ದೇಶದ ಮೊದಲ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್​ಪ್ರೆಸ್ ಗೆ ಚಾಲನೆ.!!

deshada-modala-semi-highspeed-railu-vande-bharath-express-ge-chalane-naadle
Share This:

ವಂದೇ ಭಾರತ್ ಎಕ್ಸ್​ಪ್ರೆಸ್ (ಟ್ರೇನ್ 18) ರೈಲಿಗೆ ಪ್ರಧಾನಿ ನರೇಂದ್ರ ಮೋದಿ ನವದೆಹಲಿ ರೈಲು ನಿಲ್ದಾಣದಲ್ಲಿ ಶುಕ್ರವಾರ ಹಸಿರು ನಿಶಾನೆ ತೋರಿದರು. ದೇಶದ ಮೊದಲ ಸೆಮಿ ಹೈಸ್ಪೀಡ್ ರೈಲು ಎಂಬ ಶ್ರೇಯದ ಈ ಎಕ್ಸ್​ಪ್ರೆಸ್, ಎಂಟು ತಾಸುಗಳಲ್ಲಿ 752 ಕಿ.ಮೀ. ಕ್ರಮಿಸಿ ವಾರಾಣಸಿ ಸೇರಲಿದೆ. ಮಾರ್ಗ ಮಧ್ಯೆ ಕಾನ್ಪುರ ಹಾಗೂ ಪ್ರಯಾಗರಾಜ್​ಗಳಲ್ಲಿ ನಿಲುಗಡೆ ನೀಡಲಿದೆ.deshada-modala-semi-highspeed-railu-vande-bharath-express-ge-chalane-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com


ಟ್ರೇನ್-18ನ ವಾಣಿಜ್ಯಿಕ ಸಂಚಾರ ಫೆ. 17ರಿಂದ ಆರಂಭವಾಗಲಿದ್ದು, ನವದೆಹಲಿಯಿಂದ ಬೆಳಗ್ಗೆ 6ಕ್ಕೆ ಹೊರಡಲಿದೆ. ವಾರಾಣಸಿಗೆ ಮಧ್ಯಾಹ್ನ 2 ಗಂಟೆಗೆ ತಲುಪಲಿದೆ. ಮಧ್ಯಾಹ್ನ 3ಕ್ಕೆ ವಾರಾಣಸಿಯಿಂದ ಹೊರಡುವ ರೈಲು, ರಾತ್ರಿ 11ಕ್ಕೆ ನವದೆಹಲಿಗೆ ಬರಲಿದೆ. ಸೋಮವಾರ ಮತ್ತು ಗುರುವಾರ ಹೊರತು ಪಡಿಸಿ ವಾರಕ್ಕೆ ಐದು ದಿನ ಸಂಚರಿಸಲಿದೆ. ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿನ ಮೊದಲ ಸಂಚಾರವಾದ ಕಾರಣ ಕಾನ್ಪುರ ಮತ್ತು ಪ್ರಯಾಗರಾಜ್​ಗಳಲ್ಲೂ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಈ ನಿಲ್ದಾಣಗಳಲ್ಲಿ ತಲಾ 40 ನಿಮಿಷ ನಿಲುಗಡೆ ನೀಡಲಿದೆ. -ಏಜೆನ್ಸೀಸ್deshada-modala-semi-highspeed-railu-vande-bharath-express-ge-chalane-naadleಟ್ರೇನ್-18 ರೈಲಿನ ವಿಶೇಷ ಸವಲತ್ತು

  • ದೇಶದ ಮೊದಲ ಇಂಜಿನ್ ರಹಿತ ರೈಲು
  • ಮಾರ್ಗ ಮಧ್ಯೆ ನಿಲುಗಡೆ- ಕಾನ್ಪುರ ಮತ್ತು ಪ್ರಯಾಗರಾಜ್
  • ರೈಲಿನ ಎಲ್ಲ ಕೋಚ್​ಗಳಿಗೂ ಸ್ವಯಂಚಾಲಿತ ಬಾಗಿಲು
  • ಪಿಎಸ್ ಆಧಾರಿತ ಆಡಿಯೋ-ವಿಡಿಯೋ ಮಾಹಿತಿ ವ್ಯವಸ್ಥೆ
  • ಮನರಂಜನೆ ಕಾರ್ಯಕ್ರಮ ವೀಕ್ಷಣೆಗೆ ವೈ-ಫೈ ಹಾಟ್​ಸ್ಪಾಟ್
  • ಬಯೋ ವಾಕ್ಯೂಮ್ ಮಾದರಿಯ ಶೌಚಗೃಹ

Offers

Want to Add your Offers, contact Naadle at 7090787344 or Email us at info@naadle.com