ಹೊಸವರ್ಷಕ್ಕೆ ಕುಣಿದು ಕುಪ್ಪಳಿಸಲು ಇಲ್ಲೊಕ್ಕೆಲ್ ತುಳು ಸಿನಿಮಾದ ಜಬರ್ದಸ್ತ್ ತಪ್ಪಗೊಂಚ್ಚಿ ಹಾಡು..!!

hosavarshakke-kunidu-kuppalisalu-illokkel-tulu-cinimada-jabardast-tappagonchi-naadle
Share This:

ಹೊಸ ವರ್ಷಕ್ಕೆ ಹೊಸ ಉಮ್ಮಸ್ಸಿನೊಂದಿಗೆ ಹುಚ್ಚೆದ್ದು ಕುಣಿಯಲು ಕೋಸ್ಟಲ್ ವುಡ್ ನ ಬಹುನಿರೀಕ್ಷಿತ ಸಿನಿಮಾ ಇಲ್ಲ್ ಒಕ್ಕೆಲ್  ಚಿತ್ರದ ಟಕಿಲಾ ಟಕಿಲಾ ಸಾಂಗ್ ನಿಮ್ಮ ಮುಂದೆ ಬರುತ್ತಿದೆ. ಕಾಲಿವುಡ್ ಮತ್ತು ಸ್ಯಾಂಡಲ್ ವುಡ್ ನ ಪ್ರಸಿದ್ಧ ಗಾಯಕ ಟಿಪ್ಪು ಅವರ ಸಿರಿಕಂಠದಲ್ಲಿ ಟಕಿಲಾ ಟಕಿಲಾ ಎಂದು ಜಬರ್ದಸ್ತ್ ರೀದಮ್ ನೊಂದಿಗೆ ಇಲ್ಲೊಕ್ಕೆಲ್ ಸಿನಿಮಾದ ಲಿರಿಕಲ್ ಮೇಕಿಂಗ್ ಹಾಡು ಹೊಸ ವರ್ಷಕ್ಕೆ ಬಿಡುಗಡೆಯಾಗಲಿದೆ.  ಈ ಸಿನಿಮಾದ ಮೂಲಕ ತುಳು ಚಿತ್ರರಂಗದಲ್ಲಿ ಪ್ರಪ್ರಥಮವಾಗಿ 5D ಸೌಂಡ್ ಅನ್ನುಉಪಯೋಗಿಸಿಕೊಂಡು ರೆಕಾರ್ಡ್ ಮಾಡಲಾಗಿದ್ದು, ಈ  5D ವರ್ಷನ್ ಅನ್ನು ಮುಂದಿನ ಹಂತದಲ್ಲಿ ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು ಆಗ ಈ ಎರಡು ಹಾಡಿನ ವ್ಯತ್ಯಾಸವನ್ನು ಸಂಗೀತ ಪ್ರೇಮಿಗಳು ಸುಲಭವಾಗಿ ಗುರುತಿಸಬಹುದು ಎಂದು ಸಿನಿಮಾದ ನಿರ್ದೇಶಕರಾದ ಡಾ. ಸುರೇಶ್ ಕೋಟ್ಯಾನ್ ಚಿತ್ರಾಪು ತಿಳಿಸಿದ್ದಾರೆ. hosavarshakke-kunidu-kuppalisalu-illokkel-tulu-cinimada-jabardast-tappagonchi-naadleಲೈವ್ ಮ್ಯೂಸಿಕ್ನೊಂದಿಗೆ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಬಾಹುಬಲಿ ಚಿತ್ರಕ್ಕೆ ಮ್ಯೂಸಿಕ್ ನೀಡಿದ ಹಾಗು ಎ.ಅರ್ ರೆಹಮಾನ್ ಜೊತೆ ಕೆಲಸ ಮಾಡಿದ ಬಾಲೇಶ್ ಇವರು ಶಹನಾಯಿ ನೀಡಿದ್ದಾರೆ. ಸಿತಾರ್ ನಲ್ಲಿ ಶಿವ, ಡ್ರಮ್ಸ್ ಮತ್ತು ಪೆರ್ಕಶ್ಷನ್ಸ್ನಲ್ಲಿ ವಿಕ್ಕಿ, ಚೆಂಡೆಯಲ್ಲಿ ಹಿರಿಯ ಚೆಂಡೆ ಕಲಾವಿದರಾದ ಮುರಳೀಧರ್ ಭಟ್ ಕಟೀಲ್, ಮೃದಂಗದಲ್ಲಿ ನವೀನ್ ರಾವ್, ಮಂಡೋಲಿನ್ನಲ್ಲಿ ಚರಣ್ ರಾವ್ ಪ್ರಸಿದ್ಧ ಡ್ರಮ್ಮರ್. ಮೃದಂಗದಲ್ಲಿ ನವೀನ್ ರಾವ್, ಎ. ಆರ್ ರೆಹಮಾನ್ ನ ಟೀಮ್ ನ ನಾಧನ್ ಕೊಳಲು ನುಡಿಸಿದ್ದಾರೆ.

ಚೆನ್ನೈ ಮತ್ತು ಬೆಂಗಳೂರಿನ ಅಂತಾರಾಷ್ಟ್ರೀಯ ಗುಣಮಟ್ಟದ ಅತ್ಯುತ್ತಮ ಮೂರೂ ಸ್ಟುಡಿಯೋದಲ್ಲಿ ಹಾಡಿನ ರೆಕಾರ್ಡಿಂಗ್ ಮಾಡಲಾಗಿದೆ. ಈ ಹಾಡಿನ ಚಿತ್ರೀಕರಣಕ್ಕೆ ಮುಲ್ಕಿ ಸಮೀಪದ ಚಿತ್ರಾಪು ಪರಿಸರದಲ್ಲಿ ಅದ್ದೂರಿ ಸೆಟ್ ಹಾಕಲಾಗಿತ್ತು, ಈ ಹಾಡಿನ ಕೊರಿಯೋಗ್ರಫಿಯನ್ನು ಅಕುಲ್ ಅವರು ನೀಡಿದ್ದು, ಅವರ ಸಂಯೋಜನೆಯಲ್ಲಿ ಕೋಸ್ಟಲ್ ವುಡ್ ನ ದಿಗ್ಗಜರು ಈ ಅದ್ದೂರಿ ಸೆಟ್ ನಲ್ಲಿ ಹೆಜ್ಜೆಹಾಕಿದರು. ಹಾಡನ್ನು ಡಾ. ಸುರೇಶ್ ಚಿತ್ರಾಪು ಅವರು ಬರೆದಿದ್ದು ,ಚೆನ್ನೈನ ರಾಜ್ ಶಾ ಸಂಗೀತ ನೀಡಿದ್ದಾರೆ. 5D ಇಫೆಕ್ಟ್ ಅನ್ನು ದೆಹಲಿ ಮೂಲದ ಮೆಹತಾ ಅವರು ನೀಡಿದ್ದಾರೆ.
naadle If you like this article, click on the button below