Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಇಲ್ಲ್ ಒಕ್ಕೆಲ್ ತುಳುಚಲನಚಿತ್ರದ ಪೋಸ್ಟರ್ ಬಿಡುಗಡೆ..!!

illokkel-tuluchalanachitrada-poster-bidugade-naadle
Share This:

ಶ್ರೀ ಗಜನಿ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ತಯಾರಾಗುತ್ತಿರುವ ತುಳುಚಿತ್ರ ‘ಇಲ್ಲ್ ಒಕ್ಕೆಲ್’ ಇದರ ಪೋಸ್ಟರ್ ರಿಲೀಸ್ ಸಮಾರಂಭವು ಇತ್ತೀಚೆಗೆ ಶ್ರೀ ಸಾಯಿ ಹೀಲಿಂಗ್ ಸೆಂಟರ್, ಪೊಳಲಿ ಮಂಗಳೂರಿನಲ್ಲಿ ನಡೆಯಿತು. ರೇಕಿ ಮಾಸ್ಟರ್ ವಿಜಯ ಸುವರ್ಣ ಪೊಳಲಿ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದರು, ಬಳಿಕ ಮಾತನಾಡಿದ ಅವರು ಚಿತ್ರದ ಯಶಸ್ಸಿಗೆ ಮತ್ತು ಚಿತ್ರ ತಂಡದ ಕಲಾವಿದರಿಗೆ ಶುಭ ಹಾರೈಸಿದರು. ಖ್ಯಾತ ವಾಸ್ತು ತಜ್ಞರಾದ ಶ್ರೀರಾಜ್ ಕುಮಾರ್, ಚಲನಚಿತ್ರ ನಟರಾದ ಭೋಜರಾಜ್ ವಾಮಂಜೂರು, ಖ್ಯಾತ ಸಂಗೀತ ನಿರ್ದೇಶಕ ವಾಸು ಬಾಯಾರು, ಚಿತ್ರದ ನಿರ್ದೇಶಕರಾದ ಡಾ.ಸುರೇಶ್ ಚಿತ್ರಾಪು, ಶ್ರೀ ಸಾಯಿ ಹೀಲಿಂಗ್ ಸೆಂಟರ್ ನ ಹರೀಶ್ ಗುರೂಜಿ ಸೇರಿದಂತೆ ಹಲವರು ‘ಇಲ್ಲ್ ಒಕ್ಕೆಲ್’ ಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.illokkel-tuluchalanachitrada-poster-bidugade-naadle

Upcoming and Ongoing events

View More Events

Want to Promote your Event, contact Naadle at 9035030300 or Email us at info@naadle.com


ಈ ಚಿತ್ರಕ್ಕೆ ವಾಸುದೇವ ಯಸ್ ಚಿತ್ರಾಪು ಮತ್ತು ಬಿ ಯಮ್ ಶೆಟ್ಟಿ ಬಂಡವಾಳ ಹೂಡುತ್ತಿದ್ದಾರೆ. ಈ ಚಿತ್ರಕ್ಕೆ ಡಾ.ಸುರೇಶ್ ಯಸ್ ಕೋಟ್ಯಾನ್ ಚಿತ್ರಾಪು ಆಕ್ಷನ್ ಕಟ್ ಹೇಳುತ್ತಿದ್ದು ಜೊತೆಗೆ ಚಿತ್ರಕಥೆ-ಸಂಭಾಷಣೆ ಕೂಡ ಇವರೇ ನೀಡಿದ್ದಾರೆ. ಈ ಸಿನಿಮಾಕ್ಕೆ ರಾಜ್ ಷಾ ಮತ್ತು ಸುರೇಶ್ ಚಿತ್ರಾಪು ಅವರ ಸಂಗೀತ ಮತ್ತು ಮಧುಗೌಡ ಅವರ ಛಾಯಾಗ್ರಾಹಣವಿದೆ. ಮಂಗಳೂರು ಬೆಡಗಿ ಅಧ್ವಿತಿ ಶೆಟ್ಟಿ ಈ ಚಿತ್ರದ ನಾಯಕಿ, ಇವರು ಮೊದಲ ಬಾರಿಗೆ ತಮ್ಮ ಮಾತೃಭಾಷೆಯಾದ ತುಳುವಿನಲ್ಲಿ ಅಭಿನಯಿಸುತ್ತಿದ್ದಾರೆ ಹಾಗೂ ಈ ಚಿತ್ರದಲ್ಲಿ ಕೋಸ್ಟಲ್ ವುಡ್ ನ ಅಗ್ರಮಾನ್ಯ ಕಲಾವಿದರಾದ ಕುಸಲ್ದರಸೆ ನವೀನ್ ಡಿ ಪಡೀಲ್, ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್, ನವರಸ ರಾಜೆ ಭೋಜರಾಜ್ ವಾಮಂಜೂರು, ವಿಸ್ಮಯ ವಿನಾಯಕ್, ವಿಜೆ ವಿನೀತ್, ಪಿಲಿಬೈಲ್ ಯಮುನಕ್ಕ ಖ್ಯಾತಿಯ ಚಂದ್ರಕಲಾ ಮೋಹನ್ ಮತ್ತು ಇನ್ನು ಅನೇಕ ಖ್ಯಾತ ಕಲಾವಿದರು ಅಭಿನಯಿಸಿದ್ದಾರೆ. ವಿಶಿಷ್ಟ ಪಾತ್ರದಲ್ಲಿ ಸ್ಯಾಂಡಲ್ ವುಡ್ ನ ಕುರಿ ಬಾಂಡ್ ರಂಗ ಅಭಿನಯಿಸಿದ್ದು, ಇವರು ಮೊದಲಬಾರಿಗೆ ಕೋಸ್ಟಲ್ ವುಡ್ ಗೆ ಕಾಲಿಡುತ್ತಿದ್ದಾರೆ. ಮೊದಲ ಮೂರೂ ಹಂತದ ಚಿತ್ರೀಕರಣವು ಬೆಂಗಳೂರಿನ ಪುಟ್ಟಣ್ಣ ಕಣಗಾಲ್ ಸ್ಟುಡಿಯೋ ಮತ್ತು ಬೆಂಗಳೂರು ಮೂವೀಸ್ ಸ್ಟುಡಿಯೋದಲ್ಲಿ ನಡೆದಿದ್ದು. ಅಂತಿಮ ಹಂತದ ಚಿತ್ರೀಕರಣವು ಏಪ್ರಿಲ್ ತಿಂಗಳ ಮೂರನೇ ವಾರದಲ್ಲಿ ಕರಾವಳಿಯ ವಿವಿಧ ಭಾಗಗಳಲ್ಲಿ ಶೀಘ್ರದಲ್ಲಿ ನಡೆಯಲಿದೆ.
naadle If you like this article, click on the button below

Offers

Want to Add your Offers, contact Naadle at 9035030300 or Email us at info@naadle.com