ದಕ್ಷ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ..!!

daksha ips adhikari k annamalai tamma huddege rajiname nididdare-naadle
Share This:

ಒಂಬತ್ತು ವರ್ಷಗಳ ವೃತ್ತಿಪಯಣಕ್ಕೆ ಕುಪ್ಪುಸ್ವಾಮಿ ಅಣ್ಣಾಮಲೈ ವಿದಾಯ ಹೇಳಿದ್ದಾರೆ. ಪ್ರಾಮಾಣಿಕತೆ, ದಕ್ಷ ಅಧಿಕಾರಿ ಎಂದು ಕರೆಸಿಕೊಂಡು ಸೇವೆ ಸಲ್ಲಿಸಿದ, ಪ್ರತಿ ಜಾಗದಲ್ಲೂ ಹೊಸತನದ ಹೆಜ್ಜೆಗುರುತು ಮೂಡಿಸಿದ, ಕೆಳಹಂತದ ಸಿಬ್ಬಂದಿಯನ್ನು ಪ್ರೀತಿಸಿದ, ಪೀಪಲ್‌ ಫ್ರೆಂಡ್ಲಿ ಪೊಲೀಸ್‌ ಎಂಬ ಪದಕ್ಕೆ ಅನ್ವರ್ಥವಾಗಿ ಸೇವೆ ಸಲ್ಲಿಸಿದ್ದ ಅಣ್ಣಾಮಲೈ ವೈಯಕ್ತಿಕ ಕಾರಣ ನೀಡಿ ಪೊಲೀಸ್‌ ಸೇವೆಗೆ ಗುಡ್‌ಬೈ ಹೇಳಿದ್ದಾರೆ. ಅಣ್ಣಾಮಲೈ! ಖಾಕಿ ತೊಟ್ಟ ಕೆಲವೇ ವರ್ಷಗಳಲ್ಲಿ ಕರ್ನಾಟಕದಲ್ಲೊಂದು ಇಮೇಜ್‌ ಸೃಷ್ಟಿಸಿಕೊಂಡ ಹೆಸರಿದು. ಕಾರ್ಕಳ, ಉಡುಪಿ, ಚಿಕ್ಕಮಗಳೂರು, ಬೆಂಗಳೂರು ಕರ್ತವ್ಯ ನಿರ್ವಹಿಸಿದ ಸ್ಥಳಗಳು ಇಷ್ಟೇ. ಆದರೆ, ಕರ್ನಾಟಕದ ಯಾವ ಮೂಲೆಯಲ್ಲಿ ಕೇಳಿದರೂ ಅಣ್ಣಾಮಲೈ ಹೆಸರು ಚಿರಪರಿಚಿತ.  ಅದು ಕೇವಲ ಹೆಸರಿನಲ್ಲಿದ್ದ ಸೆಳೆತವಲ್ಲ. ಖಾಕಿಯ ಖಡಕ್‌ ಜತೆಗೆ ಕಾವಿಯೊಳಗಿನ ಅಧ್ಯಾತ್ಮ ಮನಸ್ಸಿದ್ದ ಕಾರಣಕ್ಕೆ ಎಸ್ಪಿ ಕೆ.ಅಣ್ಣಾಮಲೈ ಸಣ್ಣ ಅವಧಿಯಲ್ಲೇ ರಾಜ್ಯದ ಮನೆ ಮಾತಾಗಿಬಿಟ್ಟರು. ಸಮಾಜಘಾತಕ ಶಕ್ತಿಗಳನ್ನು ಹೆಡಮುರಿ ಕಟ್ಟುತ್ತಲೇ ನೊಂದು ಬಂದವರ ಕಣ್ಣೀರೊರೆಸಿದ ಅವರ ರೀತಿಗೆ ಜನ ಫಿದಾ ಆಗಿದ್ದರು.daksha ips adhikari k annamalai  tamma huddege rajiname nididdare-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ರಾಜೀನಾಮೆ ಸಂಬಂಧ ಅಭಿಮಾನಿಗಳಿಗೆ ಅಣ್ಣಾಮಲೈ ಪತ್ರ ಬರೆದಿದ್ದಾರೆ. ‘ಲೋಕಸಭಾ ಚುನಾವಣೆಗೂ ಮೊದಲೇ ರಾಜೀನಾಮೆ ಬಗ್ಗೆ ನಿರ್ಧರಿಸಿದ್ದೆ. ಚುನಾವಣಾ ಸಮಯದಲ್ಲಿ ರಾಜೀನಾಮೆ ಕೊಟ್ಟು ಕರ್ತವ್ಯದಿಂದ ಹಿಂದೆ ಸರಿಯಲು ಮನಸ್ಸು ಒಪ್ಪಲಿಲ್ಲ. ಇಂದು (2019ರ ಮೇ 28) ಪೊಲೀಸ್ ಸೇವೆಗೆ ರಾಜೀನಾಮೆ ನೀಡಿದ್ದೇನೆ’ ಎಂದು ಪತ್ರದಲ್ಲಿ ಹೇಳಿದ್ದಾರೆ. ‘ಐಪಿಎಸ್ ಸೇವೆಗೆ ಸೇರಿ 9 ವರ್ಷಗಳಾಗಿವೆ. ಪ್ರತಿ ಕ್ಷಣವನ್ನೂ ಖಾಕಿ ಜೊತೆ ಬದುಕಿದೆ. ಪೊಲೀಸ್ ಕೆಲಸಕ್ಕಿಂತ ಸರಿಸಮನಾದ ಕೆಲಸ ಮತ್ತೊಂದಿಲ್ಲ. ಇದು ದೇವರಿಗೆ ಬಹಳ ಹತ್ತಿರವಾದ ಕೆಲಸ. ಜವಾಬ್ದಾರಿಯುತ ಕೆಲಸ. ಸಾಕಷ್ಟು ಜನರ ಪ್ರೀತಿ ಗಳಿಸಿದ್ದೇನೆ. ಅಂತೆಯೇ ಸಾಕಷ್ಟು ವೈಯಕ್ತಿಕ ಸಭೆ, ಸಮಾರಂಭ, ಕುಟುಂಬದ ಕೆಲಸ–ಕಾರ್ಯಗಳನ್ನೂ ಕಳೆದುಕೊಂಡು ನೊಂದಿದ್ದೇನೆ. ಇವತ್ತು ಈ ಮಟ್ಟಕ್ಕೆ ಬೆಳೆಯಲು ಸಹಕರಿಸಿದ ಹಲವರಿಗೆ, ನಾನು ಏನೂ ಮಾಡಲು ಸಾಧ್ಯವಾಗಲಿಲ್ಲ. ಆಪ್ತರು ಮೃತಪಟ್ಟಾಗ ಅಂತ್ಯಕ್ರಿಯೆಗೂ ಹೋಗಲಾಗಲಿಲ್ಲ. ಇದು ನನ್ನನ್ನು ಆಗಾಗ ಚಿಂತನೆಗೆ ಈಡು ಮಾಡಿದ್ದು ಸುಳ್ಳಲ್ಲ.’ ‘ಕಳೆದ ವರ್ಷ ಕೈಲಾಸ ಮಾನಸ ಸರೋವರ ಯಾತ್ರೆಯಲ್ಲಿ ಪಾಲ್ಗೊಂಡಿದ್ದೆ. ಆ ಯಾತ್ರೆ ಕಣ್ಣು ತೆರೆಸಿತು. ಮುಂದಿನ ಜೀವನದ ಬಗ್ಗೆ ಮಾರ್ಗದರ್ಶನ ಸಿಕ್ಕಿತು. ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಸಾವು ತೀವ್ರವಾಗಿ ಕಾಡಿತು. ಬದುಕಿನ ಮತ್ತೊಂದು ಆಯಾಮಕ್ಕೆ ಹೊರಳಲು, ನನ್ನ ಬದುಕನ್ನು ನಾನೇ ಓದಿಕೊಳ್ಳಲು ವೇದಿಕೆಯನ್ನೂ ಸೃಷ್ಟಿಸಿತು. ನನ್ನಿಂದ ಯಾರಿಗಾದರೂ ಯಾವುದೇ ಸಮಯದಲ್ಲಾದರೂ ಮನಸ್ಸಿಗೆ ನೋವುಂಟಾಗಿದ್ದರೆ ನನ್ನನ್ನು ಕ್ಷಮಿಸಿ….’ ಎಂದು ಅಣ್ಣಾಮಲೈ ಕೋರಿದ್ದಾರೆ.daksha ips adhikari k annamalai  tamma huddege rajiname nididdare-naadle‘ಪೊಲೀಸ್ ಇಲಾಖೆಯದ್ದು ಒತ್ತಡದ ಕೆಲಸ. ನಾನೇ ಐದು ವರ್ಷದಲ್ಲಿ 21 ದಿನ ಮಾತ್ರ ರಜೆ ತೆಗೆದುಕೊಂಡಿದ್ದೇನೆ’ ಎಂದು ಅಣ್ಣಾಮಲೈ ಹೇಳಿದರು. ‘ನಾಳೆ ಬೆಳಿಗ್ಗೆ ನಾನು ಇರುತ್ತೇನೂ ಇಲ್ಲವೋ ಗೊತ್ತಿಲ್ಲ. ಅನ್ನಿಸಿದ್ದನ್ನು ಇವಾಗಲೇ ಮಾಡುವ ಸ್ವಭಾವ ನನ್ನದು. ನನಗೆ ಸ್ವಾತಂತ್ರ್ಯ ಬೇಕು. ಹೀಗಾಗಿ ಈ ನಿರ್ಧಾರ. ನನ್ನೂರಿಗೆ ಹೋಗುತ್ತೇನೆ. ಕುಟುಂಬಕ್ಕೆ ಸಮಯ ಕೊಡುತ್ತೇನೆ. ಆರು ತಿಂಗಳು ವಿಶ್ರಾಂತಿ ಪಡೆಯುತ್ತೇನೆ. ರಾಜಕಾರಣಿಗಳ ಕಿರುಕುಳದಿಂದ ರಾಜೀನಾಮೆ ಕೊಟ್ಟಿದ್ದಾರೆ ಎಂದು ಕೆಲವರು ಸುದ್ದಿ ಹಬ್ಬಿಸುತ್ತಿದ್ದಾರೆ. ಅದು ನಿಜವಲ್ಲ. ಜೊತೆಗೆ, ರಾಜಕೀಯಕ್ಕೆ ಹೋಗುವ ಬಗ್ಗೆ ಯಾರ ಜೊತೆಯೂ ಯಾವ ಪಕ್ಷದೊಂದಿಗೂ ಮಾತನಾಡಿಲ್ಲ’ ಎಂದು ಹೇಳಿದರು. ಮಗನಿಗೆ ಒಳ್ಳೆಯ ತಂದೆಯಾಗಿ ಆತನ ಜೊತೆ ಕಾಲ ಕಳೆಯಬೇಕಿದೆ. ನನ್ನ ಕುಟುಂಬದತ್ತ ಹೊರಳಬೇಕಿದೆ. ಜೀವನ ಇನ್ನೂ ತುಂಬಾ ಇದೆ. ಜೀವನದ ಅತೀ ಚಿಕ್ಕ ಘಟನೆ, ವಿಷಯಗಳನ್ನು ಸವಿಯಲು ಸಮಯ ಬೇಕಿದೆ.

 

Offers

Want to Add your Offers, contact Naadle at 7090787344 or Email us at info@naadle.com