Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಬಿಗ್ ಬಾಸ್ ಕನ್ನಡ ಸೀಸನ್ ೫ ಸಂಭವನೀಯರ ಪಟ್ಟಿ…

Share This:

ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಆವೃತಿ ೫ ರ ಕ್ಷಣಗಣನೆ ಆರಂಭವಾಗಿದ್ದು ಆಕ್ಟೊಬರ್ ೧೫ ರಂದು ಕಲರ್ಸ್ ಸೂಪರ್ ಚಾನೆಲ್ ನಲ್ಲಿ ಪ್ರಸಾರಗೊಳ್ಳಲಿದೆ. ಈ ಬಾರಿಯ ಬಿಗ್ ಬಾಸ್ ನಲ್ಲಿ ಸೆಲೆಬ್ರೆಟಿಗಳ ಜೊತೆಗೆ ಜನ  ಸಾಮಾನ್ಯ ಸ್ಪರ್ದಿಗಳು ಇರಲಿದ್ದು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಈ ಕೆಳಗಿನ ಸೆಲೆಬ್ರಿಟಿಗಳು ಬರುವ ನಿರೀಕ್ಷೆಯಿದೆ.

ಕಾವ್ಯ ಶೆಟ್ಟಿ

ಇಷ್ಟಕಾಮ್ಯ ಚಿತ್ರದ ನಾಯಕಿ. ಈಕೆ ೨೦೧೧ ರಲ್ಲಿ ‘ಫೆಮಿನಾ ಮಿಸ್ ಇಂಡಿಯಾ’ ಬ್ಯೂಟಿ ಕಾಂಟೆಸ್ಟ್ ನ ಸ್ಪರ್ಧಿ . ಕನ್ನಡ ಚಿತ್ರರಂಗದ ಭರವಸೆಯ ನಟಿ.

ಸುನಿಲ್ ರಾವ್

‘ಎಸ್ಕ್ಯೂಸ್ ಮೀ ಚಿತ್ರದ ನಾಯಕ ನಟ’. ಇವರು ಹಿನ್ನಲೆ ಗಾಯಕ , ನಟ ಮತ್ತು ಸಾಹಿತ್ಯ ರಚನೆಗಾರ.  ಸುನಿಲ್ ರಾವ್ ಕನ್ನಡ ಚಿತ್ರರಂಗದ ಪ್ರಸಿದ್ದ ಹಿನ್ನಲೆ ಗಾಯಕಿ ಬಿ ಕೆ  ಸುಮಿತ್ರರವರ ಮಗ.

ಪಂಕಜ್ ನಾರಾಯಣ್

ಪ್ರಸಿದ್ಧ ನಿರ್ದೇಶಕ ಯಸ್  ನಾರಾಯಣ್ ರವರ ಮಗ. ಚೈತ್ರದ ಚಂದ್ರಮ ಚಿತ್ರದ ಮೂಲಕ ನಾಯಕನಾಗಿ ಎಲ್ಲಾರಿಗೆ ಪರಿಚಯ. ಬಾಲನಟನಾಗಿ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದವರು.

ದಿಗಂತ್

ಕನ್ನಡ ಚಿತ್ರರಂಗದ ಗುಳಿಕೆನ್ನೆ ಹುಡುಗ ದಿಗಂತ್. ಗಾಳಿಪಟ ಸಿನಿಮಾದ ತನ್ನ ಅದ್ಭುತ ಅಭಿನಯದಿಂದ ದೂದುಪೇಡ ದಿಗಂತ್ ಎಂದು ಪರಿಚಿತರಾದವರು.

ರಾಜು ತಾಳಿಕೋಟೆ

ಮನಸಾರೆ ಚಿತ್ರದ ಮೂಲಕ ಹಾಸ್ಯ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ಕನ್ನಡದ ಪ್ರಸಿದ್ದ ಹಾಸ್ಯ ನಟರಲ್ಲಿ ಒಬ್ಬರು.
ಅನುರಾಧ ಭಟ್

ಕನ್ನಡ ಚಿತ್ರರಂಗದ ಪ್ರಸಿದ್ಧ ಹಿನ್ನೆಲೆ ಗಾಯಕಿ ತನ್ನ ಮಧುರವಾದ ಕಂಠದಿಂದ ಎಲ್ಲರ ಮನಗೆದ್ದವರು. ಕನ್ನಡ ಮಾತ್ರವಲ್ಲದೆ ಇತರ ಭಾಷೆಯಲ್ಲಿಯು ಆನೇಕ ಹಾಡುಗಳನ್ನು ಹಾಡಿದ್ದಾರೆ.

ಭಾವನಾ

‘ಚಂದ್ರಮುಖಿ ಪ್ರಾಣಸಖಿ’ ಖ್ಯಾತಿಯ ನಟಿ ಭಾವನಾ. ಪ್ರಸ್ತುತ ವಿಧಾನಪರಿಷತ್ ಸದಸ್ಯೆ. ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿಯರಲ್ಲಿ ಒಬ್ಬರು.

ಹಿತ ಚಂದ್ರಶೇಖರ್

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತಿದ್ದ ‘ಡ್ಯಾನ್ಸಿಂಗ್ ಸ್ಟಾರ್ ‘ ರಿಯಾಲಿಟಿ ಷೋ ವಿನ್ನರ್. ‘ಕಾಲ್ ಕೆಜಿ ಪ್ರೀತಿ’ ಸಿನೆಮಾದ ಮೂಲಕ ನಾಯಕನಟಿಯಾಗಿ ಚಿತ್ರರಂಗಕ್ಕೆ ಪರಿಚಯವಾದವರು. ಇವರು ನಟ ಸಿಹಿ ಕಹಿ ಚಂದ್ರುರವರ ಮಗಳು.

ರಾಜೀವ್

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಿಂದ ಇವರು ಎಲ್ಲರಿಗೆ ಪರಿಚಿತರು. ಇವರು ‘ಬೆಂಗಳೂರು 560023’ ಸಿನಿಮಾದಲ್ಲಿ ಆಭಿನಯಿಸಿದ್ದಾರೆ.

ಕೋಮಲ್ ಕುಮಾರ್

ಕನ್ನಡದ ಪ್ರಸಿದ್ಧ ಹಾಸ್ಯನಟ ಕೋಮಲ್. ಅನೇಕ ಸಿನೆಮಾಗಳಲ್ಲಿ ಹಾಸ್ಯನಟರಾಗಿ ಆಭಿನಯಿದ್ದಾರೆ. ‘ಗರಗಸ’ ಸಿನಿಮಾದ ಮೂಲಕ ನಾಯಕನಟನಾಗಿ ತಮ್ಮ ಸಿನಿಮಾ ಜೀವನದ ಹೊಸ ಅಧ್ಯಾಯ ಆರಂಭಿಸಿದರು.

ಕವಿತಾ ಗೌಡ

ಕಿರುತೆರೆ ನಟಿ ‘ಲಕ್ಷ್ಮಿ ಬಾರಮ್ಮ’ ಖ್ಯಾತಿಯ ಕವಿತಾ ಗೌಡ. ಈಕೆ ಕನ್ನಡ ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ.

naadle If you like this article, click on the button below