ಇತಿಹಾಸ ಪ್ರಸಿದ್ಧ ಢಕ್ಕೆಬಲಿ ನಡೆಯುವ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದ ವಿಶೇಷತೆಗಳು..!!

itihaasa prasiddha dakkebali nadeyuva shri kadgeshwari brahmastanada vishashategalu-naadle
Share This:

ಹಸಿರು ಕಾನನದ ಮಧ್ಯೆ ಸ್ವಯಂ ಉದ್ಭವಳಾಗಿ ಭಕ್ತಿ ವಿಶ್ವಾಸದಿಂದ ಪೂಜಿಸುವ ಭಕ್ತರ ಕಷ್ಟಗಳನ್ನು ಪರಿಹಾರ ಮಾಡುವುದಕ್ಕೆ ಇರುವ ಶ್ರೀ ವನದುರ್ಗ ಸ್ವರೂಪಳಾದ ಶ್ರೀ ಖಡ್ಗೇಶ್ವರೀ ದೇವಿಯು ನಾಗಬ್ರಹ್ಮರೊಂದಿಗೆ ಪಡುಬಿದ್ರಿಯಲ್ಲಿ ನೆಲೆಯಾಗಿದ್ದಾಳೆ. ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ನಡಾವಳಿಗೆ ‘ಢಕ್ಕೆಬಲಿ’ ಎಂದು ಕರೆಯಲಾಗುತ್ತದೆ. ಉಡುಪಿಯಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಪರ್ಯಾಯ ಪೀಠಾರೋಹಣವಿರದ ವರ್ಷದಲ್ಲಿ ಇಲ್ಲಿ ಈ ಸಂಭ್ರಮವಿರುತ್ತದೆ. ಸನ್ನಿಧಾನದಲ್ಲಿ ಬ್ರಹ್ಮಸ್ವರೂಪಿಯಾಗಿರುವ ಖಡ್ಗೇಶ್ವರೀಗೆ ಮೊದಲ ಆದ್ಯತೆ. ಇಲ್ಲಿ ನಾಗ, ರಕ್ತೇಶ್ವರಿ, ನಂದಿಗೋಣ, ಕ್ಷೇತ್ರಪಾಲರ ಸಾನಿಧ್ಯವೂ ಇದೆ. ದಟ್ಟಾರಣ್ಯದಲ್ಲಿರುವ ಈ ಸಾನಿಧ್ಯದಲ್ಲಿ ರಾತ್ರಿಯ ಕಾಲದಲ್ಲಿ ಢಕ್ಕೆಬಲಿ ಸೇವೆ ಆರಂಭವಾಗುತ್ತದೆ.
itihaasa prasiddha dakkebali nadeyuva shri kadgeshwari brahmastanada vishashategalu-naadle

Upcoming and Ongoing events

View More Events

Want to Promote your Event, contact Naadle at 9035030300 or Email us at info@naadle.com

ಈ ಬ್ರಹ್ಮಸ್ಥಾನದಲ್ಲಿ ಕುಳಿತುಕೊಳ್ಳಲು ಯಾರಿಗೂ ಆಸನವಿಲ್ಲ, ಇಲ್ಲಿ ಮರಳೇ ಆಸನ. ಇಲ್ಲಿನ ಬೀಡಿನ ಅರಸರೆಂದು ಕರೆಯಲ್ಪಡುವ ವಂಶಸ್ಥರಿಗೆ ಚಾಪೆ, ಉಡುಪಿ ಅಷ್ಠಮಠಾಧೀಶರಿಗೆ ಚಪ್ಪಡಿ ಕಲ್ಲಿನ ವ್ಯವಸ್ಥೆ ಮಾತ್ರ ಇರುತ್ತದೆ. ಕರ್ಪೂರ ಮತ್ತು ದೊಂದಿ ದೀಪಗಳು ರಾತ್ರಿಯ ವೇಳೆ ಈ ಪ್ರದೇಶವನ್ನು ಬೆಳಗುವ ಪರಿಕರ. ಇಲ್ಲಿ ನೆಲದಲ್ಲಿರುವ ಮರಳೇ ಇಲ್ಲಿನ ಪ್ರಮುಖ ಪ್ರಸಾದ, ಭಕ್ತರು ಅದನ್ನೇ ತೆಗೆದುಕೊಳ್ಳುವುದು. ಈ ಬ್ರಹ್ಮಸ್ಥಾನದಲ್ಲಿ ಅಲಂಕಾರಕ್ಕೆ ಯಾವುದೇ ಕೃತಕ ಹೂಗಳನ್ನು ಬಳಸುವಂತಿಲ್ಲ. ತಾಜಾ ಹಣ್ಣುಹಂಪಲು, ಹೂ, ತಾಳೆ, ಬಾಳೆ, ಅಡಿಕೆ , ಬಿದಿರು ಮತ್ತು ಅಡಿಕೆ ಮರಗಳನ್ನು ಬಳಸುತ್ತಾರೆ ಅಲಂಕಾರಕ್ಕೆ. ಈ ಕ್ಷೇತ್ರದ ಮತ್ತೊಂದು ವಿಶೇಷ ಇಲ್ಲಿ ಯಾವುದೇ ಕಾಣಿಕೆ ಡಬ್ಬಿಗಳಿಲ್ಲ, ಇಲ್ಲಿ ಮುಖ್ಯವಾಗಿ ಹಿಂಗಾರ ಮತ್ತು ಸೀಯಾಳವನ್ನು ಕಾಣಿಕೆಯಾಗಿ ನೀಡಲಾಗುತ್ತದೆ.itihaasa prasiddha dakkebali nadeyuva shri kadgeshwari brahmastanada vishashategalu-naadleಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಢಕ್ಕೆಬಲಿ ಇಲ್ಲಿನ ವಿಶೇಷ ಸೇವೆಯಾಗಿದೆ. ಮಂಡಲ ರಚನೆಯೊಂದಿಗೆ ಈ ಆರಾಧನೆ ಆರಂಭವಾಗುತ್ತದೆ. ಸಂಜೆಯ ಬಳಿಕ ದೇವಾಲಯವು ಹೂ ಮತ್ತು ಹಿಂಗಾರಗಳಿಂದ ಅಲಂಕೃತಗೊಳ್ಳುತ್ತದೆ. ಅಲಂಕಾರದ ಬಳಿಕ ಇಲ್ಲಿನ ದರ್ಶನ ಪಾತ್ರಿಗಳು ಮಡಿಯನ್ನುಟ್ಟು ಬಂದ ನಂತರ ಸನ್ನಿಧಾನದಲ್ಲಿ ಪ್ರಸನ್ನ ಪೂಜೆಗಳು ನಡೆಯುತ್ತದೆ. ಆ ನಂತರ ವೈದ್ಯ (ನಾಗಪಾತ್ರಿಯನ್ನು ಆಡಿಸುವವರು) ಕುಟುಂಬದವರು ಬಾರಿಸುವ ಕಂಚಿನ ಢಕ್ಕೆಯ ನಿನಾದಕ್ಕೆ ನಾಗಪಾತ್ರಿಗಳಲ್ಲಿ ಆವೇಶ ಮೈದೆಳೆದು ಬರುತ್ತದೆ. ಮೊದಲಾರ್ಧದಲ್ಲಿ ರಾತ್ರಿ ಪ್ರಸಾದ ತಂಬಿಲ ವಿತರಣೆಯಾದ ನಂತರ ನಾಗಪಾತ್ರಿಗಳು ಮತ್ತು ವೈದ್ಯರು ವಿಶ್ರಾಂತಿ ಪಡೆಯುತ್ತಾರೆ. ವಿಶ್ರಾಂತಿಯ ನಂತರ ಪಾತ್ರಿಗಳು ಮತ್ತು ವೈದ್ಯರು ಮತ್ತೆ ನಾಗಕನ್ನಿಕೆಯಾಗಿ ಅಲಂಕರಿಸಿಕೊಂಡು ಢಕ್ಕೆಬಲಿ ಮಂಡಲ, ನಾಗಮಂಡಲಗಳನ್ನು ಸುತ್ತುವರಿದು ಅಲ್ಲಿ ಢಕ್ಕೆಬಲಿಯ ಪ್ರಧಾನ ಆಚರಣೆಗಳು, ಪೂಜೆಗಳು ಬೆಳಗಿನ ಜಾವದವರೆಗೆ ನಡೆಯುತ್ತವೆ. ಢಕ್ಕೆಬಲಿ ಸೇವೆಗಳಲ್ಲದೆ ಪಂಚಾಮೃತ, ಹಗಲು ತಂಬಿಲ, ರಾತ್ರಿ ತಂಬಿಲ ಸೇವೆ ನಡೆಯುತ್ತದೆ. ಆರಾಧನೆ ಇದ್ದಷ್ಟು ಕಾಲ ಗ್ರಾಮದ ಮಿತಿಯೊಳಗೆ ಯಾವುದೇ ಶುಭ ಸಮಾರಂಭಗಳು ಮತ್ತು ಇತರ ದೈವ ದೇವಸ್ಥಾನಗಳಲ್ಲಿ ಯಾವುದೇ ಧಾರ್ಮಿಕ ಆಚರಣೆಗಳು ನಡೆಯುವಂತಿಲ್ಲ. ಎಂಬ ನಿಯಮ ಚಾಲ್ತಿಯಲ್ಲಿದೆ.ಈ ನಡಾವಳಿಗೆ ಶತಮಾನಗಳ ಇತಿಹಾಸವಿದೆ.
naadle If you like this article, click on the button below

Offers

Want to Add your Offers, contact Naadle at 9035030300 or Email us at info@naadle.com