ಭಾನಗಢ ಕೋಟೆಯ ನಿಗೂಢ ಸತ್ಯ

Share This:

ಕೆಲವೊಂದು ಬಾರಿ ನಂಬಲೂ ಅಸಾಧ್ಯವಾದ ಕಥೆಗಳನ್ನು ನಂಬಬೇಕಾಗುತ್ತದೆ. ಆದರೆ ಇದರ ಸತ್ಯಾಸತ್ಯತೆಗಳಿಗೆ ಯಾವುದೇ ವೈಜ್ಞಾನಿಕ ಸಮರ್ಥನೆಗಳಿಲ್ಲ. ಕಲ್ಪನೆಗೂ ಮೀರಿದ ಚಕಿತಗಳು ಈ ಭೂಮಿಯಲ್ಲಿ ನಡಿಯುತ್ತಿವೆ.ವಿಸ್ಮಯಕಾರಿ ತಾಣವಾದ ಈ ಭೂಮಿಯ ಮೇಲೆ ಏನೂ ಬೇಕಾದರೂ ನಡೆಯಬಹುದು.ಅಂತಹ ಘಟನೆಗೆ ಈ ಅಂಕಣದಲ್ಲಿರುವ ಕೋಟೆಯೇ ಸಾಕ್ಷಿ.

ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿರುವ ಈ ಕೋಟೆಯು ತುಂಬಾ ಭಯಾನಕವಾಗಿದ್ದು,ಈ ಸ್ಥಳವು ಭಯಾನಕ ಪ್ರದೇಶಗಳಲ್ಲಿ ಒಂದಾಗಿದೆ.ಈ ಸ್ಥಳಕ್ಕೆ ಭಾರತೀಯ ಪುರಾತತ್ವ ಇಲಾಖೆಯು ಎಲ್ಲಾ ಸ್ಥಳೀಯ ಹಾಗೂ ಪ್ರವಾಸಿಗರಿಗೆ ರಾತ್ರಿಯ ವೇಳೆ ಕೋಟೆಯ ಒಳಗೆ ಪ್ರವೇಶಿಸಲು ನಿರ್ಬಂಧಿಸಿದೆ. ಸ್ಥಳೀಯ ಜನರ ಪ್ರಕಾರ ಈ ಕೋಟೆಯಲ್ಲಿ ಕೆಲವೊಂದು ಅಗೋಚರ ಶಕ್ತಿಗಳಿವೆ ಎಂಬ ನಂಬಿಕೆ ಇದೆ.

ಈ ಕೋಟೆಯ ಬಗ್ಗೆ ಹಲವು ಕಥೆಗಳು ಕೇಳಿಬರುತ್ತವೆ. ಈಗಾಗಲೇ ಹಲವಾರು ಕಥೆಗಳು, ಧಾರಾವಾಹಿಗಳು ಪ್ರಕಟವಾಗಿದೆ. ಈ ಕೋಟೆಯ ಇತಿಹಾಸ ಮೆಲುಕು ಹಾಕುವುದಾದರೆ – ಈ ಕೋಟೆಯು ೧೭ ನೇ ಶತಮಾನಕ್ಕೆ ಸೇರಿದ್ದಾಗಿದೆ.ಈ ಕೋಟೆಯನ್ನು ಮಾನ್ ಸಿಂಗ(ಭಾನ್ ಸಿಂಗ್ )ನು ಆತನ ಸಹೋದರನಾದ ಮಾಧೋ ಸಿಂಗನಿಗೋಸ್ಕರ ನಿರ್ಮಿಸಿದನು. ಆಗಿನ ಕಾಲದ ಹೆಸರಾಂತ ಶಿಲ್ಪಿಯಾದ ಅರುಣ್ ಕುಮಾರ ಯಾದವನು ಹೊಸ ಹಳ್ಳಿಯನ್ನು  ಭಾನಗಢ ಕೋಟೆಯ ಸೀಮೆಯಲಿ ನಿರ್ಮಿಸಿದನು.

ಇಲ್ಲಿ ನಡೆಯುವ ವಿಸ್ಮಯಕಾರಿ ರಹಸ್ಯದ ಬಗ್ಗೆ ಕಾರಣಗಳನ್ನು ಹುಡುಕುತ್ತಾ ಹೋದರೆ, ಇಲ್ಲಿಯ ರಾಜಕುಮಾರಿಯಾದ ರತ್ನಾವತಿಯು ಎಲ್ಲಾ ಘಟನೆಗಳಿಗೂ ಮೂಲ. ಈ ರಾಜಕುಮಾರಿಯು ಅಪ್ರತಿಮ ಸುಂದರಿಯಾಗಿದ್ದಳು. ಇಲ್ಲಿಯ ಒಬ್ಬ ಮಾಂತ್ರಿಕನು ರಾಜಕುಮಾರಿಯನ್ನು ಪ್ರೀತಿಸುತಿದ್ದನು.ಈತನು ಆಕೆಯನ್ನು ಪಡೆಯಲು ಮಾಟ ಮಂತ್ರಗಳನ್ನು  ಮಾಡಲು  ಪ್ರಾರಂಭಿಸಿದನು.ಆದರೆ ಈತನು ಮಾಡಿದ ಮಾಟಮಂತ್ರವು ಕಾರಣಾಂತರಗಳಿಂದ ಆತನಿಗೆ ತಿರುಗಿಬಿದ್ದಿತು.ಆತನು ಕೊನೆಯುಸಿರೆಳೆಯುವ ಮೊದಲು ಆ ಸ್ಥಳದಲ್ಲಿ ಯಾವುದೇ ಆತ್ಮವು ಶಾಂತಿಯಿಂದ ಇರಬಾರದೆಂದು ಶಾಪವನಿಟ್ಟನು.

ಈಗಲೂ ಭಾರತೀಯ ಪುರಾತತ್ವ ಇಲಾಖೆಯ ಸೂಚನಾ ಫಲಕವು ಈ ಸ್ಥಳದ ಭಯಾನಕತ್ವದ ಬಗ್ಗೆ ಮಾಹಿತಿ ನೀಡುತ್ತದೆ.ಇದೆಲ್ಲವೂ ನಮ್ಮ ಮನಸ್ಸಿನಲ್ಲಿ ನಿಜವೇ ಎಂದು ಗೊಂದಲ ಮೂಡಿಸುತ್ತಿದೆ.

naadleCredits: Mahesh Pai and Chaitra Gowda

If you like this article, click on the button below