Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ದ್ವಿತೀಯ ಪಿಯುಸಿ ಫಲಿತಾಂಶ : ಉಡುಪಿ ಫಸ್ಟ್ , ದಕ್ಷಿಣ ಕನ್ನಡ ಸೆಕೆಂಡ್..!!

dwithiya puc palithamsa udupi first dakshina kannada second-naadle
Share This:

ದ್ವಿತೀಯ ಪಿಯುಸಿ ಫ‌ಲಿತಾಂಶವು ದಶಕದ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಬರೆದಿದೆ. 2018-19ನೇ ಸಾಲಿನಲ್ಲಿ ವಾರ್ಷಿಕ ಪರೀಕ್ಷೆ ಬರೆದಿದ್ದ 6.71 ಲಕ್ಷ ವಿದ್ಯಾರ್ಥಿಗಳಲ್ಲಿ 4.14 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.61.73ರಷ್ಟು ಫ‌ಲಿತಾಂಶ ದಾಖಲಾಗಿದೆ. ಉಡುಪಿ ಜಿಲ್ಲೆ ಪ್ರಥಮ ಸ್ಥಾನಕ್ಕೆ ಏರಿದ್ದರೆ, ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನಕ್ಕಿಳಿದಿದೆ. ಕಳೆದ ಬಾರಿಗಿಂತ ಶೇ. 2.17ರಷ್ಟು ಹೆಚ್ಚು ಫ‌ಲಿತಾಂಶ ಬಂದಿದೆ. 2015ರ ಶೇ. 60.54 ಫ‌ಲಿತಾಂಶವೇ ಈವರೆಗೂ ದಾಖಲೆಯಾಗಿತ್ತು.dwithiya puc palithamsa udupi first dakshina kannada second-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಜಿಲ್ಲಾವಾರು ಫಲಿತಾಂಶದಲ್ಲಿ ಶೇ. 92.20 ಅಂಕಗಳನ್ನು ಗಳಿಸಿರುವ ಉಡುಪಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಶೇ.90.91 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ದ್ವಿತೀಯ ಸ್ಥಾನದಲ್ಲಿದೆ. ಕೊಡಗು ಶೇ. 83.31ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಶೇ.51.42 ಫಲಿತಾಂಶ ಪಡೆದಿರುವ ಚಿತ್ರದುರ್ಗ ಕೊನೆಯ ಸ್ಥಾನದಲ್ಲಿದೆ.dwithiya puc palithamsa udupi first dakshina kannada second-naadleಮೂಡಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ವಾಣಿಜ್ಯ ವಿಭಾಗದ ಒಲ್ವಿಟಾ ಆ್ಯನ್ಸಿಲ್ಲಾ ಡಿಸೋಜಾ (596) ಹಾಗೂ ವಿಟ್ಲದ ಅಳಿಕೆ ಶ್ರೀ ಸತ್ಯ ಸಾಯಿ ಲೋಕಸೇವಾ ಪಿಯು ಕಾಲೇಜಿನ ಶ್ರೀಕೃಷ್ಣ ಶರ್ಮ ಕೆ. ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ಪದ್ಮನಾಭನಗರ ಕುಮಾರನ್ಸ್‌ ಕಾಂಪೊಸಿಟ್‌ ಪಿಯು ಕಾಲೇಜಿನ ರಾಜೇಶ್‌ ಕಶ್ಯಪ್‌(594) ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಅಂತೆಯೇ ಕಲಾ ವಿಭಾಗದಲ್ಲಿ ಬಳ್ಳಾರಿಯ ಇಂದು ಇಂಡಿಪೆಂಡೆಂಟ್ ಕಾಲೇಜಿನ ಕುಸುಮ(594) ಪ್ರಥಮ ಸ್ಥಾನಗಳಿಸಿದ್ದಾರೆ.

 

Offers

Want to Add your Offers, contact Naadle at 7090787344 or Email us at info@naadle.com