ಬೈಂದೂರು ಐತಿಹಾಸಿಕ ಸಂಗೀತ ಫಿನಾಲೆಯಲ್ಲಿ ನಟ, ನಿರ್ದೇಶಕ ಸುರೇಶ್ ಚಿತ್ರಾಪು, KGF ಗಾಯಕಿ ಅನನ್ಯ ಭಟ್ ಪರ್ಫೆಕ್ಟ್ ಜಡ್ಜ್ ಮೆಂಟ್…!!

byndoor-ithihasika-sangeetha-finaleyalli-nata-nirdeshaka-suresh-chitrapu-kgf-gayaki-ananya-bhat-perfect-judgemant-naadle
Share This:

ಸಂಗೀತ ಕ್ಷೇತ್ರದಲ್ಲಿ ಅವಕಾಶಗಳು ವಿಪುಲವಾಗಿದೆ ಆದರೆ ಅದಕ್ಕಿಂತ ಪೂರ್ವದಲ್ಲಿ ನಿರಂತರ ಪ್ರಯತ್ನ ನಮ್ಮಲ್ಲಿರಬೇಕು. ಸರಿಯಾದ ಪ್ರಯತ್ನ ಸರಿಯಾದ ಅವಕಾಶವನ್ನು ತಲುಪಿದಾಗ ಅದು ಅದೃಷ್ಟ ಎನಿಸಿಕೊಳ್ಳುತ್ತದೆ, ಕರಾವಳಿ ವಾಯ್ಸ್ ಆಫ್ ಬೈಂದೂರ್ ಇಂತಹ ಪ್ರಯತ್ನಶೀಲ ಮನಸ್ಸುಗಳಿಗೆ ವೇದಿಕೆಯಾಗುತ್ತಿರುವುದು ಶ್ಲಾಘನೀಯ ಎಂದು ಚಲನಚಿತ್ರ ನಟ ನಿರ್ದೇಶಕ ಸಾಹಿತಿಯಾದ ಡಾ. ಸುರೇಶ್ ಚಿತ್ರಾಪು ತಿಳಿಸಿದರು.byndoor-ithihasika-sangeetha-finaleyalli-nata-nirdeshaka-suresh-chitrapu-kgf-gayaki-ananya-bhat-perfect-judgemant-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಕರಾವಳಿ ವಾಯ್ಸ್ ಆಫ್ ಬೈಂದೂರ್ ಇವರ ಆಶ್ರಯದಲ್ಲಿ ಕರಾವಳಿ ವಾಯ್ಸ್ ಆಫ್ ಬೈಂದೂರ್ ಫೈನಲ್ – 2019 ಅದ್ದೂರಿಯಾಗಿ ನಗರದ ಗಾಂಧಿ ಮೈದಾನದಲ್ಲಿ ನಡೆಯಿತು . ಹೋಟೆಲ್ ಅಂಬಿಕಾ ಇಂಟರ್ನ್ಯಾಷನಲ್ ನ ಡೈರೆಕ್ಟರ್ ಜಯಾನಂದ ಹೋಬಳಿದಾರ್ ಡ್ರಮ್ ಬಾರಿಸುದಾರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸ್ಯಾಂಡಲ್ವುಡ್ ನ ಪ್ರಸಿದ್ಧ ಹಿನ್ನಲೆ ಗಾಯಕಿ ಅನನ್ಯ ಭಟ್, ಚಿತ್ರ ನಿರ್ದೇಶಕ ಡಾ. ಸುರೇಶ್ ಕೋಟ್ಯಾನ್ ಚಿತ್ರಾಪು, ನಿರ್ಮಾಪಕ ವಾಸುದೇವ ಕೋಟ್ಯಾನ್, ಬಹುಭಾಷಾ ಚಿತ್ರನಟ ಓಂಗುರು ಬಸ್ರುರು, ಸಂಗೀತ ನಿರ್ದೇಶಕ ಉತ್ತಮ ಸಾರಂಗ್ ಮತ್ತು ಅನೇಕ ಗಣ್ಯರು ಉಪಸ್ಥಿತಿಯಿದ್ದರು.byndoor-ithihasika-sangeetha-finaleyalli-nata-nirdeshaka-suresh-chitrapu-kgf-gayaki-ananya-bhat-perfect-judgemant-naadleಸ್ವತಃ ಸಂಗೀತ ನಿರ್ದೇಶಕನೂ ಸಾಹಿತಿಯೂ ಆಗಿರುವ ಡಾ. ಸುರೇಶ್ ಚಿತ್ರಾಪು ಹಾಗೂ ಖ್ಯಾತ ಗಾಯಕಿ ಅನನ್ಯ ಭಟ್ ಎಲ್ಲ ಸಂಗೀತದ ಮಜಲುಗಳಲ್ಲಿ ಸ್ಪರ್ಧಾಳುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಲಿಷಾ ಕೊಕರ್ಣೇ ಪ್ರಥಮ, ಗ್ರೀಷ್ಮ ಕಟೀಲ್ ದ್ವಿತೀಯ ಮತ್ತು ಧಾರಿಣಿ ಕೆ ಯಸ್ ಕುಂದಾಪುರ ತೃತೀಯ ಬಹುಮಾನ ಪಡೆದರು. ಇವರು ನೀಡಿರುವ ತೀರ್ಪಿಗೆ ಸ್ಪರ್ಧಾಳುಗಳು ಸೇರಿದಂತೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಹಿನ್ನೆಲೆ ಗಾಯಕಿ ಅನನ್ಯ ಭಟ್, ಚಲನಚಿತ್ರ ನಿರ್ದೇಶಕ ಡಾ. ಸುರೇಶ್ ಚಿತ್ರಾಪು, ನಿರ್ಮಾಪಕ ವಾಸುದೇವ ಕೋಟ್ಯಾನ್, ಚಲಚಿತ್ರ ನಟ ಓಂಗುರು ಬಸ್ರುರು ಮತ್ತು ಉದ್ಯಮಿ ಜಯಾನಂದ ಹೋಬಳಿದಾರ್ ಅವರನ್ನು ಸನ್ಮಾನಿಸಲಾಯಿತು.

 

Offers

Want to Add your Offers, contact Naadle at 7090787344 or Email us at info@naadle.com