ಇಂದಿನಿಂದ ಹೊಸ ಮೀನುಗಾರಿಕೆ ಋತು ಆರಂಭವಾಗುತ್ತಿದ್ದು ದೋಣಿಗಳು ಕಡಲಿಗಿಳಿಯಲಿವೆ…!!

indininda hosa minigarike rutu arambhavaguttiddu donigalu kadaligiliyalive-naadle
Share This:

ಮಳೆಗಾಲದ 60 ದಿನಗಳ ಸುದೀರ್ಘ‌ ರಜೆಯ ಬಳಿಕ ಇಂದಿನಿಂದ ಹೊಸ ಮೀನುಗಾರಿಕೆ ಋತು ಆರಂಭವಾಗುತ್ತಿದ್ದು. ಮೀನುಗಾರರು ಹೊಸ ನಿರೀಕ್ಷೆಯೊಂದಿಗೆ ಕಡಲಿಗೆ ಇಳಿಯಲು ಸಿದ್ಧತೆ ನಡೆಸಿದ್ದಾರೆ. ಈ ಬಾರಿ ಮುಂಗಾರು ಪ್ರಬಲವಾಗಿದ್ದು, ಕಡಲು ಬಹಳಷ್ಟು ಪ್ರಕ್ಷುಬ್ಧವಾದ ಹಿನ್ನಲೆಯಲ್ಲಿ ಎಲ್ಲ ಬಗೆಯ ಮೀನುಗಾರಿಕೆ ಬೋಟುಗಳು ಇವತ್ತಿನಿಂದಲೇ ಮೀನುಗಾರಿಕೆಗೆ ತೆರಳುವುದು ಕಷ್ಟಸಾಧ್ಯ. ಆದರೆ ಶೇ.10ರಿಂದ 20ರಷ್ಟು ಬೋಟುಗಳು ಬಲೆ ಬೀಸಲು ಸಿದ್ಧತೆ ಕೈಗೊಂಡಿವೆ. ಉಳಿದ ಬೋಟುಗಳು ಮುಂದಿನ ಒಂದು ವಾರದೊಳಗೆ ಕಡಲಿ ಗಿಳಿಯುವ ಸಾಧ್ಯತೆ ಇದೆ.indininda hosa minigarike rutu arambhavaguttiddu donigalu kadaligiliyalive-naadle

Upcoming and Ongoing events

View More Events

Want to Promote your Event, contact Naadle at 9035030300 or Email us at [email protected]


ಮೀನುಗಾರಿಕೆ ಇಂದಿನಿಂದ ಅರಂಭವಾಗುತ್ತಿದ್ದು ಈಗಾಗಲೇ, ಮೀನುಗಾರರು ಬಂದರಿನಲ್ಲಿ ಮೀನುಗಾರಿಕೆಗೆ ತಯಾರಾಗಿದ್ದು. ಈ ಎರಡು ತಿಂಗಳ ಬಿಡುವಿನ ಅವಧಿಯಲ್ಲಿ ಮೀನುಗಾರರು ದೋಣಿಗಳನ್ನು ಸ್ವಚ್ಛಗೊಳಿಸಿ, ಬಣ್ಣ ಬಳಿಯುವ ಕಾರ್ಯ ಮುಗಿಸಿದ್ದಾರೆ. ಯಂತ್ರೋಪಕರಣಗಳು, ಹರಿದ ಬಲೆ ಹಾಗೂ ಹಗ್ಗಗಳನ್ನು ಸರಿಪಡಿಸಲಾಗಿದೆ. ಇನ್ನೂ ಕೆಲ ದೋಣಿ ಗಳ ದುರಸ್ತಿ ಕಾರ್ಯ ತ್ವರಿತಗತಿಯಲ್ಲಿ ಸಾಗಿದ್ದು, ಮೀನುಗಾರಿಕೆಗೆ ತೆರಳಲು ಅಂತಿಮ ಸಿದ್ಧತೆಯಲ್ಲಿ ತೊಡಗಿದ್ದಾರೆ. ಮೀನುಗಾರರು ಮುಹೂರ್ತ ನೋಡಿ ಈಗಾಗಲೇ ತಮ್ಮ ದೋಣಿಗಳಿಗೆ ಪೂಜೆ ಕೂಡ ಮಾಡಿದ್ದಾರೆ.indininda hosa minigarike rutu arambhavaguttiddu donigalu kadaligiliyalive-naadleದೋಣಿಯಲ್ಲಿ ಕೆಲಸ ಮಾಡುವ ನುರಿತ ಕಾರ್ಮಿಕರಿಗೆ ಬೇಡಿಕೆ ಹೆಚ್ಚು. ಕೆಲ ದೋಣಿ ಮಾಲೀಕರು ಈಗಾಗಲೇ ಕಾರ್ಮಿಕರಿಗೆ ಮುಂಗಡ ಹಣ ನೀಡಿದ್ದಾರೆ. ಇಲ್ಲಿನ ದೋಣಿಗಳಲ್ಲಿ ಸ್ಥಳೀಯರಲ್ಲದೇ ಒಡಿಸ್ಸಾ, ಉತ್ತರಪ್ರದೇಶದ ಕಾರ್ಮಿಕರು ಸಹ ಕಾರ್ಯನಿರ್ವಹಿಸುತ್ತಾರೆ. ದೋಣಿಗಳಲ್ಲಿ ಕೆಲಸ ಮಾಡುವವರಿಗೆ ಸಾಮಾನ್ಯವಾಗಿ ಮೀನುಗಾರಿಕೆಯಿಂದ ಬಂದ ಆದಾಯದಲ್ಲಿ ಖರ್ಚು ಕಳೆದು ಉಳಿದ ಲಾಭವನ್ನು ಶೇಕಡಾವಾರು ಲೆಕ್ಕದಲ್ಲಿ ಹಂಚಲಾಗುತ್ತದೆ. ದೋಣಿಯಲ್ಲಿನ ಚಾಲಕ (ತಾಂಡ್ಲ) ಹಾಗೂ ದೋಣಿಯ ಎತ್ತರದ ಸ್ಥಳದಲ್ಲಿ ನಿಂತು ನೀರಿನಲ್ಲಿ ಮೀನಿನ ಗುಂಪನ್ನು ಪತ್ತೆ ಹಚ್ಚುವವನಿಗೆ (ಹಾರೋಮನ್) ಸ್ವಲ್ಪ ಹೆಚ್ಚಿನ ಪಾಲು ಇರುತ್ತದೆ. ಮೀನುಗಾರಿಕೆ ಋತು ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಮಂಗಳೂರಿನ ಧಕ್ಕೆಯಲ್ಲಿ ಚಟುವಟಿಕೆಗಳು ಗರಿಗೆದರಿವೆ. ಎರಡು ತಿಂಗಳಿನಿಂದ ಬಿಕೋ ಎನ್ನುತ್ತಿದ್ದ ಧಕ್ಕೆಗೆ ಹೊಸ ರೂಪ ದೊರೆಯುತ್ತಿದೆ. ರಜೆಯ ಮೂಡ್‌ನ‌ಲ್ಲಿದ್ದ ಹೊರ ರಾಜ್ಯ, ಜಿಲ್ಲೆ ಹಾಗೂ ಸ್ಥಳೀಯ ಮೀನುಗಾರರು ಧಕ್ಕೆಯತ್ತ ಮುಖ ಮಾಡಿದ್ದಾರೆ. ರಜೆಯ ಸಂದರ್ಭ ದುರಸ್ತಿ ಸಹಿತ ಇತರ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಿ ಬೋಟುಗಳು ಈಗ ಧಕ್ಕೆಯಲ್ಲಿ ಲಂಗರು ಹಾಕಿ, ಮೀನುಗಾರಿಕೆಗೆ ತೆರಳಲು ಸನ್ನದ್ಧವಾಗಿ ನಿಂತಿವೆ. ಧಕ್ಕೆಯಲ್ಲಿ ಸುಮಾರು 1,420 ಮೋಟಾರ್‌ ಅಳವಡಿಸಿದ ನಾಡದೋಣಿ ಹಾಗೂ 1,234ರಷ್ಟು ಯಾಂತ್ರೀಕೃತ ದೋಣಿಗಳಿವೆ. ಮಲ್ಪೆಯಲ್ಲಿ 700 ನಾಡದೋಣಿಗಳು, 2,200 ಮೋಟಾರ್‌ ಅಳವಡಿಸಿದ ದೊಡ್ಡ ದೋಣಿಗಳಿವೆ.indininda hosa minigarike rutu arambhavaguttiddu donigalu kadaligiliyalive-naadle2017ರ ಎಪ್ರಿಲ್‌ನಿಂದ 2018ರ ಮಾರ್ಚ್‌ ವರೆಗೆ ಉಭಯ ಜಿಲ್ಲೆಗಳಲ್ಲಿ ಒಟ್ಟು 3,236.99 ಕೋ.ರೂ. ಮೌಲ್ಯದ 2,92,061 ಟನ್‌ ಮೀನು ಹಿಡಿಯಲಾಗಿತ್ತು. ಈ ಪೈಕಿ ದ.ಕ. ಜಿಲ್ಲೆಯಲ್ಲಿ 1,656.99 ಕೋ.ರೂ. ಮೌಲ್ಯದ 1,63,925 ಟನ್‌ ಮೀನು ಲಭ್ಯವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ (1,582.90 ಕೋ.ರೂ. ಮೌಲ್ಯದ 1,52,573 ಟನ್‌) 11,352 ಟನ್‌ ಅಧಿಕ ಮೀನು ಲಭ್ಯ ವಾಗಿತ್ತು. ಉಡುಪಿ ಜಿಲ್ಲೆಯಲ್ಲಿ ಮಾರ್ಚ್‌ವರೆಗೆ, 1,580.00 ಕೋ.ರೂ. ಮೌಲ್ಯದ 1,28,136 ಟನ್‌ ಮೀನು ಲಭ್ಯವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ (1,456.64 ಕೋ.ರೂ. ಮೌಲ್ಯದ 1,44,525 ಟನ್‌) 16,389 ಟನ್‌ ಕಡಿಮೆ ಮೀನು ಲಭ್ಯವಾಗಿತ್ತು. 2015-16ರಲ್ಲಿ ದ.ಕ. ಜಿಲ್ಲೆಯಲ್ಲಿ 1,370.53 ಕೋ.ರೂ. ಮೌಲ್ಯದ 1,51,458 ಟನ್‌ ಹಾಗೂ ಉಡುಪಿ ಜಿಲ್ಲೆಯಲ್ಲಿ 1,463.66 ಕೋ.ರೂ. ಮೌಲ್ಯದ 1,51,099 ಟನ್‌ ಮೀನು ಹಿಡಿಯಲಾಗಿದೆ.indininda hosa minigarike rutu arambhavaguttiddu donigalu kadaligiliyalive-naadleಮಳೆಗಾಲದಲ್ಲಿ ಮೀನುಗಳು ಸಂತಾನಭಿವೃದ್ಧಿಯಲ್ಲಿ ತೊಡಗುತ್ತವೆ. ಹಾಗಾಗಿ ಸರ್ಕಾರ ಪ್ರತಿ ವರ್ಷ ಜುಲೈ 15ರಿಂದ 45 ದಿನಗಳ ಕಾಲ ಆಳಸಮುದ್ರದ ಮೀನುಗಾರಿಕೆಗೆ ನಿಷೇಧ ಹೇರುತ್ತಿತ್ತು. ಈ ಬಾರಿ ನಿಷೇಧದ ಅವಧಿಯನ್ನು 60 ದಿನಗಳಿಗೆ ವಿಸ್ತರಿಸಲಾಗಿತ್ತು. ಸಮುದ್ರ ತಿಳಿಯಾಗಿದ್ದು, ಮತ್ತಷ್ಟು ತಿಳಿಯಾದರೆ ದೋಣಿಗಳು ಮೀನುಗಾರಿಕೆಗೆ ತೆರಳಲು ಅನುಕೂಲವಾಗಲಿದೆ ಎಂಬ ಕಾರಣದಿಂದ. ರಾಜ್ಯದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಡಲತೀರಗಳಲ್ಲಿ ಆಗಸ್ಟ್ 1ರಿಂದ ಅಂದರೆ ಇಂದಿನಿಂದ ದೋಣಿಗಳು ಕಡಲಿಗಿಳಿಯಲಿವೆ.
naadle If you like this article, click on the button below

Offers

Want to Add your Offers, contact Naadle at 9035030300 or Email us at [email protected]