ಎಚ್ಚರಿಕೆ!!! ಇನ್ನು ಮುಂದೆ ಸಿಕ್ಕಸಿಕ್ಕಲ್ಲಿ ಬಸ್ ನಿಲ್ಲಿಸಿದರೆ ಏನಾಗುತ್ತೆ ಗೊತ್ತಾ???

Share This:

ನಮಗೆ ತಿಳಿದಿರುವಂತೆ, ಬಸ್ ತಂಗುದಾಣವು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್ಸಿಗೆ ಹತ್ತಲು ಅಥವಾ ಬಸ್ಸಿಂದ ಇಳಿಯಲು ಮೀಸಲಿಟ್ಟ ಸ್ಥಳವಾಗಿದ್ದು, ತಂಗುದಾಣವನ್ನು ಪರಿಚಯಿಸುವ ಮುಖ್ಯ ಉದ್ದೇಶವೇನೆಂದರೆ, ಅಪಘಾತ ಮತ್ತು ಟ್ರಾಫಿಕ್ ಜಾಮ್ ಕಡಿಮೆ ಮಾಡುವುದು . ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಬಸ್ ಅತೀ ವೇಗವಾಗಿ ಚಲಾಯಿಸುದನ್ನು ಊಹಿಸಿ, ಮಧ್ಯ ಮಾರ್ಗದಲ್ಲಿ ಯಾರೋ ಒಬ್ಬರು ಪ್ರಯಾಣಿಕರು ಬಸ್ ನಿಲ್ಲಿಸುವಂತೆ ಕೈ ತೋರಿಸಿದರೆ ಚಾಲಕ ಹಠಾತ್ ಆಗಿ ಬಸ್ ನಿಲ್ಲಿಸಿದರೆ, ಬಸ್ಸಿನ ಹಿಂದೆ ಇರುವ ವಾಹನಗಳ ಸ್ಥಿತಿ ಏನಾಗಬಹುದು? ಇದು ಅಪಘಾತಕ್ಕೆ ಕಾರಣವಾಗತ್ತದೆ. ಚಾಲಕ ಸ್ವತಃ ಅವನನ್ನು ಮತ್ತು ಎಲ್ಲಾ ಪ್ರಯಾಣಿಕರನ್ನು ಅಪಾಯಕ್ಕೆ ತಳ್ಳುವಂತಾಯಿತು. ಅದೇ ರೀತಿ ಚಾಲಕನು ಜಂಕ್ಷನ್ನಲ್ಲಿ ಬಸ್ ನಿಲ್ಲಿಸಿದರೆ ಸಂಚಾರದ ಅಸ್ಥವ್ಯಸ್ತಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ಈ ಅಪಾಯವನ್ನು ನಿವಾರಿಸಲು ಸಾರಿಗೆ ಪ್ರಾಧಿಕಾರ ಹೊಸ ನಿಯಮಗಳನ್ನು ಪರಿಚಯಿಸಿದೆ. ಎಲ್ಲೆಂದರಲ್ಲಿ ಪ್ರಯಾಣಿಕರನ್ನು ಇಳಿಸಲು ಮತ್ತು ಹತ್ತಿಸಲು ಬಸ್ ನಿಲ್ಲಿಸಿದರೆ ಕಠಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರ ನೀಡಿದ್ದಾರೆ. ಬಸ್ ತಂಗುದಾಣಗಳಲ್ಲಿ ಬಿಟ್ಟು ಬೇರೆ ಕಡೆ ಬಸ್ ನಿಲ್ಲಿಸುವುದನ್ನು ಗಮನಿಸಿದರೆ, ಚಾಲಕರ ಡ್ರೈವಿಂಗ್ ಲೈಸೆನ್ಸ್ ರದ್ದು ಪಡಿಸುವುದಾಗಿ ಪ್ರಾಧಿಕಾರ ತಿಳಿಸಿದೆ.

ಸರ್ಕಾರ ನಿಯಮಗಳನ್ನು ರೂಪಿಸುತ್ತದೆ ಆದರೆ ಅದನ್ನು ಜವಾಬ್ದಾರಿಯಿಂದ ಅನುಸರಿಸುವುದು ಮತ್ತು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ನಾನು ನಾಡ್ಲೆಮ್ಯಾನ್, ಜವಾಬ್ದಾರಿಯುತ ನಾಗರಿಕನಾಗಿ ಜನ ಸಾಮಾನ್ಯರಿಗೆ ಮನವಿಯೊಂದನ್ನು ಮುಂದಿಡುತ್ತಿದ್ದೇನೆ. ಎಲ್ಲರೂ ನಿಯಮಗಳನ್ನು ಅನುಸರಿಸಿ, ಎಲ್ಲೆಂದರಲ್ಲಿ ಬಸ್ ನಿಲ್ಲಿಸಲು ನೀವೂ ಅನುವು ಮಾಡಿಕೊಡಬೇಡಿ.
ಇಂತಹ ಒಳ್ಳೆಯ ಕಾರಣಕ್ಕಾಗಿ ಎಲ್ಲರೂ ಕೈ ಜೋಡಿಸೋಣ. ಬಸ್ ಚಾಲಕರು ನಿಯಮಗಳನ್ನು ಉಲ್ಲಂಘಿಸಿ ರಸ್ತೆಗಳ ಮಧ್ಯದಲ್ಲಿ ಬಸ್ ನಿಲ್ಲಿಸುವುದನ್ನು ಯಾರಾದರು ಗಮನಿಸಿದರೆ ದಯವಿಟ್ಟು ಅದರ ಫೋಟೋವನ್ನು ನಮಗೆ ಕಳುಹಿಸಿ. ಅಥವಾ ನೀವು ಕಮೆಂಟ್ ಸೆಕ್ಷನಲ್ಲಿ ಫೋಟೋವನ್ನು ಪೋಸ್ಟ್ ಮಾಡಬಹುದು ಅಥವಾ info@naadle.comಗೆ ಮೇಲ್ ಮಾಡಬಹುದು. ಸಂಬಂಧಪಟ್ಟ ಅಧಿಕಾರಕ್ಕೆ ಆ ಫೋಟೋವನ್ನು ತಲುಪಿಸುವ ಜವಬ್ದಾರಿ ನಮ್ಮ ತಂಡವು ತೆಗೆದುಕೊಂಡಿದೆ.

Click on the link to read this article in English: http://blog.naadle.com/alertdont-stop-the-bus-wherever-you-wish/

naadleIf you like this article, click on the button below