ಇಂದಿನಿಂದ ವನಿತಾ ಐಪಿಎಲ್..!!

indininda vanitha IPL-naadle
Share This:

ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವ ಐಪಿಎಲ್ ಮನರಂಜನೆಯನ್ನು ಮಹಿಳೆಯರ ಕ್ರಿಕೆಟ್​ನಲ್ಲಿಯೂ ಆರಂಭಿಸುವ ಉದ್ದೇಶದೊಂದಿಗೆ ಕಳೆದ ವರ್ಷ ಒಂದು ಪುಟ್ಟ ಹೆಜ್ಜೆ ಇಟ್ಟಿದ್ದ ಬಿಸಿಸಿಐ, ಈ ಬಾರಿ ಮತ್ತೊಂದು ಹೆಜ್ಜೆ ಇಡಲು ಸಿದ್ಧವಾಗಿದೆ. ಮೇ 6ರಿಂದ 11ರ ಅವಧಿಯಲ್ಲಿ ಮೂರು ತಂಡಗಳ ನಡುವೆ ನಾಲ್ಕು ಪಂದ್ಯಗಳು ನಡೆಯಲಿವೆ. ರೌಂಡ್ ರಾಬಿನ್ ಲೀಗ್ ಬಳಿಕ ಅಗ್ರ 2 ತಂಡಗಳು ಫೈನಲ್​ನಲ್ಲಿ ಸೆಣಸಲಿವೆ.
ಸೋಮವಾರ ಮೊದಲ ಪಂದ್ಯದಲ್ಲಿ ಸೂಪರ್‌ನೋವಾಸ್-ಟ್ರಯಲ್‌ಬ್ಲೇಜರ್ ತಂಡಗಳು ಮುಖಾಮುಖೀಯಾಗಲಿವೆ. ಜೈಪುರದ ಸವಾಯಿ ಮಾನ್‌ಸಿಂಗ್‌ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಸೂಪರ್‌ ನೋವಾಸ್ ತಂಡವನ್ನು ಹರ್ಮನ್‌ಪ್ರೀತ್‌ ಕೌರ್‌ ಮುನ್ನಡೆಸಲಿದ್ದು, ಸ್ಮತಿ ಮಂಧಾನ ಟ್ರಯಲ್‌ಬ್ಲೇಜರ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಈ ಬಾರಿಯ ಹೊಸ ತಂಡ ವೆಲಾಸಿಟಿಗೆ ಮಿಥಾಲಿ ರಾಜ್ ಸಾರಥಿ.indininda vanitha IPL-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಭಾರತೀಯ ಕ್ರಿಕೆಟ್​ನ ದೊಡ್ಡ ಸ್ಟಾರ್​ಗಳ ನಡುವೆ ವಿಶ್ವ ಮಹಿಳಾ ಕ್ರಿಕೆಟ್​ನ ಅತ್ಯುತ್ತಮ ತಾರೆಯರೂ ಈ ಬಾರಿ ಆಡುತ್ತಿದ್ದಾರೆ. ಆಸ್ಟ್ರೇಲಿಯಾದ ಆಟಗಾರ್ತಿಯರು ಲೀಗ್​ನಲ್ಲಿ ಇಲ್ಲದೇ ಇದ್ದರೂ, ಇದರಿಂದ ಹೆಚ್ಚಿನ ಸಮಸ್ಯೆ ಆಗಲಾರದು. ಇಂಗ್ಲೆಂಡ್, ನ್ಯೂಜಿಲೆಂಡ್, ಶ್ರೀಲಂಕಾ, ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶದ ಆಟಗಾರ್ತಿಯರು ಆಡಲಿದ್ದಾರೆ. ಡೇನಿಯಲ್ ವ್ಯಾಟ್, ಕಿವೀಸ್​ನ ಅಗ್ರ ಆಲ್ರೌಂಡರ್ ಸೋಫಿ ಡಿವೈನ್, ಅಮೆಲಿಯಾ ಖೆರ್, ಅನುಭವಿ ಸುಜೀ ಬೇಟ್ಸ್, ವೆಸ್ಟ್ ಇಂಡೀಸ್​ನ ಅಗ್ರ ಬ್ಯಾಟುಗಾರ್ತಿ ಸ್ಟೀಫಾನಿ ಟೇಲರ್, ಬಾಂಗ್ಲಾದೇಶದ ಜಹಾನರಾ ಆಲಂ ಹಾಗೂ ಶ್ರೀಲಂಕಾದ ಚಾಮರಿ ಅಟ್ಟಪಟ್ಟು ಲೀಗ್​ನಲ್ಲಿ ಆಡುತ್ತಿದ್ದಾರೆ.

 

Offers

Want to Add your Offers, contact Naadle at 7090787344 or Email us at info@naadle.com