ಜೂನ್ 21 ಅಂತರಾಷ್ಟ್ರೀಯ ಯೋಗ ದಿನ: ಯೋಗದ ಮಹತ್ವ ಮತ್ತು ವಿಶೇಷತೆಗಳು..!!

june 21 antaraastriya yoga dina yogada mahatva mattu vishashategalu-naadle
Share This:

2015 ಜೂನ್ 21ರಂದು ಮೊದಲ ಬಾರಿಗೆ ಜಾರಿಗೆ ಬಂದಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವದ್ಯಾಂತ ವರ್ಷಂಪ್ರತಿ ಆಚರಿಸಲಾಗುತ್ತದೆ. ಯೋಗವು ಬಹಳ ಹಳೆಯ ಅಭ್ಯಾಸವಾಗಿದ್ದು, ಪ್ರಾಚೀನ-ಪುರಾಣ ಕಾಲದಿಂದಲೂ ದೇಶದಲ್ಲಿ ಅನುಸರಿಸುತ್ತಾ ಬರಲಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಯೋಗದ ಮಹತ್ವದ ಬಗ್ಗೆ ಸಾರಿದ್ದಲ್ಲದೆ, ವಿಶ್ವ ಯೋಗ ದಿನಾಚರಣೆಯ ವಿಷಯ ಮಂಡಿಸಿದ್ದು, ನಂತರ ವಿಶ್ವಸಂಸ್ಥೆ ಇದಕ್ಕೆ ಒಪ್ಪಿದ್ದು ಎಲ್ಲರಿಗೂ ತಿಳಿದಿದೆ. ಜೂ.21ರಂದು ವಿಶ್ವ ಯೋಗ ದಿನಾಚರಣೆಯನ್ನು 177ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. ಇದು ಭಾರತದ ಕೊಡುಗೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. june 21 antaraastriya yoga dina yogada mahatva mattu vishashategalu-naadle

Upcoming and Ongoing events

View More Events

Want to Promote your Event, contact Naadle at 9035030300 or Email us at info@naadle.com


ಹರಿಯ ಮಿಡುಕಕ್ಕೆ ಶಿವತಾಂಡವವೇ ಕಾರಣವೆಂಬ ಸುಳಿವು ತಿಳಿದು ಶಿವತಾಂಡವವನ್ನು ಪ್ರತ್ಯಕ್ಷೀಕರಿಸಿಕೊಳ್ಳಲು ಮುನಿಪತ್ನಿಯೊಬ್ಬಳ ಗರ್ಭದಲ್ಲಿ ಪತಂಜಲಿಯಾಗಿ ಜನಿಸಿ ತಪಸ್ಸಿಗೆ ತೊಡಗುತ್ತಾನೆ ಶೇಷ. ತಪಸ್ಸಿಗೊಲಿದು ಭಕ್ತನ ಕೋರಿಕೆಯಂತೆ ತಾಂಡವಕ್ಕೆ ತೊಡಗುವ ಯೋಗಿ ಭೂಷಣ ಶಿವನ ತಾಂಡವದ ಒಂದೊಂದು ಭಂಗಿಯೂ ಪತಂಜಲಿಗೆ ಯೋಗದ ಒಂದೊಂದು ಆಸನವಾಗಿ ಗೋಚರಿಸುತ್ತದೆ. ಭುವಿಯ ಪ್ರಾಕೃತ ಭಾಷೆ ಡಮರಿನ ರವದಿ ಸಂಸ್ಕೃತವಾದ ಪರಿಯಂತೆ ಶಿವನ ತನುವಿನ್ಯಾಸ ಪತಂಜಲಿಗೆ ಯೋಗ ಕಲ್ಪಿಸಿತು. ಶಿವನ ತನು ವಿನ್ಯಾಸ, ಉಸಿರಿನ ನಿಯಂತ್ರಣ, ಅಂಗಾಂಗಗಳ ಭಂಗಿ, ಶರೀರದ ಸಮತೋಲನ ಇವೆಲ್ಲವೂ ಯೋಗಿಗೆ ಯೋಗವಾಗಿ ಗೋಚರಿಸಿತು. ಅಧಿ ಆತ್ಮಿಕ ತಾಪದಿಂದ ಬಳಲುತ್ತಿರುವ ಲೋಕದ ಜನರ ತಾಪವನ್ನು ಶಮನ ಮಾಡಲು ಶಿವನ ತಾಂಡವದ ರಹಸ್ಯ ಶಿವನ ಆಜ್ಞೆಯಂತೆ “ಪತಂಜಲಿ ದರ್ಶನ” ವಾಗಿ ಯೋಗಾಸನಗಳಾಗಿ ಯೋಗಿ ಪತಂಜಲಿಯಿಂದ ಹೊರಹೊಮ್ಮಿತು.june 21 antaraastriya yoga dina yogada mahatva mattu vishashategalu-naadleಜೂನ್ 21 ಉತ್ತರ ಗೋಳಾರ್ಧದ ವರ್ಷದ ಅತಿ ದೀರ್ಘವಾದ ದಿನವಾಗಿದೆ. ಪ್ರಧಾನಿ ಮೋದಿ ತಮ್ಮ ಹೇಳಿಕೆಯಲ್ಲಿ, ಭಾರತೀಯರಿಗೆ ಪ್ರಕೃತಿಯೆ ಗೌರವ ಸಲ್ಲಿಸುವುದು ಆಧ್ಯಾತ್ಮಿಕತೆಯ ಅವಿಭಾಜ್ಯ ಅಂಗವಾಗಿದೆ. ಹಾಗೆಯೇ ಪ್ರಕೃತಿಯ ಕೊಡುಗೆಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸುತ್ತೇವೆ. ಯೋಗ ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಯೋಗವು ಮನಸ್ಸು ಮತ್ತು ದೇಹ; ಚಿಂತನೆ ಮತ್ತು ಕ್ರಿಯೆ; ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ. ಹಾಗೆಯೇ ಪ್ರಕೃತಿ ಮತ್ತು ಮನುಷ್ಯ ನಡುವೆ ಸಾಮರಸ್ಯವನ್ನುಂಟು ಮಾಡುತ್ತದೆ. ಯೋಗವು ಆರೋಗ್ಯ ಮತ್ತು ಯೋಗಕ್ಷೇಮದ ಸಮಗ್ರ ವಿಧಾನವಾಗಿದೆ. ಯೋಗ ವ್ಯಾಯಾಮ ಮಾತ್ರವಲ್ಲದೆ ನಿಮ್ಮೊಂದಿಗೆ, ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ಕಂಡುಹಿಡಿಯಲು ನೆರವಾಗುತ್ತದೆ. ನಮ್ಮ ಜೀವನಶೈಲಿ ಹಾಗೂ ಪ್ರಜ್ಞೆ ರಚಿಸುವ ಮೂಲಕ ಹಮಾಮಾನ ಬದಲಾವಣೆ ನಿಭಾಯಿಸಲು ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಳವಡಿಸಿಕೊಳ್ಳಲು ನಾವು ಒಂದಾಗಿ ಕೆಲಸ ಮಾಡೋಣ ಎಂಬ ಸಂದೇಶ ನೀಡಿದ್ದರು.june 21 antaraastriya yoga dina yogada mahatva mattu vishashategalu-naadleಮುಂಗಾರು ಆಗಮನವಾಗಿ ಆಷಾಢದ ಗಾಳಿ ಮೈಮನ ಜಡಗಟ್ಟಿ ಹೆಚ್ಚಿನ ಚಟುವಟಿಕೆಗಳಿಂದ ಕೂಡಿದ ಕಾಲವಾಗಿದೆ (ಜೂನ್ ತಿಂಗಳು). ಸೂರ್ಯನ ಪ್ರಖರತೆ ಒಂದೊಂದು ಕಾಲಕ್ಕೆ ಒಂದೊಂದು ಪ್ರದೇಶಕ್ಕೆ ಒಂದೊಂದು ರೀತಿಯಾಗಿರುತ್ತದೆ. ಅದರೆ, ಈ ಕಾಲದಲ್ಲಿ ಅನೇಕ ರಾಷ್ಟ್ರಗಳಲ್ಲಿ ಜಡತ್ವ ಕಳೆದು ಹೊಸ ಹುರುಪು ತುಂಬುವ ಕಾಲ,ಜೂ.21 ದೀರ್ಘಕಾಲ ಹಗಲು ಹೊಂದಿರುವ ದಿನ. ಆದಿ ಕಾಲದಲ್ಲಿ ಸೂರ್ಯಾಭಿಮುಖವಾಗಿ ದೃಷ್ಟಿ ನೆಟ್ಟು ಧೀ ಶಕ್ತಿ ಉದ್ದೀಪನಗೊಳಿಸುತ್ತಿದ್ದ ದಿನ ಇದಾಗಿದೆ ಎಂದು ನಂಬಲಾಗಿದೆ. ಹೀಗೆ ಪಡೆದ ಯೋಗಶಕ್ತಿಯನ್ನು ಭಾರತದ ಋಷಿಗಳು ವಿಶ್ವದೆಲ್ಲೆಡೆ ಹರಡಿದರು. ಯೋಗಾಭ್ಯಾಸ, ವಿಶ್ವಕ್ಕೆ ಭಾರತ ನೀಡಿದ ಅದ್ಭುತ ಕಾಣಿಕೆ. ಈಗ ವಿಶ್ವಯೋಗ ದಿನಾಚರಣೆ ಇಡೀ ವಿಶ್ವಕ್ಕೆ ಭಾರತದ ಕೊಡುಗೆಯಾಗಿದೆ.
naadle If you like this article, click on the button below

Offers

Want to Add your Offers, contact Naadle at 9035030300 or Email us at info@naadle.com