ದೇಶವನ್ನೇ ತಲ್ಲಣಗೊಳಿಸಿರುವ ನಿಪಾಹ್ ವೈರಸ್ ಜ್ವರ..!!

deshavannu tallanagolisiruva nipah virus jwara-naadle
Share This:

ಕೇರಳದಲ್ಲಿ 9 ಜನರನ್ನು ಬಲಿ ಪಡೆದು ಇಡೀ ದೇಶವನ್ನೇ ತಲ್ಲಣಗೊಳಿಸಿರುವ ನಿಪಾಹ್ ಸೋಂಕಿನ ಕುರಿತಂತೆ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಸೇರಿದಂತೆ ಇಡೀ ವೈದ್ಯಕೀಯ ಲೋಕ ಜಿಜ್ಞಾಸೆಗೆ ಒಳಗಾಗಿದೆ. ಮೂಲತಃ ಮಲೇಶಿಯಾದ ನಿಪಾಹ್ ಸೋಂಕಿಗೆ ಈವರೆಗೆ ಲಸಿಕೆ‌ ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂಬುದು ಆತಂಕಕ್ಕೆ‌ ಮೂಲ‌ ಕಾರಣ. ಈ ನಿಪಾಹ್ ವೈರಾಣು 1998ರಲ್ಲೇ ಪತ್ತೆಯಾಗಿದ್ದರೂ, ಈ ವೈರಾಣುವಿಗೆ ಈ ವರೆಗೂ ಲಸಿಕೆಯನ್ನೇ ಕಂಡು ಹಿಡಿಯಲಾಗಿಲ್ಲ. ಮಾರಣಾಂತಿಕ ಕಾಯಿಲೆಗಳನ್ನು ತರಬಲ್ಲ ನಿಪಾಹ್ ವೈರಾಣುವಿಗೆ ಲಸಿಕೆ ತಯಾರಿಸಲು ಸಾಕಷ್ಟು ವೈದ್ಯಕೀಯ ಸಂಸ್ಥೆಗಳು ಸಂಶೋಧನೆ ನಡೆಸುತ್ತಿವೆಯಾದರೂ ಲಸಿಕೆ ಮಾತ್ರ ಇನ್ನೂ ಕಂಡುಹಿಡಿಯಲಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳ ಪ್ರಕಾರ ಇದಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆಯಿಲ್ಲ ಎನ್ನಲಾಗಿದೆ.

ಏನಿದು ನಿಪಾಹ್ ವೈರಾಣು, ಹೇಗೆ ಪಸರಿಸುತ್ತದೆ?deshavannu tallanagolisiruva nipah virus jwara-naadle

Upcoming and Ongoing events

View More Events

Want to Promote your Event, contact Naadle at 9035030300 or Email us at [email protected]


ನಿಪಾಹ್ ಝೂನೋಸಿಸ್ ಮಾದರಿಯ ವೈರಾಣಾಗಿದ್ದು, ಇದು ಮನುಷ್ಯ ಮತ್ತು ಪ್ರಾಣಿಗಳಲ್ಲಿ ಹಲುವ ಬಗೆಯ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಸಾಮಾನ್ಯವಾಗಿ ಈ ನಿಪಾಹ್ ವೈರಾಣುಗಳು, ಒಂದು ಬಗೆಯ ಬಾವಲಿಯಿಂದ (ಫ್ರೂಟ್‌ ಬ್ಯಾಟ್ಸ್‌) ಹರಡಬಹುದಾದ ವೈರಸ್ ಆಗಿದ್ದು, ಈ ವೈರಸ್ ಸೋಂಕು ತಗುಲಿರುವ ವ್ಯಕ್ತಿಯ ಸಂಪರ್ಕಕ್ಕೆ ಬೇರೆ ವ್ಯಕ್ತಿ ಬಂದರೆ ಅಂದರೆ, ಸೋಂಕಿನಿಂದ ಕೂಡಿದ ವ್ಯಕ್ತಿಯ ಜೊಲ್ಲು, ಎಂಜಲು, ಅಥವಾ ವಾಂತಿಯ ಸ್ಪರ್ಶವಾದರೆ ಈ ವೈರಾಣು ಬೇರೊಬ್ಬರಿಗೆ ಹರಡುತ್ತದೆ. ಅಂತೆಯೇ ಪ್ರಾಣಿ ಇಲ್ಲವೇ ಪಕ್ಷಿಗಳಿಂದಲೂ ಇದು ಹರಡುವ ಸಾಧ್ಯತೆ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಈ ನಿಪಾಹ್ ವೈರಾಣು ಮೂಲಸ್ಥಾನ ಪ್ಟೆರೋಪೋಡಿಡೇ ಬಾವಲಿ ಕುಟುಂಬ ಎನ್ನಲಾಗಿದೆ. ಈ ಜಾತಿಯ ಬಾವಲಿಗಲ ಮುಖಾಂತರ ಈ ಮಾರಕ ವೈರಾಣು ಹರಡುತ್ತಿದೆ. ಈ ಜಾತಿಯ ಬಾವಲಿಗಳು ತಿಂದು ಬಿಸಾಡಿದ ಅಥವಾ ಈ ಬಾವಲಿಗಳ ಜೊಲ್ಲು, ಮೂತ್ರ ಬಿದ್ದ ವಸ್ತುಗಳ ಸ್ಪರ್ಶವಾದರೆ ಈ ಸೋಂಕು ಹರಡುವ ಸಾಧ್ಯತೆ ಇದೆ.

ನಿಪಾಹ್ ಸೋಂಕು ತಗುಲಿದರೆ ಗೊತ್ತಾಗುವುದು ಹೇಗೆ ?deshavannu tallanagolisiruva nipah virus jwara-naadleನಿಪಾಹ್ ಸೋಂಕು ನಮ್ಮನ್ನು ಆವರಿಸಿದರೆ, ಮೊದಲಿಗೆ ಅದು ಮೆದುಳಿನ ಮೇಲೆ ತನ್ನ ದುಷ್ಪರಿಣಾಮ ಬೀರುತ್ತದೆ. ಆರಂಭಲ್ಲಿ ಮೆದುಳಿನ ನರಮಂಡಲದ ಮೇಲೆ ದಾಳಿ ಮಾಡುವ ವೈರಾಣು ಪತ್ತೆಯಾಗಲು 5ರಿಂದ 14 ದಿನಗಳೇ ಬೇಕಾಗುತ್ತದೆ. ಸಾಮಾನ್ಯ ಜ್ವರ, ವಿಪರೀತ ತಲೆನೋವು, ಅತಿಯಾದ ಆಯಾಸ, ಅತಿಯಾದ ನಿದ್ರಾಹೀನತೆ, ದಿಗ್ಭ್ರಮೆ ಮತ್ತು ಮಾನಸಿಕ ಗೊಂದಲ ಈ ಸೋಂಕಿನ ಲಕ್ಷಣಗಳಾಗಿವೆ. ಕೆಲ ಪ್ರಕರಣಗಳಲ್ಲಿ ಉಸಿರಾಟದ ತೊಂದರೆ ಕೂಡ ಕಾಣಿಸಿಕೊಂಡಿದೆ. ಈ ಸೋಂಕು ಎಷ್ಟು ಮಾರಕ ಎಂದರೆ, ಕೇವಲ 24 ರಿಂದ 48 ಗಂಟೆಗಳಲ್ಲೇ ಸೋಂಕು ಪೀಡಿತ ವ್ಯಕ್ತಿ ಕೋಮಾಗೆ ಜಾರುವ ಅಪಾಯವಿದೆ. ಅಲ್ಲದೆ ಸಾವು ಕೂಡ ಸಂಭವಿಸಬಹುದು.

ನಿಪಾಹ್ ಗೆ ಚಿಕಿತ್ಸೆ ಹೇಗೆ?deshavannu tallanagolisiruva nipah virus jwara-naadleಎಲ್ಲ ಜ್ವರಗಳಿಗೆ ಚಿಕಿತ್ಸೆ ನೀಡಿದಂತೆ, ಜ್ವರವನ್ನು ನಿಯಂತ್ರಿಸಲಾಗುತ್ತದೆ. ಹೆಚ್ಚು ದ್ರವ ಆಹಾರ ನೀಡಿ ರೋಗಿಗೆ ನಿರ್ಜಲೀಕರಣ ಆಗದಂತೆ ತಡೆಯಲಾಗುತ್ತದೆ. ರೋಗ ಬಹುಬೇಗನೆ ಇತರರಿಗೆ ಹರಡುವುದರಿಂದ ರೋಗಿಯನ್ನು ಬೇರೆಯೇ ಕೋಣೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತದೆ. ಯಾರ ಸಂಪರ್ಕಕ್ಕೆ ಬಾರದಂತೆ ನೋಡಿಕೊಳ್ಳಲಾಗುತ್ತದೆ. ವೈದ್ಯರು ಮತ್ತು ದಾದಿಯರು ವಿಶೇಷ ಮುತುವರ್ಜಿ ವಹಿಸಿ ಚಿಕಿತ್ಸೆ ನೀಡಬೇಕಾಗುತ್ತದೆ ಇಲ್ಲವಾದಲ್ಲಿ ಅವರಿಗೂ ಬರುವ ಸಾಧ್ಯತೆ ಇರುತ್ತದೆ. ಕೈ ಚೀಲ, ಮುಖದ ಮಾಸ್ಕ ಮತ್ತು ತಲೆಗವಚ ಧರಿಸಿಯೇ ರೋಗಿಯನ್ನು ಸ್ಪರ್ಶಿಸತಕ್ಕದು. ರಿಬಾವಿರಿನ್ ಎಂಬ ಮದ್ದನ್ನು ರೋಗಾಣುವಿನ ವಿರುದ್ಧ ಬಳಸಲಾಗಿದ್ದು, ಹೆಚ್ಚಿನ ಅನುಕೂಲವಾಗಿಲ್ಲ ಎಂದು ಸಂಶೋಧನೆಯಿಂದ ಕಂಡುಬಂದಿದೆ. ಆದಷ್ಟು ಬೇಗ ರೋಗವನ್ನು ಪತ್ತೆಹಚ್ಚಿ, ರೋಗಿಯನ್ನು ತೀವ್ರ ನಿಗಾಘಟಕದಲ್ಲಿರಿಸಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿದ್ದಲ್ಲಿ ಜೀವಕ್ಕೆ ಬರುವ ಕುತ್ತನ್ನು ತಪ್ಪಿಸಬಹುದು.

ನಿಪಾಹ್‌ದಿಂದ ದೂರವಿರುವುದು ಹೇಗೆ? deshavannu tallanagolisiruva nipah virus jwara-naaadleಯಾವುದೇ ರೀತಿಯ ಸೋಂಕುಗಳಾದರೂ ಅದರ ನಿರ್ಮೂಲನೆ ಅಥವಾ ನಿಯಂತ್ರಣ ಮನಷ್ಯನ ರೋಗ ನಿರೋಧಕ ಸಾಮರ್ಥ್ಯದ ಮೇಲೆ ಆಧಾರಿತವಾಗಿರುತ್ತದೆ. ಹೀಗಾಗಿ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ಆಹಾರ ಪದಾರ್ಥಗಳು, ಡಯಟ್ ಗಳನ್ನು ಪಾಲಿಸುವುದು ಉ ತ್ತಮ. ಅಲ್ಲದೆ ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ಹರ್ಬಲ್ ಟೀ (ಗಿಡಮೂಲಿಕಾ ಚಹಾ) ಅಥವಾ ವಿವಿಧ ಬಗೆಯ ಕಷಾಯಗಳನ್ನು ಆಗಾಗ ಸೇವಿಸುತ್ತಿರಬೇಕು.
naadle If you like this article, click on the button below

Offers

Want to Add your Offers, contact Naadle at 9035030300 or Email us at [email protected]