ್ತು ಚೌತಿ ಹಬ್ಬಗಳು ಈ ತಿಂಗಳಲ್ಲಿ ಬರುತ್ತದೆ.

7. ಬೋಂತೆಲ್ (ಅಕ್ಟೋಬರ್-ನವೆಂಬರ್): ಕೊರಲ್ ಪರ್ಬ (ತೆನೆ ಕಟ್ಟುವ ಹಬ್ಬ) ಈ ತಿಂಗಳಿನಲ್ಲಿ ಆಚರಿಸಲಾಗುತ್ತದೆ. ಆ ದಿನ ಮನೆಯಲ್ಲಿ ಹಲವು ಬಗೆಯ ತರಕಾರಿಯ ಅಡುಗೆ ಮಾಡುತ್ತಾರೆ.
ತೆನೆಯನ್ನು ಗದ್ದೆಯಿಂದ ತಂದು ಅದನ್ನು ಬಿದಿರು, ಹಲಸಿನ ಮರ ಮತ್ತು ಮಾವಿನ ಮರದ ಎಲೆಗಳೊಂದಿಗೆ ಸೇರಿಸಿ ಮನೆಗೆ ತಂದು ಕಟ್ಟಲಾಗುತ್ತದೆ. ಇದಕ್ಕೆ ತುಳುವಿನಲ್ಲಿ ’ಇಲ್ಲ್ ದಿಂಜಾವುನು’ (ಮನೆ ತುಂಬಿಸುವುದು) ಎಂದು ಕರೆಯುತ್ತಾರೆ ಅಂದರೆ ಮನೆಯು ಯಾವಾಗಲೂ ಆಹಾರ ಧಾನ್ಯಗಳು ಮತ್ತು ಸಂತೋಷದಿಂದ ತುಂಬಲಿ ಎಂದು ಅರ್ಥ. ಕೊರಲ್ ಪರ್ಬ ಕೃಷಿಗೆ ಸಂಬಂಧಿಸಿದ ಹಬ್ಬ, ಇದು ವಿಭಿನ್ನ ಸಂಸ್ಕೃತಿಯೊಂದಿಗೆ ಎರಡು ವಿಭಿನ್ನ ಧರ್ಮಗಳ ನಡುವಿನ ಸೌಹಾರ್ದತೆಯನ್ನು ತೋರಿಸುತ್ತದೆ.

8. ಜಾರ್ದೆ (ನವೆಂಬರ್-ಡಿಸೆಂಬರ್): ಈ ತಿಂಗಳಿನಲ್ಲಿ ದೀಪಾವಳಿ ಹಾಗು ತುಳಸಿ ಹಬ್ಬ ಆಚರಿಸಲಾಗುತ್ತದೆ. ಪ್ರತಿ ಮನೆಯಲ್ಲಿ ತುಳಸಿ ಗಿಡ ನೆಟ್ಟು ಪೂಜಿಸಲಾಗುತ್ತದೆ, ಇದರಿಂದ ಯಾವುದೇ ರೋಗಗಳು, ಯಮನ ದೂತರು, ಪ್ರವೇಶಿಸುವುದಿಲ್ಲ ಎಂಬ ನಂಬಿಕೆ. ದೇವರ ಕಾರ್ಯದಲ್ಲಿ ತುಳಸಿ ಎಲೆಗಳನ್ನು ಉಪಯೋಗಿಸದ ಅರ್ಪಣೆಗಳು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ತುಳಸಿ ಕಟ್ಟೆಯನ್ನು ವಿವಾಹಿತ ಮಹಿಳೆಯರು ತಮ್ಮ ಸಂತೋಷದ ವಿವಾಹ ಜೀವನಕ್ಕಾಗಿ ಲಕ್ಷ್ಮೀ ದೇವತೆ ಎಂದು ಪೂಜಿಸುತ್ತಾರೆ.

9. ಪೆರಾರ್ದೆ (ಡಿಸೆಂಬರ್-ಜನವರಿ): ಎರಡನೇ ಹಂತದ ಕೃಷಿ ಚಟುವಟಿಕೆಗಳು ಈ ತಿಂಗಳಿನಲ್ಲಿ ಪ್ರಾರಂಭವಾಗುತ್ತದೆ.

10. ಪೊನ್ನಿ / ಪುಯಿಂತೆಲ್ (ಜನವರಿ-ಫೆಬ್ರವರಿ): ಈ ತಿಂಗಳು ಹವಾಮಾನವು ತರಕಾರಿ ಕೃಷಿಗೆ ಸೂಕ್ತವಾಗಿರುವುದರಿಂದ ತರಕಾರಿ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸುತ್ತಾರೆ.

11. ಮಾಯಿ (ಫೆಬ್ರವರಿ-ಮಾರ್ಚ್): ಈ ತಿಂಗಳಿನಲ್ಲಿ ಸಾಂಪ್ರದಾಯಿಕ ಕ್ರೀಡೆಗಳನ್ನು ಆಚರಿಸಲಾಗುವುದು.

12. ಸುಗ್ಗಿ (ಮಾರ್ಚ್-ಏಪ್ರಿಲ್): ಚಂದ್ರಮಾನ ಯುಗಾದಿ ಮತ್ತುಉಪಕರ್ಮ ಕಾರ್ಯಕ್ರಮ ಈ ತಿಂಗಳಲ್ಲಿ ಬರುತ್ತದೆ. ಚಂದ್ರಮಾನ ಯುಗಾದಿ ತುಳುನಾಡಿನ ಜನರಿಗೆ ಹೊಸ ವರ್ಷವೆಂದು ಪರಿಗಣಿಸಲಾಗಿದೆ.

ಎಲ್ಲಾ ಕೃಷಿ ಚಟುವಟಿಕೆಗಳು ಮತ್ತು ಉತ್ಸವಗಳು, ವಿಶೇಷವಾಗಿ ದೈವಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಆ ತಿಂಗಳಿನ ಅಮವಾಸ್ಯೆ ಹುಣ್ಣಿಮೆ ಸಂಕ್ರಾಂತಿಗಳ ಪ್ರಕಾರ ದಿನ ನಿರ್ಧರಿಸಿ ಆಚರಿಸಲಾಗುತ್ತದೆ. ಪ್ರತಿ ಸಂಕ್ರಾಂತಿ ನಂತರದ ದಿನ ಸಿಂಗೋಡೆ ಎಂದು ಕರೆಯುತ್ತಾರೆ. ತುಳು ಕ್ಯಾಲೆಂಡರ್ಗೆ ನಾವು ಪರಿಚಿತರಾಗಿರಬೇಕು.

naadle SourceMr. Vishwanath Renjala, Sunkadakatte, Bajpe.

If you like this article, click on the button below