ಇಲ್ಲ್ ಒಕ್ಕೆಲ್ ಗೆ ಬಂದ ನಿರೀಕ್ಷ ಪುತ್ತೂರು.!!

illokkel ge banda nireeksha puttur-naadle
Share This:

ಡಾ. ಸುರೇಶ್ ಯಸ್ ಕೋಟ್ಯಾನ್ ಚಿತ್ರಾಪು ನಿರ್ದೇಶನದ ಇಲ್ಲ್ ಒಕ್ಕೆಲ್ ಸಿನಿಮಾಕ್ಕೆ ನಿರೀಕ್ಷ ಪುತ್ತೂರು ಆಗಮಿಸಿದ್ದಾರೆ. ಈ ಚಿತ್ರ ಮತ್ತು ಚಿತ್ರತಂಡದ ಬಗ್ಗೆ naadle.com ನೊಂದಿಗೆ ಮಾತನಾಡಿದ ನಿರೀಕ್ಷ ನನಗೆ ಈ ಸಿನಿಮಾದ ಕಥೆ ಮತ್ತು ನನ್ನ ಪಾತ್ರ ತುಂಬಾ ಇಷ್ಟವಾಯಿತು, ಸಿನಿಮಾದಲ್ಲಿ ನಾನು ಒಂದು ಅರಮನೆಯ ಮಾಡ್ರನ್ ರಾಜಕುಮಾರಿಯ ಪಾತ್ರ ಮಾಡುತ್ತಿದ್ದು ಈ ಪಾತ್ರ ತುಂಬಾ ರಗಡ್ ಮತ್ತು ಬಬ್ಲಿ ಪಾತ್ರವಾಗಿದೆ. ಈ ಸಿನಿಮಾದಲ್ಲಿ ಎಲ್ಲ ಕೋಸ್ಟಲ್ ವುಡ್ ದಿಗ್ಗಜರು ಅಭಿನಯಿಸುತ್ತಿದ್ದು ಮತ್ತು ಎಲ್ಲ ಅನುಭವಿ ತಂತ್ರಜ್ಞರು ಅವರ ಜೊತೆ ಕೆಲಸ ಮಾಡುವುದರ ಬಗ್ಗೆ ತುಂಬ ಸಂತೋಷವಾಗುತ್ತಿದೆ.

Upcoming and Ongoing events

View More Events

Want to Promote your Event, contact Naadle at 9035030300 or Email us at info@naadle.com


illokkel ge banda nireeksha puttur-naadleಈ ಸಿನೆಮಾವು ತುಳುಚಿತ್ರರಂಗದಲ್ಲಿಯೇ ಒಂದು ಹೊಸ ಕಥಾಹಂದರವನ್ನು ಇಟ್ಟುಕೊಂಡು ತಯಾರಾಗುತ್ತಿದ್ದು ಈ ಸಿನಿಮಾದಲ್ಲಿ ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರ್, ಅರವಿಂದ್ ಬೋಳಾರ್, ವಿಸ್ಮಯ ವಿನಾಯಕ್, ವಿಜೆ ವಿನೀತ್, ಅಧ್ವಿತಿ ಶೆಟ್ಟಿ, ಪುಟ್ಟಗೌರಿ ಖ್ಯಾತಿಯ ಚಂದ್ರಕಲಾ ಮೋಹನ್, ಕುರಿಬಾಂಡ್ ರಂಗ ಮುಂತಾದ ಕಲಾವಿದರು ಅಭಿನಯಿಸುತ್ತಿದ್ದು. ಈ ಸಿನೆಮಾವು ಗಜನಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ತಯಾರಾಗುತ್ತಿದ್ದು ವಾಸುದೇವ ಯಸ್ ಚಿತ್ರಾಪು ಮತ್ತು ಬಿ ಯಮ್ ಶೆಟ್ಟಿ ಈ ಸಿನೆಮಾಕ್ಕೆ ಬಂಡವಾಳ ಹೂಡಿದ್ದಾರೆ . ಈಗಾಗಲೇ ಎರಡು ಹಂತದ ಚಿತ್ರೀಕರಣ ಮುಗಿದಿದ್ದು ಮೂರನೇ ಹಂತದ ಚಿತ್ರೀಕರಣವು ಮಂಗಳೂರಿನ ಆಸುಪಾಸಿನಲ್ಲಿ ನಡೆಯುತ್ತಿದೆ.
naadle If you like this article, click on the button below

Offers

Want to Add your Offers, contact Naadle at 9035030300 or Email us at info@naadle.com