Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಬೆಂಗಳೂರನ್ನು ತಂಪಾಗಿಡಲು ನೈಸರ್ಗಿಕ ಹವಾನಿಯಂತ್ರನದ ಆಟೋ ರಿಕ್ಷಾ!!!

Share This:

ನಾರಾಯಣ ವಿ ಅವರು ಒಬ್ಬ ಆಟೋ ಚಾಲಕರು. ಅವರು ಜಾಗತಿಕ ತಾಪಮಾನವನ್ನು ನಿಯಂತ್ರಿಸಲು ಒಂದು ಅನನ್ಯ ಪರಿಕಲ್ಪನೆಯೊಂದಿಗೆ ಎದ್ದು ನಿಂತಿದ್ದಾರೆ. ನಮ್ಮ ಸುತ್ತಮುತ್ತ ಇರುವ ಮರಗಳ ಪ್ರಾಮುಖ್ಯತೆಯನ್ನು ಅವರು ಅರಿತುಕೊಂಡಿದ್ದಾರೆ. ಹತ್ತು ವರ್ಷಗಳ ಹಿಂದೆ, ನಾವು ಹವಾನಿಯಂತ್ರನಗಳನ್ನು ಬಳಸಲಿಲ್ಲ, ಆದರೆ ಈಗ ನಾವು ಉಸಿರಾಡಲು ಒಳ್ಳೆಯ ಗಾಳಿಯನ್ನು ಹುಡುಕುವ ಪರಿಸ್ಥಿತಿ ಎದುರಾಗಿದೆ. ಮರ-ಗಿಡಗಳು ಆಮ್ಲಜನಕದ ಪ್ರಮುಖ ಮೂಲವಾಗಿರುವುದರಿಂದ, ಅವರು ತಮ್ಮ ಆಟೋ ರಿಕ್ಷಾದಲ್ಲಿಯೇ ಕೆಲವು ಗಿಡಗಳನ್ನು ಅಳವಡಿಸಿ ಹವಾನಿಯಂತ್ರ ವಾಹನವಾಗಿ ಮಾರ್ಪಡಿಸಿದ್ದಾರೆ.

ಅವರು ತಮ್ಮ ಆಟೋ ರಿಕ್ಷಾದಲ್ಲಿ ಗಿಡಗಳನ್ನು ಬೆಳೆಸಿ ಆರೈಸುತ್ತ ಬಂದಿದ್ದಾರೆ. ಇದರಿಂದ ಅವರ ಆಟೋ ರಿಕ್ಷಾದಲ್ಲಿ ಬರುವ ಪ್ರಯಾಣಿಕರಿಗೆ ಉದ್ಯಾನವನದಲ್ಲಿ ಕುಳಿತ ಅನುಭವದೊಂದಿಗೆ ಪ್ರಯಾಣಿಸಬಹುದಾಗಿದೆ. ಪ್ರಯಾಣಿಕರಿಗೆ ತನ್ನ ವಾಹನದಲ್ಲಿ ನೈಸರ್ಗಿಕ ಹವಾನಿಯಂತ್ರನದ ಅನುಭವ ನೀಡಲು ಸಣ್ಣ ಗಿಡಗಳನ್ನು ವಾಹನದಲ್ಲಿಯೇ ನಾಟಿ ಮಾಡುವ ಬಗ್ಗೆ ಯೋಚಿಸಿದ್ದರು. ಅವರು ತನ್ನ ವಾಹನದಲ್ಲಿ ಬಳಸಿದ ಸಣ್ಣ ಗಿಡಗಳು ದೊಡ್ಡ ಮರಗಳಾಗುವ ಗಿಡಗಳಾಗಿದೆ. ಪರಿಸರವನ್ನು ಉಳಿಸಿ ಬೆಳೆಸುವ ಬಗ್ಗೆ ಅವರಿಗಿರುವ ಕಾಳಜಿಗೆ ಮೆಚ್ಚಲೇಬೇಕು.

ಭೂಮಿಯಲ್ಲಿರುವ ಪ್ರತಿಯೊಬ್ಬರೂ ಅವರಂತೆ ಯೋಚಿಸಿದರೆ ಜಾಗತಿಕ ತಾಪಮಾನವು ಶಾಶ್ವತವಾಗಿ ಕಣ್ಮರೆಯಾಗುವುದು ಖಚಿತ. ಅವರು ಸಮಾಜದ ಜನರಿಗೆ ಈ ಸಂದೇಶವನ್ನು ಹರಡಿಸುತ್ತಿದ್ದಾರೆ. ನಾವು ಮುಕ್ತವಾದ ಆಮ್ಲಜನಕವನ್ನು ಪಡೆಯಲು ಮರ ಗಿಡಗಳನ್ನು ಉಳಿಸಿ ಬೆಳೆಸಬೇಕು. ಈ ಭೂಮಿಯಲ್ಲಿರುವ ಎಲ್ಲಾ ಜೀವಿಗಳಿಗೆ 6 ತಿಂಗಳು ಆಮ್ಲಜನಕವನ್ನು ಉತ್ಪಾದಿಸಲು ಸರಿಸುಮಾರು 38 ಟ್ರಿಲಿಯನ್ ಡಾಲರುಗಳು ಖರ್ಚಾಗುತ್ತದೆ. ಭೂಮಿಯ ಮೇಲೆ ಇರುವ ನಮ್ಮೆಲ್ಲರ ಹಣವನ್ನು ಕೂಡಿಸಿದರೂ 6 ತಿಂಗಳವರೆಗೆ ಎಲ್ಲಾ ಜೀವಿಗಳಿಗೆ ಬೇಕಾಗುವಷ್ಟು ಆಮ್ಲಜನಕವನ್ನು ಉತ್ಪಾದಿಸಲು ಆಗುವುದಿಲ್ಲ. ಆದರೆ ಮರಗಳು ಇದನ್ನು ಉಚಿತವಾಗಿ ಮಾಡುತ್ತವೆ.

ಆದ್ದರಿಂದ ಜಾಗತಿಕ ತಾಪಮಾನ ಪರಿಣಾಮವನ್ನು ನಿಯಂತ್ರಿಸಲು ಮರ ಗಿಡಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

naadle If you like this article, click on the button below