ಹಸಿರು ಕಾನನಗಳ ಮಧ್ಯೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಅಡ್ಯಾರ್ ಜಲಪಾತ..!!

hasiru kaananagala madhye pravasigarannu kaibisi kareyutide adyar jalapata-naadle
Share This:

ಕಡಲನಗರಿ ಮಂಗಳೂರು ಕೇವಲ ಸುಂದರ ಬೀಚ್‌ಗಳಿಗೆ ಮಾತ್ರ ಪ್ರಸಿದ್ಧಿ ಪಡೆದಿಲ್ಲ . ಇತ್ತೀಚಿನ ದಿನಗಳಲ್ಲಿ ಧುಮ್ಮಿಕ್ಕಿ ಹರಿಯವ ಜಲಪಾತಗಳ ಆಕರ್ಷಣೆಯ ಕೇಂದ್ರವೂ ಆಗುತ್ತಿದೆ. ಮಂಗಳೂರು ಹೊರವಲಯದಲ್ಲಿರುವ ಜಲಪಾತವೊಂದು ಮಳೆಗಾಲದಲ್ಲಿ ಪ್ರತಿವರ್ಷ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಮಳೆಗಾಲದಲ್ಲಿ ಮಾತ್ರ ಧುಮ್ಮಿಕುವ ಈ ಜಲಪಾತವನ್ನು ನೋಡಲು ಜನ ಬರುತ್ತಾರೆ. ಸುತ್ತಮುತ್ತಲ ಕಾಲೇಜಿನ ವಿದ್ಯಾರ್ಥಿಗಳ ನೆಚ್ಚಿನ ವೀಕೆಂಡ್ ಸ್ಪಾಟ್ ಆಗಿರುವ ಈ ಅಡ್ಯಾರ್ ಜಲಪಾತ, ಅಡ್ಯಾರ್ ಫಾಲ್ಸ್ ಅಂತಾನೇ ಹೆಸರುವಾಸಿ. ಬೆಟ್ಟದ ಮೇಲಿಂದ ಹಾಲ್ನೊರೆಯ ಹಾಗೆ ಹರಿದು, ಸುಮಾರು 40 ಅಡಿ ಎತ್ತರದಿಂದ ಧುಮುಕುತ್ತದೆ.hasiru kaananagala madhye pravasigarannu kaibisi kareyutide adyar jalapata-naadle

Upcoming and Ongoing events

View More Events

Want to Promote your Event, contact Naadle at 9035030300 or Email us at info@naadle.com


ನಗರದಲ್ಲಿ ಬ್ಯುಸಿ ಕೆಲಸಗಳ ಒತ್ತಡಗಳ ಮಧ್ಯೆ, ನೀರಿನಾಟದ ಆನಂದ ಪಡೆಯಲು ಜನರು ಸಾವಿರಾರು ರೂಪಾಯಿ ಹಣಕೊಟ್ಟು ಆಮ್ಯೂಸ್ಮೆಂಟ್ ಪಾರ್ಕ್‌ಗಳಿಗೆ ಹೋಗುತ್ತಾರೆ. ಆದರೆ ಮಂಗಳೂರಿನಿಂದ ಕೊಂಚ ದೂರದಲ್ಲೇ ಪ್ರಕೃತಿಯ ಮಡಿಲಲ್ಲಿ ಸುಂದರವಾದ ಜಲಪಾತ ಇದೆ ಎಂಬುದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ಮಂಗಳೂರು ನಗರದಿಂದ ಕೊಂಚ ದೂರದಲ್ಲಿರುವ ಅಡ್ಯಾರ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ವಳವಚ್ಚಿಲ್ ನಿಂದ ಎಡಕ್ಕೆ ಸಾಗಿದರೆ ಈ ಫಾಲ್ಸ್ ನ ದರ್ಶನವಾಗುತ್ತದೆ.hasiru kaananagala madhye pravasigarannu kaibisi kareyutide adyar jalapata-naadleಅಡ್ಯಾರ್ ಜಲಪಾತ ಜೂನ್‌ನಲ್ಲಿ ಮಳೆಯೊಂದಿಗೆ ತೆರೆದುಕೊಳ್ಳುವ ಜಲಪಾತ. ನವೆಂಬರ್ ವರೆಗೂ ವೈಭವದಿಂದ ಮೇಳೈಸುತ್ತದೆ. ಆದರೆ ಅಡ್ಯಾರ್ ಫಾಲ್ಸ್ ಗೆ ಹೋಗೋಕೆ ಸಮರ್ಪಕವಾದ ದಾರಿ ವ್ಯವಸ್ಥೆ ಇಲ್ಲ. ಇನ್ನೊಂದೆಡೆ ಪೋಲಿಗಳು ಈ ಫಾಲ್ಸ್ ನ್ನು ಜಾಲಿ ಮಾಡೋಕೆ ಬಳಸೋದರಿಂದ ಮದ್ಯದ ಬಾಟಲ್ ಗಳು, ಪ್ಲಾಸ್ಟಿಕ್ ಚೀಲಗಳು ಫಾಲ್ಸ್ ಸೌಂದರ್ಯ ಕ್ಕೆ ಧಕ್ಕೆ ತಂದಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಾಗು ಜಿಲ್ಲಾಡಳಿತ ಗಮನ ಹರಿಸಬೇಕಾರ ಅವಶ್ಯಕತೆ ಇದೆ. ಒಟ್ಟಿನಲ್ಲಿ ಫಾಲ್ಸ್ ನೋಡೋಕೆ ಪಶ್ಚಿಮ ಘಟ್ಟಗಳ ತಪ್ಪಲಿಗೆ ಹೋಗೋ ಜನ ಮಂಗಳೂರಿಗೆ ನಗರದ ಹತ್ತಿರದಲ್ಲಿರುವ ಫಾಲ್ಸ್ ನ ಸೌಂದರ್ಯ ನೋಡೋ ಅವಕಾಶ ವಂಚಿತರಾಗಿದ್ದಾರೆ. ಪ್ರವಾಸೋದ್ಯಮ ಇಲಾಖೆ ಎಚ್ಚೆತ್ತು‌ ಜಲಪಾತ ಸೌಂದರ್ಯ ಉಳಿಸಿದರೆ, ಕರಾವಳಿಯ ಪ್ರವಾಸಿ ತಾಣಗಳ ಪಟ್ಟಿಗೆ ಅಡ್ಯಾರ್ ಫಾಲ್ಸ್ ಕೂಡ ಸೇರಬಹುದು ಶೀಘ್ರದಲ್ಲಿ.
naadle If you like this article, click on the button below

Offers

Want to Add your Offers, contact Naadle at 9035030300 or Email us at info@naadle.com