ಈಗ ಆನ್ ಲೈನ್ ನಲ್ಲಿ ಜಾತಿ ಮತ್ತು ಆದಾಯ ಸರ್ಟಿಫಿಕೇಟ್ ಅನ್ನು ಸುಲಭವಾಗಿ ಪಡೆಯಬಹುದು…!!

iga onlinenaali jathi mattu adaya certificate annu sulabhavaagi padeyabahudu-naadle
Share This:

ಸರ್ಕಾರ ವಿತರಿಸುವಂತಹ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಆನ್ ಲೈನ್ ಮೂಲಕ ಪಡೆಯುವಂತಹ ಸೌಲಭ್ಯವನ್ನು ಜಾರಿಗೆ ತರಲಾಗಿದೆ. ರೇಷನ್ ಕಾರ್ಡ್ ನಂಬರ್ ಸಹಾಯದಿಂದ ಈ ಪ್ರಮಾಣಪತ್ರಗಳನ್ನು ಪಡೆಯಬಹುದಾಗಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಈ ವ್ಯವಸ್ಥೆ ಜಾರಿಗೆ ತಂದಿದೆ. ಇದರಿಂದ ಸಮಯದ ಉಳಿತಾಯವಾಗುತ್ತದೆ. ಕೇವಲ 5 ರಿಂದ 10 ನಿಮಿಷಗಳಲ್ಲಿ ಕಂಪ್ಯೂಟರ್ ಅಥವಾ ಮೊಬೈಲ್ ನಲ್ಲಿ ಫೋನ್ ಗಳಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಬಹುದು. ಜತೆಗೆ ಹೊಸದಾಗಿ ಅರ್ಜಿ ಸಲ್ಲಿಸಬಹುದು. ಇದಕ್ಕೆ ₹25 ಶುಲ್ಕವನ್ನು ನಿಮ್ಮ ಡೆಬಿಟ್ ಕಾರ್ಡ್ ನಿಂದ (ಎಟಿಎಂ ಕಾರ್ಡ್) ಅಥವಾ ನೆಟ್ ಬ್ಯಾಂಕಿಂಗ್ ನಿಂದ ಪಾವತಿಸಬೇಕಾಗುತ್ತದೆ.

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಜಾತಿ ಮತ್ತು ಆದಾಯ ಪತ್ರ ಪಡೆಯುವ ವಿಧಾನ ಹೀಗಿದೆ
1.ಅಂರ್ಜಾಲದ ಮೂಲಕ www.nadakacheri.karnataka.gov.in ಭೇಟಿ ನೀಡಿ
2. ಮೇಲ್ಭಾಗದಲ್ಲಿ ಎಡಗಡೆ ಕಾಣಿಸುವ ಮೂರು ಗೆರೆ ಇರುವ Home ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅನ್ ಲೈನ್ ಅಪ್ಲಿಕೇಷನ್ ಮೇಲೆ ಕ್ಲಿಕ್ ಕೊಟ್ಟು apply online ಅನ್ನು ಆಯ್ದುಕೊಳ್ಳಿ.
3. ಮೊಬೈಲ್ ನಂಬರ್ ಮೂಲಕ ಲಾಗ್ ಇನ್ ಅಗಿ.
4. ಮೇಲೆ ಕಾಣಿಸುವ new request ಮೇಲೆ ಕ್ಲಿಕ್ ಮಾಡಿ. ಆಗ ಆಯ್ಕೆಗಳು ಬರುತ್ತವೆ. ನಿಮ್ಮ ಬೇಕಾದ ಆಯ್ಕೆಯನ್ನು ಆಯ್ದುಕೊಳ್ಳಿ.
5. ಜಾತಿ ಮತ್ತು ಆದಾಯ ಪತ್ರದ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ. ಅಲ್ಲಿ ಕೇಳುವ ಮಾಹಿತಿಯನ್ನು ಭರ್ತಿ ಮಾಡಿ.
6. ನಿಮಗೆ ಅಗತ್ಯವಿರುವ ಸದಸ್ಯರ ಆಯ್ಕೆಯನ್ನು ಆಯ್ದುಕೊಂಡು ನಂತರ ಪರಿಶೀಲಿಸಿ. ( ಪ್ರಮಾಣ ಪತ್ರದಲ್ಲಿ ಹೆಸರು ತಪ್ಪು ಇದ್ದಲಿ ಹತ್ತಿರದ ನಾಡಕಚೇರಿ ಆಥವಾ ಅಟಲ್ ಜೀ ಕೇಂದ್ರಕ್ಕೆ ಹೋಗಿ ತಿದ್ದುಪಡಿಗೆ ಅರ್ಜಿ ಸಲ್ಲಿಸಿ.)
7. ನೀವು ಆಯ್ದುಕೊಂಡ ಪ್ರಮಾಣ ಪತ್ರ ಬೇಕಿದ್ದಲ್ಲಿ ಕೆಳಗೆ ಕಾಣಿಸುವ pay service fee ಮೇಲೆ ಕ್ಲಿಕ್ ಮಾಡಿ ಆನ್ ಲೈನ್ ಮೂಲಕ ಹಣ ಪಾವತಿಸಿದ ನಂತರ ಡೌನ್ ಲೋಡ್ ಮಾಡಿಕೊಳ್ಳಬಹುದು ಮತ್ತು ಪ್ರಿಂಟ್ ಪಡೆಯಬಹುದು.

SOURCE : https://www.prajavani.net

 

Offers

Want to Add your Offers, contact Naadle at 7090787344 or Email us at info@naadle.com