Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಚಂದನವನದ ಬಹುಮುಖ ಪ್ರತಿಭೆ ಕಾಶಿನಾಥ್, ಇನ್ನು ನೆನಪು ಮಾತ್ರ..!!

chandanavanada-bahumukha-prathibhe-kashinath-ennu-nenapu-maatra-naadle
Share This:

ಚಂದನವನದ ಅಪರೂಪದ ಕಲಾಯೋಗಿ ನಟ, ನಿರ್ದೇಶಕ ಕಾಶಿನಾಥ್ ಗುರುವಾರ ಮುಂಜಾನೆ ನಿಧನರಾಗಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಕಾಶಿನಾಥ್ ಅವರು ಕಳೆದೆರಡು ದಿನಗಳಿಂದ ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.
chandanavanada-bahumukha-prathibhe-kashinath-ennu-nenapu-maatra-naadle

Upcoming and Ongoing events

View More Events

Want to Promote your Event, contact Naadle at 9035030300 or Email us at info@naadle.com


ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ನಟ, ನಿರ್ದೇಶಕರ ಪಟ್ಟಿಯಲ್ಲಿ ಕಾಶೀನಾಥ್ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ತಮ್ಮ ಅಮೋಘ ಅನುಭವದ ಮೂಲಕ ಕನ್ನಡ ಚಿತ್ರರಸಿಕರಿಗೆ ಕಾಶಿನಾಥ್ ಅವರು ಹತ್ತಿರವಾಗಿದ್ದರು. ಕುಂದಾಪುರ ಸಮೀಪದ ಕೋಟೇಶ್ವರದ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅವರು, ಖ್ಯಾತ ನಟ, ನಿರ್ದೇಶಕ ಉಪೇಂದ್ರ, ಮನೋಹರ್, ಸುನೀಲ್ ಕುಮಾರ್ ದೇಸಾಯಿ ಮುಂತಾದ ಹೆಸರಾಂತ ನಿರ್ದೇಶಕರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದವರು. chandanavanada bahumukha prathibhe kashinath, ennu nenapu maatra-naadleಕೇವಲ ನಟ, ನಿರ್ದೇಶಕ ಮಾತ್ರವಲ್ಲದೆ ಸಂಗೀತ ನಿರ್ದೇಶನ ಹಾಗೂ ಚಿತ್ರನಿರ್ಮಾಣದಲ್ಲೂ ಅವರು ತಮ್ಮ ಛಾಪು ಮೂಡಿಸಿದ್ದರು. ಅನಂತನ ಅವಾಂತರ, ಅನುಭವ, ಹೆಂಡತಿ ಎಂದರೆ ಹೇಗಿರಬೇಕು ಅವರಿಗೆ ಜನಪ್ರಿಯತೆ ತಂದುಕೊಟ್ಟ ಸಿನಿಮಾಗಳು. ಮಂಗಳೂರು ಮಂಜುನಾಥ ಚಿತ್ರದ ಸಂಭಾಷಣೆಗಳು ಬಹಳ ಜನಪ್ರಿಯವಾಗಿವೆ.ಕಾಶಿನಾಥ್ ಕಡಿಮೆ ಬಜೆಟ್‌ನಲ್ಲಿ ಸಿನಿಮಾಗಳನ್ನು ನಿರ್ಮಿಸಿ ಅವನ್ನು ಗೆಲ್ಲಿಸುತ್ತಿದ್ದ ಕಲೆ ಅವರಿಗೆ ಸಿದ್ಧಿಸಿತ್ತು. ಕಾಶಿನಾಥ್ ಅಭಿನಯದ ಅಜಗಜಾಂತರ (1991) ಹಿಂದಿಗೆ ಜುದಾಯಿ ಹೆಸರಿನಲ್ಲಿ ರೀಮೇಕ್ ಆಗಿದೆ. ಆ ಸಿನಿಮಾದಲ್ಲಿ ಅನಿಲ್ ಕಪೂರ್, ಶ್ರೀದೇವಿ ಹಾಗೂ ಊರ್ಮಿಳಾ ಮಾತೋಂಡ್ಕರ್ ಅಭಿನಯಿಸಿದ್ದಾರೆ. ಕಾಶಿನಾಥ್ ಒಟ್ಟು 11 ಕನ್ನಡ, 1 ಹಿಂದಿ ಹಾಗೂ ತೆಲುಗು ಚಿತ್ರಗಳನ್ನು ನಿರ್ಮಿಸಿದ್ದು 37 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಚಿತ್ರಕಥೆ ನಿರ್ದೇಶನ ಮಾಡಿದ  ಕನ್ನಡ (12), ಹಿಂದಿ ಮತ್ತು ತೆಲುಗಿನಲ್ಲಿ ತಲಾ ಒಂದು. ಒಟ್ಟು 7 ಕನ್ನಡ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಚೌಕ ಚಿತ್ರದಲ್ಲಿ ಅಭಿನಯಿಸಿದ್ದರು ಅದರಲ್ಲಿನ ಅವರ ಅದ್ಭುತ ನಟನೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. chandanavanada bahumukha prathibhe kashinath, ennu nenapu maatra-naadleಹಾಸ್ಯ, ಮೊನಚು, ಜೀವನಾನುಭವದ ಹೂರಣದೊಂದಿಗೆ ನಿರ್ದೇಶಿಸಿದ ಹಲವು ಚಲನಚಿತ್ರಗಳ ಮೂಲಕ ಜೀವನದ ನೂರಾರು ಮಜಲುಗಳನ್ನು ಪರಿಚಯಿಸುವಲ್ಲಿ ಯಶಸ್ವಿಯಾದ ಕಾಶಿನಾಥ್ ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ನಿಜಕ್ಕೂ ನಷ್ಟವೇ ಸರಿ.
naadle If you like this article, click on the button below

Offers

Want to Add your Offers, contact Naadle at 9035030300 or Email us at info@naadle.com