Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಇಂದು ತುಳುನಾಡಿಗೆ ಪತ್ತನಾಜೆ..!!

indu tulunadige pattanaje-naadle
Share This:

ಇಂದು ತುಳುನಾಡಿಗೆ ಪತ್ತನಾಜೆ; ಅಂದರೆ ಬೇಷ (ಮೇಷ) ತಿಂಗಳ ಹತ್ತನೇ ದಿನ. ಅನಾದಿಯಿಂದಲೇ ತುಳುನಾಡಿನ ಜನ ತಮಗೆ ತಾವೇ ವಿಧಿಸಿಕೊಂಡು ಬಂದಿರುವ ಧಾರ್ಮಿಕ, ಸಾಮಾಜಿಕ ಗಡುವೇ ಈ ಪತ್ತನಾಜೆ. ಅಂದಿನಿಂದ ಇಂದಿಗೂ ಆಚರಣೆ, ನಂಬಿಕೆಯ ತಳಹದಿಯಲ್ಲಿ ಈ ಪತ್ತನಾಜೆ ಪದ್ಧತಿಯ ಆಚರಣೆ ಅನುಚಾನವಾಗಿ ನಡೆದು ಬಂದಿದೆ. ಈ ಪತ್ತನಾಜೆಯಂದು ದೇವಸ್ಥಾನಗಳಲ್ಲಿ ನಡೆಯುವ ವಾರ್ಷಿಕ ಜಾತ್ರೋತ್ಸವ, ವಿಶೇಷ ಪರ್ವಗಳು , ಉತ್ಸವಗಳು ಕೊನೆಗೊಳ್ಳುತ್ತದೆ. ಮುಂದಿನ ಮೂರು ತಿಂಗಳು ಬಿಡುವು; ಈ ಸಂದರ್ಭದಲ್ಲಿ ಯಾವುದೇ ವಿಶೇಷ ಉತ್ಸವಗಳು ಇಲ್ಲಿನ ದೇವಸ್ಥಾನಗಳಲ್ಲಿ ನಡೆಯುವುದಿಲ್ಲ, ನಿತ್ಯ ಪೂಜೆ, ನಿತ್ಯ ಬಲಿ ಮಾತ್ರ ಮುಂದುವರೆಸಿಕೊಂಡು ಹೋಗಲಾಗುತ್ತದೆ ಅಷ್ಟೆ. ಈ ಪತ್ತನಾಜೆ ಪರಿಪಾಠವನ್ನು ತುಳು ಭಾಷಿಕರು ಹಬ್ಬಿಕೊಂಡಿರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಪಾಲಿಸಲಾಗುತ್ತದೆ.indu tulunadige pattanaje-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ವಿಶೇಷವಾಗಿ ದೈವಾರಾಧನೆಯ ಅಂಗಳವಾಗಿರುವ ತುಳುನಾಡಿಲಿನಲ್ಲಿ ಕೋಲ, ನೇಮ, ತಂಬಿಲ, ಅಗೇಲು, ಮುಂತಾದ ದೈವಾಚರಣೆಗಳು, ಗ್ರಾಮ ದೈವಗಳು ಪರ್ವ ಮುಂತಾದವು ಈ ಪತ್ತನಾಜೆಯೊಂದು ಮುಗಿಯಲೇಬೇಕು ಎಂಬುದು ಇಲ್ಲಿನ ನಂಬಿಕೆ. ಪತ್ತನಾಜೆ ಮುಗಿದರೆ ದೈವಗಳು ಘಟ್ಟ ಹತ್ತುತ್ತವೆ ಎಂಬ ನಂಬಿಕೆಯೂ ಇದರ ಒಳಗೆ ಹೆಣೆದು ಕೊಂಡಿದೆ. ಬೇಷ ತಿಂಗಳ ಹತ್ತನೇ ದಿನವೇ ಪತ್ತನಾಜೆ. ಅಂದಿನಿಂದ ಮಳೆಗಾಲ ಆರಂಭ ಎಂಬುದು ಅನಾದಿಯಿಂದಲೂ ತುಳುನಾಡಿನ ಹವಾಮಾನ ಅಭ್ಯಾಸ ಮಾಡಿದ ಇಲ್ಲಿನ ಜನ ಮಾಡಿಕೊಂಡ ಪಂಚಾಂಗ. ಆರು ತಿಂಗಳು ಮಳೆ, ಆರು ತಿಂಗಳು ಬಿಸಿಲು ಎಂಬುದು ತುಳುನಾಡಿನ ಹವಾಮಾನ. ಬಿಸು ಪರ್ಬದ ದಿನ ಹೊಸ ವರ್ಷದ ಬೇಸಾಯಕ್ಕೆ ಮುನ್ನುಡಿ ಬರೆಯುವ ಕ್ರಮ ಹಿಂದೆ ಚಾಲ್ತಿಯಲ್ಲಿತ್ತು. ಬಳಿಕ ಬೇಸಾಯದ ಕೆಲಸದಲ್ಲಿ ರೈತರು ಬಿಡುವಿಲ್ಲದೆ ತೊಡಗಿಕೊಳ್ಳುವ ಕಾರಣ ನಂತರ ಉತ್ಸವಾದಿ ಸಂಭ್ರಮಗಳಲ್ಲಿ ಪಾಲ್ಗೊಳ್ಳಲು ಯಾರಿಗೂ ಪುರುಸೊತ್ತಿಲ್ಲ. ಅದೇ ರೀತಿ ಮಳೆಯ ಮಧ್ಯೆ ಯಾವ ಉತ್ಸವ ನಡೆಸುವುದೂ ಅಸಾಧ್ಯ. ಹೀಗಾಗಿ ಈ ಗಡುವು ನಡೆದುಕೊಂಡು ಬಂದಿದೆ.indu tulunadige pattanaje-naadleದೀಪಾವಳಿ ಬಳಿಕ ತಿರುಗಾಟ ಆರಂಭಿಸುವುದು ಯಕ್ಷಗಾನ ಮೇಳಗಳ ಪದ್ಧತಿ. ತಿರುಗಾಟ ಪೂರೈಸಿ ಪತ್ತನಾಜೆಗೆ ಹೊರಟ ಠಾವಿಗೆ ಮರಳಿ ಬಂದು ತಿರುಗಾಟ ಮುಕ್ತಾಯ ಮಾಡುವುದು ಕ್ರಮ. ಇದಕ್ಕೆ ಮೇಳ ಒಳಹೋಗುವುದು ಅನ್ನುತ್ತಾರೆ. ದ.ಕ, ಉಡುಪಿ, ಉ.ಕ, ಕಾಸರಗೋಡು ಜಿಲ್ಲೆಗಳಲ್ಲಿ ದೇವಸ್ಥಾನಗಳಿಂದ ಹೊರಡುವ ಮೇಳಗಳಲ್ಲಿ ಹರಕೆ ಮೇಳಗಳು ಹಾಗೂ ವೃತ್ತಿಪರ ಮೇಳಗಳು ಅಂತ 45ಕ್ಕೂ ಅಧಿಕ ಸಂಖ್ಯೆಯಲ್ಲಿ ತಿರುಗಾಟಗೈದವು. ಈ ಎಲ್ಲ ಮೇಳಗಳು ಆರು ತಿಂಗಳು ಕಾಲಮಿತಿಯ ಅಥವಾ ರಾತ್ರಿಯಿಡೀ ಆಟದ ನೆಲೆಯಲ್ಲಿ ತಿರುಗಾಟ ನಡೆಸಿ ರಂಜಿಸಿವೆ.

 

Offers

Want to Add your Offers, contact Naadle at 7090787344 or Email us at info@naadle.com