ಇಂದು ಮಧ್ಯಾಹ್ನ 2:43ಕ್ಕೆ ನಭಕ್ಕೆ ಚಿಮ್ಮಲಿರುವ ಚಂದ್ರಯಾನ-2..!!

indu-madhyana-2-43kke-nabhakke-chimmaliruva-chandrayana-2-naadle
Share This:

ಜುಲೈ 15ರಂದು ತಾಂತ್ರಿಕ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ ಚಂದ್ರಯಾನ-2 ಉಡ್ಡಯನ ಇಂದು ಮಧ್ಯಾಹ್ನ 2:43ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ನಡೆಯಲಿದೆ.indu-madhyana-2-43kke-nabhakke-chimmaliruva-chandrayana-2-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಮಧ್ಯಾಹ್ನ 1:30ರಿಂದ ಆರಂಭವಾಗಲಿರುವ ಈ ಮಹತ್ಕಾರ್ಯ ಎಲ್ಲರಲ್ಲೂ ಕೌತುಕ ಆತಂಕಗಳನ್ನು ಸೃಷ್ಟಿಸಿದೆ. ಕ್ರಯೋಜೆನಿಕ್ ಎಂಜಿನ್‌ನಲ್ಲಿ ಹೀಲಿಯಂ ಇಂಧನ ಸೋರಿಕೆ ಕಾರಣದಿಂದ ಜುಲೈ 15ರ ಉಡ್ಡಯನವನ್ನು ಮುಂದೂಡಲಾಗಿತ್ತು. ಇದೀಗ ತಾಂತ್ರಿಕ ದೋಷ ಸರಿಪಡಿಸಲಾಗಿದ್ದು ಸೋರಿಕೆ ಸ್ಥಗಿತಗೊಂಡಿದೆ. ಹೀಗಾಗಿ ಚಂದ್ರಯಾನ-2 ಉಡ್ಡಯನಕ್ಕೆ ಇಸ್ರೋ ಸಜ್ಜಾಗಿದೆ. ‘ಕಳೆದ ವಾರ ಉಡ್ಡಯನ ಸಮಯದಲ್ಲಿ ಕಾಣಿಸಿಕೊಂಡಿದ್ದ ತಾಂತ್ರಿಕ ದೋಷವನ್ನು ಸಮರ್ಪಕವಾಗಿ ಪರಿಶೀಲಿಸಿ ಸರಿಪಡಿಸಲಾಗಿದೆ. ಗಗನನೌಕೆ ಮತ್ತು ಅದನ್ನು ಹೊತ್ತಿರುವ ರಾಕೆಟ್ ಕಾರ್ಯ ಚಟುವಟಿಕೆಗಳು ನಿರೀಕ್ಷೆಯಂತೆ ಇವೆ. ಯಾವ ಅಡ್ಡಿಯೂ ಇಲ್ಲ’ ಎಂದು ತಿಳಿಸಿದ್ದಾರೆ. ಲ್ಯಾಂಡರ್ (ವಿಕ್ರಂ), ರೋವರ್ (ಪ್ರಜ್ಞಾನ್)ಗಳ ಪರೀಕ್ಷೆಯನ್ನು ಕರಾರುವಕ್ಕಾಗಿ ನಡೆಸಲಾಗಿದೆ. ಭೂಮಿ ಮೇಲ್ಮೈಗೆ ಹೋಲಿಸಿದರೆ ಚಂದ್ರನ ಮೇಲ್ಮೈ ಭಿನ್ನವಾಗಿದ್ದು, ಕುಳಿ, ಬಂಡೆ ಮತ್ತು ಧೂಳಿನಿಂದ ಕೂಡಿದೆ. ಇಲ್ಲಿ ಪರಿಶೋಧನಾ ಸಾಧನಗಳು ಚಲಿಸಬೇಕಾದರೆ ವಿಶಿಷ್ಟ ವಿನ್ಯಾಸ ಮತ್ತು ತಂತ್ರಜ್ಞಾನ ಅವಶ್ಯಕ. ಹೀಗಾಗಿ ಚಂದ್ರನ ನೆಲವನ್ನು ಕೃತಕವಾಗಿ ಸೃಷ್ಟಿಸಿ ಅದರ ಮೇಲೆ ವಿಕ್ರಂ ಮತ್ತು ಪ್ರಜ್ಞಾನ್​ಗಳ ಚಲನೆ ಪರೀಕ್ಷಿಸಿದ್ದೇವೆ ಎಂದು ಇಸ್ರೋ ಅಂಗಸಂಸ್ಥೆಯಾದ ಯು.ಆರ್.ರಾವ್ ಉಪಗ್ರಹ ಕೇಂದ್ರದ (ಯುಆರ್​ಎಸ್​ಸಿ) ನಿವೃತ್ತ ವಿಜ್ಞಾನಿ ಎಂ.ಅಣ್ಣಾದೊರೈ ತಿಳಿಸಿದ್ದಾರೆ.indu-madhyana-2-43kke-nabhakke-chimmaliruva-chandrayana-2-naadleಬಾಹುಬಲಿ ಎಂದೇ ಕರೆಯಲಾಗುವ ದೈತ್ಯ ಜಿಎಸ್​ಎಲ್​ವಿ ಎಂಕೆ-3 ರಾಕೆಟ್ ಈ ಹಿಂದಿನ ಎರಡು ಉಡಾವಣೆಯಲ್ಲೂ ಯಶಸ್ವಿಯಾಗಿದೆ. ಹೀಗಾಗಿ ಈ ರಾಕೆಟ್ ಬಗ್ಗೆ ಅನುಮಾನ ಬೇಡ ಎಂದು ಇಸ್ರೋದ ಇಬ್ಬರು ಮಾಜಿ ಅಧ್ಯಕ್ಷರು ಹೇಳಿದ್ದಾರೆ.  ಚಂದ್ರಯಾನ–2 ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. ಚಂದ್ರನ ದಕ್ಷಿಣ ಧ್ರುವದ ಬಹುತೇಕ ಭಾಗವು ಸದಾ ಕತ್ತಲಲ್ಲೇ ಇರುತ್ತದೆ. ಈವರೆಗೆ ಯಾವುದೇ ದೇಶದ ಸಂಶೋಧನಾ ನೌಕೆ ದಕ್ಷಿಣ ಧ್ರುವವನ್ನು ತಲುಪಿಲ್ಲ. ಆ ಸ್ಥಳವನ್ನು ತಲುಪಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿರುವ ಪಳೆಯುಳಿಕೆಗಳ ಅಧ್ಯಯನ ನಡೆಸಲಾಗುತ್ತದೆ. ನಮ್ಮ ಸೌರವ್ಯೂಹದ ಆರಂಭಿಕ ಹಂತದ ಸ್ಥಿತಿಗತಿಗಳು ಈ ಪಳೆಯುಳಿಕೆಗಳಲ್ಲಿ ದಾಖಲಾಗಿರುವ ಸಾಧ್ಯತೆ ಇದೆ. ಚಂದ್ರಯಾನ–2 ಹೊಸ ವೈಜ್ಞಾನಿಕ ಆವಿಷ್ಕಾರಗಳಿಗೆ ಕಾರಣವಾಗಲಿದೆ.

 

Offers

Want to Add your Offers, contact Naadle at 7090787344 or Email us at info@naadle.com