ಇನ್ನೂ ಮುಂದೆ ಡ್ರೈವಿಂಗ್ ಲೈಸನ್ಸ್ ಸ್ಮಾರ್ಟ್ ಕಾರ್ಡ್ ರೂಪದಲ್ಲಿ ಸಿಗಲಿದೆ..!!

innu munde driving licence smart card roopadalli sigalide-naadleSAMSUNG
Share This:

ಶೀಘ್ರದಲ್ಲೇ ನಿಮ್ಮ ವಾಹನ ಚಾಲನಾ ಪರವಾನಗಿ( ಡ್ರೈವಿಂಗ್ ಲೈಸನ್ಸ್) ಮತ್ತು ವಾಹನ ಪ್ರಮಾಣ ಪತ್ರ (ಆರ್​ಸಿ) ಸ್ಮಾರ್ಟ್​ ಕಾರ್ಡ್​ ರೂಪ ಪಡೆಯಲಿದೆ. ಮುಂದಿನ ವರ್ಷ ಜುಲೈನಿಂದ ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪದೇಶಗಳಲ್ಲಿ ಹೊಸದಾಗಿ ನೀಡಲಾಗುವ ಡ್ರೈವಿಂಗ್‌ ಲೈಸನ್ಸ್‌ ಮತ್ತು ವಾಹನಗಳ ಪ್ರಮಾಣ ಪತ್ರ (ಆರ್‌ಸಿ) ಒಂದೇ ರೀತಿಯ ವಿನ್ಯಾಸ ಕೂಡಿರಲಿದೆ. ಈ ಹೊಸ ಲೈಸನ್ಸ್​ಗಳ ಬಣ್ಣ, ಮಾದರಿ ಮತ್ತು ಭದ್ರತಾ ವ್ಯವಸ್ಥೆಗಳು ಒಂದೇ ರೀತಿಯಲ್ಲಿರಲಿವೆ.innu munde driving licence smart card roopadalli sigalide-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com


ಈ ಸ್ಮಾರ್ಟ್​ ಡಿಎಲ್​ ಕಾರ್ಡ್ ಮತ್ತು ಆರ್​.ಸಿಗಳು ಮೈಕ್ರೋಚಿಪ್ ಜೊತೆಗೆ ಕ್ಯೂಆರ್ ಕೋಡ್​ಗಳನ್ನು ಹೊಂದಿರುತ್ತವೆ. ಅವುಗಳು ಎಟಿಎಂ ಕಾರ್ಡ್‌ ಮತ್ತು ಮೆಟ್ರೋ ಕಾರ್ಡ್​ಗಳಲ್ಲಿರುವ ನಿಯರ್‌ ಫೀಲ್ಡ್‌ ಫೀಚರ್‌ ಅನ್ನು ಹೊಂದಿರಲಿವೆ. ಅದರ ಮೂಲಕ ಸಂಚಾರಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಅವರ ಬಳಿ ಅಭ್ಯವಿರುವ ಡಿವೈಸ್​ಗೆ ನಿಮ್ಮ ಡಿಎಲ್-ಆರ್​ಸಿ ಕಾರ್ಡ್​ನ್ನು ಹಿಡಿದಾಗ ಸಂಪೂರ್ಣ ಮಾಹಿತಿ ಸಿಗಲಿದೆ.innu munde driving licence smart card roopadalli sigalide-naadleಸ್ಮಾರ್ಟ್​ ಡ್ರೈವಿಂಗ್ ಲೈಸನ್ಸ್​ನಲ್ಲಿ ವಾಹನದ ಮಾಲೀಕರಿಗೆ ಮೀಸಲಾಗಿರುವ ವಾಹನದ ಕುರಿತು ಮತ್ತು ಚಾಲನೆ ಬಗ್ಗೆ ಸಂಬಂಧಿಸಿದ ಮಾಹಿತಿಗಳನ್ನು ಒಳಗೊಂಡಿರುತ್ತದೆ. ಅಲ್ಲದೆ ಚಾಲಕನು ಮರಣಾನಂತರ ಅಂಗಾಂಗಗಳನ್ನು ದಾನ ಮಾಡುವ ಬಗ್ಗೆಯು ಈ ಸ್ಮಾರ್ಟ್​ ಕಾರ್ಡ್​ನಲ್ಲಿ ಘೋಷಿಸಿಕೊಳ್ಳಬಹುದು. ಇದರ ಜತೆಗೆ ವಾಹನದಿಂದ ಹೊರ ಸೂಸುವ ಮಾಲಿನ್ಯದ ಅಂಶಗಳ ಬಗ್ಗೆಯು ಸ್ಮಾರ್ಟ್​​ ಕಾರ್ಡ್​​ನಲ್ಲಿ ಮಾಹಿತಿ ಲಭಿಸಲಿದೆ. ನಿಮ್ಮ ಹಳೆ ಡ್ರೈವಿಂಗ್‌ ಲೈಸನ್ಸ್​ನ ಮರು ನವೀಕರಣದ ಸಂದರ್ಭದಲ್ಲಿ ಹೊಸ ಮಾದರಿಯ ಸ್ಮಾರ್ಟ್​ ಡಿ.ಎಲ್‌.ಗಳನ್ನು ನೀಡಲಾಗುತ್ತದೆ. ಈ ಹೊಸ ಡ್ರೈವಿಂಗ್ ಲೈಸನ್ಸ್​ ಪಡೆಯಲು ಕೇವಲ 15 ರೂ.ಗಳಿಂದ 20 ರೂ. ಶುಲ್ಕವನ್ನು ಮಾತ್ರ ಪಾವತಿಸಿದರೆ ಸಾಕಾಗುತ್ತದೆ. ಆರ್​ಟಿಒ ಕೇಂದ್ರದಲ್ಲಿ 32 ಸಾವಿರ ಹೊಸತು ಮತ್ತು ಹಳೇ ಡಿ.ಎಲ್‌.ಗಳನ್ನು ಮರು ನವೀಕರಿಸಲಾಗತ್ತದೆ ರಸ್ತೆ ಸಾರಿಗೆ ಸಚಿವಾಲಯ ತಿಳಿಸಿದೆ.
naadle If you like this article, click on the button below

Offers

Want to Add your Offers, contact Naadle at 7090787344 or Email us at info@naadle.com