ಐಂದ್ರಿತಾ-ದಿಗಂತ್ ಕಲ್ಯಾಣ ಇಂದು…!!

indrita diganth kalyana indu-naadle
Share This:

ಮತ್ತೊಂದು ತಾರಾ ಜೋಡಿಯ ಮದುವೆಗೆ ಸ್ಯಾಂಡಲ್ ವುಡ್ ಸಾಕ್ಷಿಯಾಗುತ್ತಿದೆ. ‘ಮನಸಾರೆ’ ಮೂಲಕ ಬೆಳ್ಳಿತೆರೆಯಲ್ಲಿ ಒಂದಾಗಿದ್ದ ನಟ ದಿಗಂತ್ ಮತ್ತು ನಟಿ ಐಂದ್ರಿತಾ ರೇ ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹಲವು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರೂ ಇಂದು (ಡಿ.12) ಸಂಜೆ 6.30ಕ್ಕೆ ಸಪ್ತಪದಿ ತುಳಿಯಲಿದ್ದಾರೆ. ಚಿಕ್ಕಬಳ್ಳಾಪುರದ ನಂದಿ ಬೆಟ್ಟದ ಸಮೀಪವಿರುವ ಖಾಸಗಿ ರೆಸಾರ್ಟ್​ನಲ್ಲಿ ಈ ಸೆಲೆಬ್ರಿಟಿ ಜೋಡಿ ವಿವಾಹ ನೆರವೇರಲಿದೆ. ಪ್ರಕೃತಿಯ ಹಚ್ಚ ಹಸಿರಿನ ನಡುವೆ ಸರಳವಾಗಿ ಮದುವೆ ಮಾಡಲು ಎರಡೂ ಕುಟುಂಬದ ಸದಸ್ಯರು ನಿರ್ಧರಿಸಿದ್ದಾರೆ.indrita diganth kalyana indu-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com


ತೆರೆಮೇಲೆ ಇಬ್ಬರನ್ನೂ ಒಂದಾಗಿಸಿದ್ದು ನಿರ್ದೇಶಕ ಯೋಗರಾಜ್ ಭಟ್. ಅದೇ ರೀತಿ ಐಂದ್ರಿತಾರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಮಹೇಶ್ ಬಾಬು ಸೇರಿ ಹಲವಾರು ನಿರ್ದೇಶಕರು ಈ ವಿವಾಹಕ್ಕೆ ಸಾಕ್ಷಿ ಆಗಲಿದ್ದಾರೆ. ಸ್ಯಾಂಡಲ್​ವುಡ್​ನ ತಾರೆಯರಾದ ಪ್ರಜ್ವಲ್ ದೇವರಾಜ್, ಪುನೀತ್ ರಾಜ್​ಕುಮಾರ್, ದರ್ಶನ್, ಸುದೀಪ್, ಶಿವರಾಜ್​ಕುಮಾರ್, ಚಿರಂಜೀವಿ ಸರ್ಜಾ ಸೇರಿ ಹಲವರು ಆಗಮಿಸುವ ನಿರೀಕ್ಷೆ ಇದೆ. ಅಚ್ಚರಿ ಎಂದರೆ, ಪಕ್ಕಾ ಭಾರತೀಯ ಶೈಲಿಯ ವಸ್ತ್ರ ಧರಿಸಿಯೇ ಮದುವೆಗೆ ಬರಬೇಕು ಎಂದು ಆಮಂತ್ರಣ ಪತ್ರಿಕೆಯಲ್ಲಿ ಸೂಚಿಸಲಾಗಿದೆ.indrita diganth kalyana indu-naadleಬಂಗಾಳ ಮೂಲದ ಐಂದ್ರಿತಾ ಹಾಗೂ ಮಲೆನಾಡಿನ ಹುಡುಗ ದಿಗಂತ್ ‘ಮನಸಾರೆ’ ಚಿತ್ರದ ಬಳಿಕವೇ ಪ್ರೀತಿಯಲ್ಲಿ ಮುಳುಗಿದ್ದರು ಎಂದು ಸುದ್ದಿ ಹಬ್ಬಿತ್ತು. ‘ಪಾರಿಜಾತ’ ಮುಂತಾದ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಲ್ಲದೆ, ಪಾರ್ಟಿ, ಸಮಾರಂಭಗಳಲ್ಲೂ ಜತೆಯಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಆದರೆ ಈ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ‘ಕಥೆಯೊಂದು ಶುರುವಾಗಿದೆ’ ಚಿತ್ರದ ಪ್ರಚಾರದ ವೇಳೆ ತಮ್ಮ ಪ್ರೇಮಕಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ಮೊದಲ ಬಾರಿಗೆ ಜಗಜ್ಜಾಹೀರು ಮಾಡಿದರು. ಅಂದಿನಿಂದಲೇ ಈ ಕ್ಯೂಟ್ ಜೋಡಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗೆಳೆಯರು ಶುಭ ಕೋರಲು ಆರಂಭಿಸಿದರು. ಇತ್ತೀಚೆಗಷ್ಟೇ ಸಮುದ್ರ ತೀರದ ನಡುವೆ ಆಂಡಿ-ದಿಗ್ಗಿ ನಿಶ್ಚಿತಾರ್ಥ ಮಾಡಲಾಗಿತ್ತು. ಅದೇ ರೀತಿ ಇಂದು ಪ್ರಕೃತಿಯ ಮಡಿಲಿನಲ್ಲಿ ಮದುವೆ ನೆರವೇರಲಿದೆ.
naadle If you like this article, click on the button below

Offers

Want to Add your Offers, contact Naadle at 7090787344 or Email us at info@naadle.com