ಇಂದಿನಿಂದ ವಿಂಬಲ್ಡನ್ ಗ್ರಾಂಡ್ ಸ್ಲಾಂ ಟೆನಿಸ್‌ ಟೂರ್ನಿ..!!

indininda wimbledon grand slam tenni turni-naadle
Share This:

ವಿಶ್ವಕಪ್‌ ಕ್ರಿಕೆಟ್‌ ಕೂಟದ ನಡುವೆ ಲಂಡನ್‌ನಲ್ಲಿಯೇ ವರ್ಷದ ಮೂರನೇ ಗ್ರ್ಯಾನ್‌ ಸ್ಲಾಮ್‌ ಕೂಟವಾದ ವಿಂಬಲ್ಡನ್‌ ಇಂದಿನಿಂದ ಆರಂಭವಾಗುತ್ತಿದೆ. ಮೂವರು ಸರ್ವಶ್ರೇಷ್ಠ ಆಟಗಾರರನ್ನು ಒಂದೇ ಕಾಲಘಟ್ಟದಲ್ಲಿ ಹೊಂದಿದ ತೀರಾ ಅಪರೂಪದ ವೈಯಕ್ತಿಕ ಕ್ರೀಡೆ ಟೆನಿಸ್. ರೋಜರ್ ಫೆಡರರ್, ನೊವಾಕ್ ಜೋಕೊವಿಕ್ ಹಾಗೂ ರಾಫೆಲ್ ನಡಾಲ್​ರ ಸುವರ್ಣ ಯುಗದ ಟೆನಿಸ್ ದಿನಗಳು 12ಕ್ಕಿಂತ ಅಧಿಕ ವರ್ಷಗಳ ಕಾಲ ಮುಂದುವರಿದಿದೆ. ತಮ್ಮ ನಡುವೆ 53 ಗ್ರಾಂಡ್ ಸ್ಲಾಂ ಪ್ರಶಸ್ತಿ ಹಂಚಿಕೊಂಡಿರುವ ದಿಗ್ಗಜರು ಈ ಪಟ್ಟಿಗೆ ಮತ್ತೊಂದನ್ನು ಸೇರಿಸುವ ನಿಟ್ಟಿನಲ್ಲಿ ಇಂದಿನಿಂದ ಆರಂಭವಾಗಲಿರುವ 133ನೇ ಆವೃತ್ತಿಯ ವಿಂಬಲ್ಡನ್ ಗ್ರಾಂಡ್ ಸ್ಲಾಂ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. ತಾಯಿಯಾದ ಬಳಿಕ ಮೊದಲ ಗ್ರ್ಯಾಂಡ್‌ಸ್ಲಾಂ ಗೆಲ್ಲಲು ಹೋರಾಟ ನಡೆಸುತ್ತಿರುವ ಮಾಜಿ ನಂ.1 ಸೆರೆನಾ ವಿಲಿಯಮ್ಸ್‌, ಈ ಬಾರಿ ವಿಂಬಲ್ಡನ್‌ನಲ್ಲಿ ತಮ್ಮ ಪ್ರಶಸ್ತಿ ಬರ ನೀಗಿಸಿಕೊಳ್ಳಲು ಪ್ರಯತ್ನಿಸಲಿದ್ದಾರೆ. ಫ್ರೆಂಚ್‌ ಓಪನ್‌ ಚಾಂಪಿಯನ್‌, ವಿಶ್ವ ನಂ.1 ಆಸ್ಪ್ರೇಲಿಯಾದ ಆಶ್ಲೆ ಬಾರ್ಟಿ, ಹಾಲಿ ಚಾಂಪಿಯನ್‌ ಜರ್ಮನಿಯ ಆ್ಯಂಜಿಲಿಕ್‌ ಕೆರ್ಬರ್‌, ಮಾಜಿ ನಂ.1 ಸಿಮೋನಾ ಹಾಲೆಪ್‌ ಸಹ ಪ್ರಶಸ್ತಿ ರೇಸ್‌ನಲ್ಲಿದ್ದಾರೆ.indininda wimbledon grand slam tenni turni-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ವಿಂಬಲ್ಡನ್‌ ಟೆನಿಸ್‌ ಪಂದ್ಯಾವಳಿಯ ಮುಖ್ಯ ಸುತ್ತಿನಲ್ಲಿ ಆಡುವ ಅರ್ಹತೆ ಗಳಿಸಿರುವ ಭಾರತದ ಪ್ರಜ್ಞೆಶ್ ಗುಣೇಶ್ವರನ್‌ ತಮ್ಮ ಮೊದಲ ಪಂದ್ಯದಲ್ಲೇ ಕೆನಡಾದ ಖ್ಯಾತ ಆಟಗಾರ ಮಿಲೋಸ್‌ ರಾನಿಕ್‌ ಅವರನ್ನು ಎದುರಿಸಲಿದ್ದಾರೆ. ಇಲ್ಲಿ ಗೆಲ್ಲುವುದು ಗುಣೇಶ್ವರನ್‌ಗೆ ಭಾರೀ ಸವಾಲಾಗಲಿದೆ. ಪುರುಷರ ಡಬಲ್ಸ್‌ನಲ್ಲಿ ಭಾರತದ ಲಿಯಾಂಡರ್‌ ಪೇಸ್‌, ರೋಹನ್‌ ಬೋಪಣ್ಣ, ಜೀವನ್‌ ನೆಡುಚೆಳಿಯನ್‌, ಪೂರವ್‌ ರಾಜಾ ಹಾಗೂ ದಿವಿಜ್‌ ಶರಣ್‌ ಕಣಕ್ಕಿಳಿಯಲಿದ್ದಾರೆ. ಜೀವನ್‌ ಹಾಗೂ ಪೂರವ್‌ ಒಟ್ಟಿಗೆ ಆಡಲಿದ್ದು, ಇನ್ನುಳಿದ ಮೂವರು ವಿದೇಶಿ ಜತೆಗಾರರ ಜತೆ ಆಡಲಿದ್ದಾರೆ.indininda wimbledon grand slam tenni turni-naadleಪುರುಷ ಹಾಗೂ ಮಹಿಳಾ ಸಿಂಗಲ್ಸ್ ವಿಭಾಗದ ಚಾಂಪಿಯನ್ ಆಟಗಾರರು 20 ಕೋಟಿ ರೂಪಾಯಿ ಮೊತ್ತವನ್ನು ಬಹುಮಾನವಾಗಿ ಪಡೆಯಲಿದ್ದಾರೆ. ರನ್ನರ್​ಅಪ್ 10 ಕೋಟಿ ರೂಪಾಯಿ ಪಡೆದುಕೊಳ್ಳಲಿದ್ದಾರೆ.ಇದೇ ಮೊದಲ ಬಾರಿಗೆ ವಿಂಬಲ್ಡನ್‌ನ ಅಂತಿಮ ಸೆಟ್‌ನಲ್ಲಿ ಟೈ ಬ್ರೇಕರ್‌ ಅಳವಡಿಸಲಾಗಿದೆ.

 

Offers

Want to Add your Offers, contact Naadle at 7090787344 or Email us at info@naadle.com