ಜುಲೈ 27 ಮಕರ ರಾಶಿಯಲ್ಲಿ ಕೇತುಗ್ರಸ್ತ ಚಂದ್ರಗ್ರಹಣ..!!

Share This:

ಜುಲೈ 27ರ ಹುಣ್ಣಿಮೆಯಂದು ಉತ್ತರಾಷಾಢ ಮತ್ತು ಶ್ರವಣ ನಕ್ಷ ತ್ರದಲ್ಲಿ ಕೇತುಗ್ರಸ್ಥ ಚಂದ್ರಗ್ರಹಣ ಸಂಭವಿಸುತ್ತದೆ. ಇದು ಈ ಶತಮಾನದ ಅತಿ ದೀರ್ಘಾವಧಿಯ ಚಂದ್ರಗ್ರಹಣವಾಗಿದೆ. ಗ್ರಹಣವು ಉತ್ತರಾಷಾಢ ನಕ್ಷ ತ್ರದಲ್ಲಿ ಪ್ರಾರಂಭವಾಗಿ ಶ್ರವಣ ನಕ್ಷ ತ್ರದಲ್ಲಿ ಅಂತ್ಯವಾಗುತ್ತದೆ. ಅಂದರೆ ಮಕರ ರಾಶಿಯಲ್ಲಿ ಸಂಭವಿಸುತ್ತದೆ. ಈ ಶತಮಾನದ ಅತ್ಯಂದ ದೀರ್ಘ ಅವಧಿಯ ಚಂದ್ರಗ್ರಹಣಕ್ಕೆ ವಿಶ್ವವು ಸಾಕ್ಷಿಯಾಗಲಿದ್ದು, ಭಾರತದಲ್ಲೂ ಇದರ ವೀಕ್ಷಣೆ ಸಾಧ್ಯವಾಗಲಿದೆ. ಚಂದ್ರಗ್ರಹಣದ ವೇಳೆ ಚಂದ್ರನು ಕೆಂಪುಬಣ್ಣ ಪಡೆಯುವುದರಿಂದ ಈ ವಿದ್ಯಾಮಾನವನ್ನು ರಕ್ತಚಂದ್ರ( ಬ್ಲಡ್‌ ಮೂನ್‌) ಎಂದೂ ಕರೆಯಲಾಗುತ್ತದೆ. ಜು.27 ಮತ್ತು 28ರ ನಡುವೆ 1 ಗಂಟೆ 43 ನಿಮಿಷಗಳ ಕಾಲ ಸಂಪೂರ್ಣ ಚಂದ್ರ ಗ್ರಹಣ ಸಂಭವಿಸಲಿದೆ. ಬಳಿಕ 1 ಗಂಟೆ ಕಾಲ ಪಾರ್ಶ್ವ ಚಂದ್ರಗ್ರಹಣ ಸಂಭವಿಸಲಿದೆ. ಜು.27 ರಾತ್ರಿ 11.54ಕ್ಕೆ ಪಾರ್ಶ್ವ ಚಂದ್ರಗ್ರಹಣ ಆರಂಭ, ಜು.28 ರಾತ್ರಿ 1 ಕ್ಕೆ ಸಂಪೂರ್ಣ ಚಂದ್ರಗ್ರಹಣ ಆರಂಭ, ಜು.28 ರಾತ್ರಿ 1.52-2.43 ಅವಧಿಯಲ್ಲಿ ಚಂದ್ರ ಕಡುಕಪ್ಪು, ಕೆಂಪು ಮತ್ತು ಕಿತ್ತಳೆ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ.july 27 makara raashiyalli kethugrasta chandragrahana-naadle

Upcoming and Ongoing events

View More Events

Want to Promote your Event, contact Naadle at 9035030300 or Email us at info@naadle.com

ಸಾಮಾನ್ಯವಾಗಿ ಚಂದ್ರಗ್ರಹಣ ಮೂರರಿಂದ ನಾಲ್ಕು ಗಂಟೆಗಳ ಅವಧಿಯದ್ದಾಗಿರುತ್ತದೆ. ಹಿಂದಿನ ಚಂದ್ರಗ್ರಹಣಗಳಿಗೆ ಹೋಲಿಸಿದರೆ ಈ ಬಾರಿಯ ಚಂದ್ರಗ್ರಹಣ ಸ್ವಲ್ಪ ಹೆಚ್ಚು ನಿಮಿಷ ಕಾಣಿಸಲಿದೆ. ಇದು ಶತಮಾನದ ಅತಿ ದೀರ್ಘಾವಧಿಯ ಚಂದ್ರಗ್ರಹಣವೆಂದು ಗುರುತಿಸಲಾಗಿದೆ. ಭೂಮಿಯ ನೆರಳು ಚಂದ್ರನನ್ನು ಸಂಪೂರ್ಣವಾಗಿ ಆವರಿಸಿಕೊಂಡ ಬಳಿಕ ಚಂದ್ರನ ಬಣ್ಣ ನಸುಗೆಂಪು ಬಣ್ಣಕ್ಕೆ ತಿರುಗಲಿದೆ. ಜ.31 ರಂದು ಚಂದ್ರಗ್ರಹಣವಾಗಿದ್ದಾಗ ಇದೇ ರೀತಿ ಕಂಡುಬಂದಿತ್ತು. ಅಂದಿನ ಚಂದ್ರನನ್ನು ‘ಸೂಪರ್‌ ಬ್ಲಡ್‌ ಮೂನ್‌’ ಎಂದು ಕರೆದರೆ, ಈ ಬಾರಿ ಗ್ರಹಣಕ್ಕೊಳಗಾಗುತ್ತಿರುವ ಚಂದ್ರನಿಗೆ ‘ಬ್ಲಡ್‌ ಮೂನ್‌’ ಎಂದು ಹೆಸರಿಸಲಾಗಿದೆ.  july 27 makara raashiyalli kethugrasta chandragrahana-naadleದಕ್ಷಿಣ ಅಮೆರಿಕ, ಆಫ್ರಿಕಾದ ಬಹುತೇಕ ಭಾಗ, ಮಧ್ಯ ಪ್ರಾಚ್ಯ ಮತ್ತು ಕೇಂದ್ರ ಏಷ್ಯಾದಲ್ಲಿ ವೀಕ್ಷಣೆ ಸಾಧ್ಯವಿದೆ. 31ಕ್ಕೆ ಮಂಗಳ ದರ್ಶನ: ಜು.31ಕ್ಕೆ ಮಂಗಳಗ್ರಹವು ಭೂಮಿಗೆ ಅತ್ಯಂತ ಸಮೀಪದಲ್ಲಿ (56.6 ದಶಲಕ್ಷ ಕಿ.ಮೀ) ಹಾದು ಹೋಗಲಿದ್ದು, ದೊಡ್ಡ ಗಾತ್ರದಲ್ಲಿ ಮತ್ತು ಪ್ರಕಾಶಮಾನವಾಗಿ ಕಾಣಿಸಿಕೊಳ್ಳಲಿದ್ದಾನೆ. 2೦೦3ರ ಬಳಿಕ ಇದೇ ಮೊದಲ ಬಾರಿಗೆ ಕುಜ ಭೂಮಿಗೆ ಇಷ್ಟು ಸಮೀಪದಲ್ಲಿ ಸಾಗಿಹೋಗಲಿದ್ದಾನೆ. ಮತ್ತೊಮ್ಮೆ ಮಂಗಳನನ್ನು ಇಷ್ಟು ಹತ್ತಿರದಿಂದ ವೀಕ್ಷಿಸಲು 2035ರವರೆಗೂ ಕಾಯಬೇಕು.
naadle If you like this article, click on the button below

Offers

Want to Add your Offers, contact Naadle at 9035030300 or Email us at info@naadle.com