ಇಂದಿನಿಂದ 7ನೇ ಪ್ರೊ ಕಬಡ್ಡಿ ಪಂದ್ಯಾವಳಿ ಆರಂಭ..!!

indininda 7ne pro kabaddi pandyavali arambha-naadle
Share This:

ಪ್ರೊ ಕಬಡ್ಡಿ 7ನೇ ಆವೃತ್ತಿ ಇಂದಿನಿಂದ ಆರಂಭವಾಗಲಿದೆ. ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ಮೊದಲ ಮುಖಾಮುಖೀಯಲ್ಲಿ ಪಾಟ್ನಾ ಪೈರೇಟ್ಸ್‌ ತಂಡವನ್ನು ಎದುರಿಸಲಿದೆ. ಇದಕ್ಕೂ ಮೊದಲು ನಡೆಯಲಿರುವ ಆರಂಭಿಕ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ತಂಡವನ್ನು ಯು ಮುಂಬಾ ಎದುರಿಸಲಿದೆ.indininda 7ne pro kabaddi pandyavali arambha-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಕಳೆದ ಬಾರಿಯಂತೆ ತಂಡಗಳನ್ನು 2 ಗುಂಪುಗಳಲ್ಲಿ ವಿಭಾಗಿಸಲಾಗಿಲ್ಲ. ಎಲ್ಲ 12 ತಂಡಗಳು ಲೀಗ್ ಹಂತದಲ್ಲಿ ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಸೆಣಸಲಿದ್ದು, ಅಗ್ರ 6 ತಂಡಗಳ ನಾಕೌಟ್ ಹಂತಕ್ಕೇರಲಿವೆ. ಅಗ್ರ 2 ತಂಡಗಳು ಸೆಮಿಫೈನಲ್​ಗೆ ನೇರ ಅರ್ಹತೆ ಪಡೆಯಲಿದ್ದರೆ, 3, 4, 5 ಮತ್ತು 6ನೇ ಸ್ಥಾನಿ ತಂಡಗಳು ಕ್ವಾರ್ಟರ್​ಫೈನಲ್ ಮಾದರಿಯ ಎಲಿಮಿನೇಟರ್ ಪಂದ್ಯಗಳಲ್ಲಿ ಆಡಲಿವೆ. ಅಕ್ಟೋಬರ್ 19ರಂದು ಫೈನಲ್ ಪಂದ್ಯ ನಡೆಯಲಿದೆ.indininda 7ne pro kabaddi pandyavali arambha-naadle ಪಿಕೆಎಲ್​ನಲ್ಲಿ ಈ ಬಾರಿ ಪಂದ್ಯಗಳ ಸಮಯ ಬದಲಾವಣೆ ಮಾಡಲಾಗಿದ್ದು, ಅರ್ಧ ಗಂಟೆ ಮೊದಲೇ ಪಂದ್ಯಗಳು ಆರಂಭಗೊಳ್ಳಲಿವೆ. ರಾತ್ರಿ 7.30ರಿಂದ ಮೊದಲ ಹಾಗೂ 8.30ರಿಂದ 2ನೇ ಪಂದ್ಯ ನಡೆಯಲಿದೆ. ಹಿಂದಿನ ಆವೃತ್ತಿಗಳಲ್ಲಿ ರಾತ್ರಿ 8 ಹಾಗೂ 9ಕ್ಕೆ ಪಂದ್ಯಗಳು ಆರಂಭಗೊಳ್ಳುತ್ತಿದ್ದವು.