Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿ ಶ್ರೀ ಕ್ಷೇತ್ರ ಬಪ್ಪನಾಡು..!!

bhramakalashotsavada sambrahadalli shri keshtra bappanaadu-naadle-naadle-naadle
Share This:

ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 17ರ ಮಧ್ಯಭಾಗದಲ್ಲಿರುವ ಮೂಲ್ಕಿ ಪಟ್ಟಣದಲ್ಲಿರುವ ಪುರಾತನ ದೇವಾಲಯಗಳಲ್ಲೊಂದು ಶ್ರೀ ದುರ್ಗಾ ಪರಮೆಶ್ವರಿ ದೇವಾಲಯ. ಇಲ್ಲಿಂದ 29 ಕಿ.ಮೀ ಉತ್ತರಕ್ಕೆ ಮಂಗಳೂರು 29 ಕಿ.ಮೀ ದಕ್ಷಿಣಕ್ಕೆ ಉಡುಪಿ ನಗರಗಳಿವೆ. ಶಾಂಭವಿ ನದಿ ತಟದಲ್ಲಿರುವ ಈ ಕ್ಷೇತ್ರಕ್ಕೆ ಬಪ್ಪು ಎನ್ನುವ ಮುಸ್ಲಿಂ ವ್ಯಾಪಾರಿಯಿಂದಾಗಿ ಈ ಹೆಸರು ಬಂದಿದೆ. ಬಪ್ಪು ದೇವಾಲಯ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದ. ಬಪ್ಪನಾಡು ಡೋಲು ಬಹಳ ಪ್ರಸಿದ್ದ. ಹಾಗಾಗಿ ಈ ದೇವಸ್ಥಾನದ ಅಂಗಣದಲ್ಲಿ ಬೃಹತ್ ಆಕಾರದ ಡೋಲನ್ನು ಕಾಣಬಹುದು.bhramakalashotsavada sambrahadalli shri keshtra bappanaadu-naadle

Upcoming and Ongoing events

View More Events

Want to Promote your Event, contact Naadle at 9035030300 or Email us at info@naadle.com


ಭರತ ಖಂಡದ ಛಾಪನ್ನು ದೇಶಗಳಲ್ಲಿ ಶೋಣಿತಪುರವು ಒಂದು. ಅಲ್ಲಿ ಹಿರಣ್ಯಾಕ್ಷ, ಹಿರಣ್ಯ ಕಶಿಪು, ತಾರಕಾಸುರ, ತ್ರಿಪುರಾಸುರರೇ ಮೊದಲಾದವರು ಆಳಿ ಮೆರದರು. ದಾರಿಗಾಸುರನು ಅವರ ವಂಶಜನು. ತನ್ನ ಹಿರಿಯರನ್ನು ಸದೆದ ಹರಿಯನ್ನೂ ಕುಲವೈರಿಗಳಾದ ಸುರರನ್ನೂ ನಾಶಗೈಯಲು ಅವನು ಹಂಬಲಿಸುತ್ತಿದ್ದನು. ದೈಹಿಕ ಬಲದೊಂದಿಗೆ ದೈವಿಕ ಬಲವನ್ನು ಗಳಿಸಲು ದಾರಿಗಾಸುರನು ಕಮಲಜನ ತಪವನ್ನೆಸಗಿದನು. ಒಲಿದು ಬಂದ ವಿಧಿಯಿಂದ ‘ದೇವ ದಾನವರಿಂದಲೂ, ಬ್ರಹ್ಮ ಸೃಷ್ಟಿಯ ಯಾವ ಜೀವಿಗಳಿಂದಲೂ, ಒಳಗೆ ಹೊರಗೆ, ಮೇಲೆ ಕೆಳಗೆ, ರಾತ್ರಿ – ಹಗಲು, ಮರಣ ಬಾರದ ವರವನ್ನು ಪಡೆದನು.  ವರ ಬಲದಿಂದ ಕೊಬ್ಬಿದ ದಾನವನ್ನು ಸಕಲರನ್ನು ಸದೆಬಡಿದನು. ಹರಿಯನ್ನು ಸೋಲಿಸಿ ಮೂದಲಿಸಿ, ಶಂಖ, ಚಕ್ರ, ಗದಾ, ಪದ್ಮಾದಿಗಳನ್ನು ತೆಗೆದುಕೊಂಡು ನಿಜ ನಗರಿಗೆ ಹೋದನು.ಅವುಗಳನ್ನು ಪೂಜಾಗಾರದಲ್ಲಿಡಲು ತನ್ನ ಷೋಡಶ ರಾಣಿಯರಿಗೆ ಅಪ್ಪಣೆ ಇತ್ತನು. ಮರುಗುತ್ತಿದ್ದ ಹರಿಯ ಸಪ್ತ ಅಶ್ರುಬಿಂದುಗಳು ಜಂಘೆ ಗಿಳಿಯಲು ರವಿಕೋಟೆ ತೇಜದ ಸಪ್ತಸ್ತ್ರೀಯರು ಜನಿಸಿದರು. ಅವರು ಆದಿಶಕ್ತಿಯ ಅಂಶ ಸಂಭೂತೆಯರು. ಹರಿಯು ಅವರನ್ನು ಭಗವತಿ, ಪರಮೇಶ್ವರಿ, ಭ್ರಮರಾಂಬಿಕೆ, ರಾಜರಾಜೇಶ್ವರಿ, ಅನ್ನಪೂರ್ಣೇಶ್ವರಿ, ರಕ್ತೇಶ್ವರಿ, ಕಾತ್ಯಾಯಿನಿ ಎಂದು ಸಂಬೋಧಿಸಿ ಜಲದುರ್ಗೆಯರೆಂದು ಕೊಂಡಾಡಿದನು. ಅವರಿಗೆ ಯೋಗ್ಯ ಆಯುಧಗಳನ್ನಿತ್ತು ಹರಸಿ ಅಸುರನ ವಧೆಗಾಗಿ ಕಳುಹಿಸಿ ಕೊಟ್ಟನು.bhramakalashotsavada sambrahadalli shri keshtra bappanaadu-naadleಸಪ್ತದುರ್ಗೆಯರು ಶೋಣಿತಪುರದ ಕಡೆಗೆ ಹೊರಟರು. ಆಗ ಈಶ್ವರಾಂಶ ಸಂಭೂತನಾದ ಧರ್ಮದೇವತೆಯೊಬ್ಬನು ಭೂಲೋಕಕ್ಕೆ ಬಂದು ಧರ್ಮದ ಸ್ಥಾಪನೆಗೈದನು. ದೇಹ ಶ್ರಮ ಪರಿಹಾರಕ್ಕಾಗಿ ಅವನು ತಲೆಯನ್ನು ಘಟ್ಟಕ್ಕೂ ಕಾಲನ್ನು ಸಮುದ್ರ ತಡಿಗೂ ಚಾಚಿ ಹಾಯಾಗಿ ನಿದ್ರಿಸುತ್ತಿದ್ದನು. ಅವನೇ ಗುಳಿಗ. ದುರ್ಗೆಯರು ಅವನನ್ನು ಎಬ್ಬಿಸಿದರು. ರಕ್ತ ಕೊಡುವುದಾದರೆ ತಾನೂ ಬರುವೆನೆಂದು ಅವನು ಹೇಳಿದನು. ದೇವಿಯರು ಆತನನ್ನು ಕೂಡಿ ಮುಂದೆ ನಡೆದರು. ಪ್ರಾತಃಕಾಲದಲ್ಲಿ ಸ್ನಾನಾದಿ ಕರ್ಮಗಳಿಗೆ ನದಿತೀರಕ್ಕೆ ಹೊರಟ ದಾರಿಗಾಸುರನಿಗೆ ವೃದ್ಧೆಯಂತೆ ಮಾಯಾ ವೇಷದಲ್ಲಿದ್ದ ಭಗವತಿಯು ಎದುರಾದಳು. ತನಗೆ ಆಹಾರ ಬೇಕೆಂದು ಆಕೆ ಬೇಡಿಕೊಂಡಳು. ‘ರಾಣಿಯರು ಆಹಾರ ಕೊಡುವರು, ಕೊಡದಿದ್ದರೆ ಕೆರದು ಹೇಳೆಂದು’ ಅವನು ನದಿಯ ಕಡೆಗೆ ಹೋದನು. ಭಾಗೀರಥಿ ಎಂಬ ಷೋಡಶ ಪ್ರಾಯದ ಚದುರೆಯಾಗಿ ಭಗವತಿಯು ಪುರಪ್ರವೇಶ ಮಾಡಿದಳು.ಅಸುರನ ಪತ್ನಿಯರಲ್ಲೊಬ್ಬಳಾದ ರಂಭಾಮಣಿಯೊಡನೆ ಶಂಖ, ಚಕ್ರಗಳನ್ನು ಕೇಳಿದಳು. ರಾಣಿಯು ಕೊಡದಾಗ ಅಸುರನನ್ನು ಕರೆದು ಹೇಳಿದಳು.ಅವನು ರಾಣಿಯೊಡನೆ ಕೊಡು ಎಂದಾಗ ಅದನ್ನು ಪಡೆದು ತನ್ನ ಬಳಗವನ್ನು ಸೇರಿಕೊಂಡಳು.bhramakalashotsavada sambrahadalli shri keshtra bappanaadu-naadleಮೋಸ ಹೋದುದಕ್ಕೆ ರೋಷಗೊಂಡು ರಕ್ಕಸನು ಸಪ್ತ ದುರ್ಗೆಯರನ್ನು ಎದುರಿಸಿದನು. ಕದನದಲ್ಲಿ ಗುಳಿಗನನ್ನು ಸೋಲಿಸಿದನು. ದೇವಿಯರೊಡನೆ ಏಳುದಿನಗಳ ಕಾಳಗದಲ್ಲಿ ಸೋತು ತಿಳಿಯದಂತೆ ಪಾತಾಳ ಸೇರಿದನು. ಭಗವತಿಯು ಆತನ ವಧೆಗಾಗಿ ಕಾಳಿ ರೂಪವನ್ನು ತಾಳಿ ಶೋಧಿಸತೊಡಗಿದಳು. ಮುಸ್ಸಂಜೆಯ ಹೊತ್ತಿಗೆ ಶಿವ ಪೂಜೆಗಾಗಿ ಅಸುರನು ಭೂಮಿಗೆ ಬರುವಷ್ಟರಲ್ಲಿ ಕಾಳಿಯು ಆತನನ್ನು ಕೊಂದಳು. ಕರುಳನ್ನು ಹಾರವಾಗಿ ತೊಟ್ಟುಕೊಂಡಳು. ರಕ್ತದಿಂದ ಗುಳಿಗನು ತೃಪ್ತನಾದನು. ಭಗವತಿಯು ಕಾಳಿ ರೂಪದಿಂದ ಬಳಗವನ್ನು ಕೂಡಿ ಕೊಂಡು ಹರಿದರ್ಶನಕ್ಕೆ ಹೊರಟಳು. ಹರಿಯು ಕಾಳಿಯ ಶಾಂತಿಗೂ ಲೋಕದಲ್ಲಿ ಧರ್ಮ ಸ್ಥಾಪನೆಗೆ ಅನುಕೂಲವಾಗುವಂತೆಯೂ ಧರ್ಮಪಾಲನೆಂಬ ಬಾಲಕನನ್ನು ಸೃಷ್ಟಿಸಿ ಕಳುಹಿಸಿ ಕೊಟ್ಟನು. ಧರ್ಮಪಾಲನು ಮುಂದೆ ನಡೆದು ಕಾಳಿಯನ್ನು ಮಾತೆಯೆಂದು ಅಪ್ಪಿಕೊಂಡನು; ವೈಕುಂಠಕ್ಕೆ ಬಂದ ಕಾಳಿಗೆ ತನ್ನ ಎಡಗೈಯ ಕಿರುಬೆರಳನ್ನು ಕತ್ತರಿಸಿ ರಕ್ತಕೊಟ್ಟು ಹರಿಯು ತೃಪ್ತಿಪಡಿಸಿದನು.ಆನಂತರ ಹರಿಯು ಭೂಲೋಕಕ್ಕೆ ಹೋಗಿ ದುಷ್ಟ ನಿಗ್ರಹ-ಶಿಷ್ಟ ಪಾಲನೆ ಮಾಡುವಂಥೆ ದುರ್ಗೆಯರನ್ನು ಕೇಳಿದನು. ಅವರು ವಾಹನ ಕೇಳಿದರು. ಹರಿಯು ‘ಕನಕ – ರಜತಗಳ ನಾವೆ ಮಾಡಿಕೊಡುವೆ’ ಎಂದಾಗ ದುರ್ಗೆಯರು ಒಪ್ಪದೆ ಗಂಧದ ಮರದ ನಾವೆ ಕೇಳಿದರು. ಹರಿಯು ‘ವೈಕುಂಠದ ಗಂಧದ ಮರ ಸಾಯದಂತೆ, ಮಧ್ಯ ಭಾಗ ತೆಗೆದು ನಾವೆ ಮಾಡಿರಿ’ ಎಂದು ಹೇಳಲು ದುರ್ಗೆಯರು ಶಿಲ್ಪಿಯನ್ನು ಹುಡುಕುತ್ತಾ ನಡೆದರು. ಹರಿಯು ಶಿಲ್ಪಿಗಳನ್ನು ಮಾಯ ಮಾಡಿದನು. ಶಿಲ್ಪಿಯನ್ನು ಹುಡುಕುತ್ತ ದುರ್ಗೆಯರು ಕೇರಳಕ್ಕೆ ಬಂದರು. ಸಮಾಧಿಸ್ಥನಾಗಿದ್ದ ಒಬ್ಬ ಶಿಲ್ಪಿಗೆ ಜೀವಕಳೆಯಿತ್ತು ನಾವೆ ಮಾಡಿಕೊಡಲು ಹೇಳಿದರು. ಆತನು ನಾವೆಯ ಮಜೂರಿಯಾಗಿ ಹತ್ತು ವರಹಗಳನ್ನು ಕೇಳಿದನು. ದೇವಿಯರು ಹಣಕ್ಕಾಗಿ ಮುಂದೆ ಬಂದರು. ಭಗವತಿಯು ಪಾಂಡ್ಯ ರಾಜ್ಯದ ಪಾಂಡುರಾಜನಲ್ಲಿ ತನ್ನ ಕಾಲ ಕಡಗವನ್ನು ಅಡವಿಟ್ಟು ಹತ್ತು ವರಹ ಪಡೆದಳು.ಶಿಲ್ಪಿಗೆ ಹಣ ಕೊಟ್ಟು ನಾವೆಯ ಕೆಲಸ ಪೂರ್ತಿಮಾಡಿದರು.  ವೈಕುಂಠಕ್ಕೆ ಹೋಗಿ ಹಣವನ್ನೂ ಹರಿಯ ಆಜ್ಞೆಯನ್ನೂ ಪಡೆದು ಪಾಂಡ್ಯ ರಾಜ್ಯಕ್ಕೆ ಬಂದರು.ಪಾಂಡು ರಾಜನು ಮಗನಿಗೆ ಕಾಲಕಡಗವನ್ನು ಕಟ್ಟಿ ನರ್ತನ ಮಾಡಿಸುತ್ತಿದ್ದನು. ಭಗವತಿಯು ರಾಜಕುಮಾರನನ್ನು ಎತ್ತಿ ನಾವೆಯ ಕೂವೆ ಮರಕ್ಕೆ ಹಾರಿಸಿದಳು. ನಾವು ಹೋಗಿ ನೆಲೆನಿಂತ ದೇವಸ್ಥಾನಗಳ ಉತ್ಸವಕ್ಕೆ ಇವನು ಗರಡೆಯಾಗುವನು. ಈತನಿಗೆ ಪ್ರಥಮ ಪೂಜೆ ಸಲ್ಲಲಿ ಎಂದು ಹೇಳಿ ದುರ್ಗೆಯರು ನಾವೆ ಹತ್ತಿ ಮುಂದೆ ಹೊರಟರು.bhramakalashotsavada sambrahadalli shri keshtra bappanaadu-naadleದೇವಿಯರು ಸಮುದ್ರದಲ್ಲಿ ಮುಂದೆ ಬರಲು ಹರಿಯ ಮೂರನೆಯ ಅವತಾರವಾದ ವರಾಹನು ಪಂಜುರ್ಲಿಯಾಗಿ ಸಮುದ್ರದಲ್ಲಿದ್ದನು. ಅವನು ನಾವೆಯನ್ನು ಮಗುಚಲು ಪ್ರಯತ್ನಿಸಿದನು. ದೇವಿಯರು ಪರಿಚಯ ಕೇಳಿ ಅವನನ್ನು ತಮ್ಮವನನ್ನಾಗಿ ಸ್ವೀಕರಿಸಿದರು. ನಾವೆ ಹತ್ತುಗಾವುದ ಮುಂದೆ ನಡೆಯಿತು. ಪಂಜುರ್ಲಿಯೊಡನೆ ದಾರಿ ವಿವರ ಕೇಳಿದಾಗ ಆತನು ಕೂವೆ ಮರ ಹತ್ತಿ, ಬಂದ ದೂರ ಕಮ್ಮಿಯೆಂದೂ ಹೋಗುವ ದೂರ ಅಧಿಕವೆಂದೂ ಹೇಳಿದನು. ಸಂಶಯ ತಳೆದ ದೇವಿಯು ಗುಳಿಗನನ್ನು ಕೇಳಿದಾಗ ಆತನು ಕೂವೆ ಮರ ಹತ್ತಿ ಬಂದ ದಾರಿ ಹೆಚ್ಚೆಂದೂ ಹೋಗಲಿರುವ ದಾರಿ ಕಮ್ಮಿಯೆಂದೂ ಹೇಳಿದನು. ಕ್ರೋಧಗೊಂಡ ಭಗವತಿಯು ಪಂಜುರ್ಲಿಯನ್ನು ಹಿಡಿದು ಘಟ್ಟದ ಮೇಲೆ ಎಸೆದಳು. ಆತನು ತಿರುಗಿ ನೋಡಲು ಕನಿಕರದಿಂದ ‘ಕರೆದಾಗ ಬಂದುಬಿಡು’ ಎಂದಳು.bhramakalashotsavada sambrahadalli shri keshtra bappanaadu-naadleಹಡಗು ಕಾಸರಗೋಡು, ಕುಂಬಳೆ, ಉಪ್ಪಳ, ಪಟ್ಟತ್ತೂರು, ಮಂಜೇಶ್ವರ, ಉದ್ಯಾವರ, ಉಳ್ಳಾಲಗಳನ್ನು ಹಾದು ಕುದ್ರೋಳಿಗೆ ಬಂತು. ಅಲ್ಲಿಂದ ಮುಲ್ಕಿಯ ಸಸಿಹಿತ್ಲಿಗೆ ಬಂದರು. ಅಲ್ಲಿ ಕೋಂದ ಕಣ್ಣಾಯನೆಂಬ ಬಿಲ್ಲವನು ಕಲ್ಲು ತೆಗೆಯುತ್ತಿದ್ದನು. ಆತನೊಡನೆ 7 ಸೀಯಾಳ ಕೇಳಿದರು. ಅವನು ದೇವಿಯರ ಮಹಿಮೆ ತಿಳಿದು ಸೀಯಾಳ ಕೆತ್ತುವಾಗ ಒಂದು ಸೀಯಾಳ ಒಡೆಯಿತು. ಅದನ್ನು ಭಗವತಿ ತೆಗೆದು ಕುಡಿದಳು.ಶೂದ್ರನನ ಕೈಯ ವಸ್ತುವನ್ನು ಸ್ವೀಕರಿಸಿದ ಆಕೆಯನ್ನು ಉಳಿದ ದೇವಿಯರು ಕುಲಭ್ರಷ್ಟಳೆಂದರು. ಆದರೆ ಭಗವತಿಯು ‘ಈತನೇ ತನ್ನ ಭಕ್ತ’ನೆಂದು ಅಲ್ಲಿ ನೆಲೆಯೂರಿದಳು. ಗುಳಿದ ಮತ್ತು ಧರ್ಮಪಾಲರು ಆಕೆಯ ಬಳಿ ನಿಂತರು. ಮುಲ್ಕಿ ಸೀಮೆಯಲಿ ಶಾಂಭವಿ – ನಂದಿನಿ ನದಿಗಳ ಸಂಗಮದಲ್ಲಿ ಪರಮೇಶ್ವರಿಯು ಪಂಚಲಿಂಗಗಳಲ್ಲಿ ಪಾದುರ್ಭವಿಸಿದಳು. ಉಳಿದವರು ಬೇರೆ ಬೇರೆ ಕ್ಷೇತ್ರಗಳಿಗೆ ಹೋದರು. bhramakalashotsavada sambrahadalli shri keshtra bappanaadu-naadleಕಾಲಾಂತರದಲ್ಲಿ ಮಲಬಾರಿನ ಬಪ್ಪಬ್ಯಾರಿಯು ಮುಲ್ಕಿಯಲ್ಲಿ ಮನೆ ಮಾಡಿ ವ್ಯಾಪಾರ ಮಾಡುತ್ತಿದ್ದನು. ಆತನು ಒಂದು ದಿನ ನಾವೆಯಲ್ಲಿ ಸಾಮಾನು ಹೇರಿ ವಿದೇಶಗಳಿಗೆ ಹೊರಟನು. ಶಾಂಭವಿ ನದಿ ಮಧ್ಯೆ ಮಚ್ಚೆ ತಡೆಯಿತು. ನೋಡುವಾಗ ರಕ್ತ ಕಾಣಿಸಿತು. ಬಪ್ಪಬ್ಯಾರಿ ಬೆದರಿದನು. ‘ಮುಲ್ಕಿಯ ಸಾವಂತರ ಸಹಕಾರದಿಂದ ದೇವಸ್ಥಾನ ನಿರ್ಮಿಸಿ, ಬೈಲ ಉಡುಪರ ಮುಖೇನ ಪೂಜೆಯನ್ನು ಜರಗಿಸು; ಎಂದು ಅಂಬರವಾಣಿಯಾಯಿತು. ಜೈನ ವಂಶದ ದುಗ್ಗಣ್ಣ ಸಾವಂತರು ಮುಲ್ಕಿ ಸೀಮೆಯ ಒಂಭತ್ತು ಮಾಗಣೆಗಳನ್ನು ಒಟ್ಟುಕೂಡಿಸಿ ವೈಭವದಿಂದ ರಾಜ್ಯಭಾರ ನಡೆಸುತ್ತಿದ್ದರು. ಬಪ್ಪನು ರಾಜರ ಬೀಡಿಗೆ ಹೋಗಿ ನಡೆದ ಸಂಗತಿಗಳನ್ನು ಹೇಳಿದನು. ಸಾವಂತರು ಬಪ್ಪಬ್ಯಾರಿಯ ಖರ್ಚಿನಿಂದ ಗರ್ಭಗುಡಿಯನ್ನೂ ಸೀಮೆಯ ಪ್ರಜೆಗಳಿಂದ ಗುಡಿಗೋಪುರಗಳನ್ನೂ ಕಟ್ಟಿಸಿ ದೇವಸ್ಥಾನಕ್ಕೆ ಉಂಬಳಿ ಬಿಟ್ಟರು. ಬೈಲ ಉಡುಪರನ್ನು ಪ್ರಧಾನ ಅರ್ಚಕರನ್ನಾಗಿ ನೇಮಕ ಮಾಡಿದರು. ಬಪ್ಪಬ್ಯಾರಿಯಿಂದಾದ ಕ್ಷೇತ್ರಕ್ಕೆ ಬಪ್ಪನಾಡು ಎಂಬ ನಾಮಕರಣವಾಯಿತು.bhramakalashotsavada sambrahadalli shri keshtra bappanaadu-naadle-naadleಭಗವತಿಯೊಡನೆ ನಿಂತ ಧರ್ಮಪಾಲನಿಗೆ ಉಳಿದ ತಾಯಂದಿರ ನೆನಪಾಯಿತು. ಆತನು ಸಸಿಹಿತ್ಲಿನಿಂದ ಮುಲ್ಕಿ ಸೀಮೆಗೆ ಬಂದನು ಧರ್ಮಪಾಲನನ್ನು ಪರೀಕ್ಷಿಸಲು ಪರಮೆಶ್ವರೀಯು ನಿಶ್ಚೈಸಿ, ಸಾಮಾನ್ಯ ಸ್ತ್ರೀ ವೇಷದಿಂದ ಶಾಂಭವಿ ನದೀ ತೀರಕ್ಕೆ ಸಂಜೆಯ ವೇಳಗೆ ಬಂದು ಅಲೆದಾಡಿದಳು. ಅಲ್ಲಿಗೆ ಬಂದ ಧರ್ಮಪಾಲನು ಸ್ತ್ರೀಯನ್ನು ಕರೆದು ಮನೆಗೆ ಹೋಗಲು ಹೇಳಿದನು ಆಗ ಸ್ತ್ರೀಯು ನನಗೆ ಯಾರ ಹೆದರಿಕೆ ಇಲ್ಲ ಲೋಕದ ಜನರೆಲ್ಲ ನನ್ನ ಮಕ್ಕಳು, ನೀನು ಕೂಡಾ ನನ್ನ ಮಗನು ಎಂದು ಹೇಳಿದಳು. ತನ್ನನ್ನು ಮಗನೆಂದು ಹೇಳಿದ ದಿಟ್ಟ ಹೆಂಗಸನ್ನು ಶಿಕ್ಷಿಸಲು ಧರ್ಮಪಾಲನು ಮುಂದಾದನು. ಯುದ್ಧವು ಭೀಕರವಾಗಿ ನಡೆಯಿತು. ಧರ್ಮಪಾಲನ ಪರಾಕ್ರಮಕ್ಕೆ ಮೆಚ್ಚಿದ ದುರ್ಗೆಯು ‘ಬೇಕಾದ ವರ ಬೇಡು’ ಎಂದಳು. ದೇವಿ ಧರ್ಮಪಾಲನನ್ನು ‘ನನ್ನ ಗೃಹ ರಕ್ಷಕನಾಗು’ ಎಂದಳು. ಇದನ್ನು ಕೇಳಿ ಧರ್ಮಪಾಲನು ಮರುಗಿದನು. ದೇವಿಯು ಅವನಿಗೆ ಪ್ರತ್ಯಕ್ಷಳಾದಳು. ಧರ್ಮಪಾಲನು ತಾಯಿಯೊಡನೆ ಕ್ಷಮೆ ಬೇಡಿ ಬಪ್ಪನಾಡಿನ ಕ್ಷೇತ್ರಪಾಲನಾದನು.bhramakalashotsavada sambrahadalli shri keshtra bappanaadu-naadle-naadleಸಿಮಂತೂರಿನ ರಾಣಿ ಪುಳ್ಳು ಪೆರ್ಗಡ್ತಿಯು ಕುಡುಪು ಅನಂತ ಪದ್ಮನಾಭ ದೇವರ ದರ್ಶನ ಪಡೆದು ಹಿಂತಿರುಗಿ ಬರುವಾಗ ಸುರತ್ಕಲ್ಲಿನಲ್ಲಿ ದಂಡಿಗೆ ನಿಲ್ಲಿಸಿ ಎಳೆನೀರು ಕೇಳಿದಳು. ಅಲ್ಲಿ ನಿಂತಿದ್ದ ತಬ್ಬಲಿ ಬಾಲಕಿ ಅಚ್ಚು ಎಂಬಾಕೆಯನ್ನು ನೋಡಿ ಮರುಗಿದಳು. ಆಕೆ ನಿರ್ಗತಿಕೆ ಎಂಬುದನ್ನು ತಿಳಿದು ಬೀಡಿಗೆ ಕರೆದುಕೊಂಡು ಬಂದು  ಸಾಕಿದಳು. ಪ್ರಾಯ ಭರಿತೆಯಾಗಲು ಆಕೆಗೆ ಕುಂದಾಯ ಬಾರೆ ಎಂಬ ಬಿಲ್ಲವನೊಂದಿಗೆ ಲಗ್ನವಾಯಿತು. ದುರ್ಗೆಯ ಭಕ್ತರಾದ ಆ ದಂಪತಿಗಳಿಗೆ ಕಾಲಕ್ರಮೇಣ ಅವಳಿ- ಜವಳಿ ಮಕ್ಕಳು ಜನಿಸಿದರು. ಅವರನ್ನು ಕಾಂತಾಬಾರೆ- ಬುದಾಬಾರೆ ಎಂದು ಕರೆದರು. ಕಾಂತಬಾರೆ ಬುದಾಬಾರೆಯರು ಗಟ್ಟಿ ಮುಟ್ಟಿನ ಯುವಕರಾಗಿ ಬೆಳೆದರು. ಸಿಮಂತೂರಿನ ಬಯಲಿಗೆ ನೀರು ತರುವರೆ ಪುಚ್ಚಾಡಿಯಿಂದ ಕಾಲುವೆ ಕಡಿದರು. ಊರಿನ ಕಲ್ಕುಡ ದೈವವು ಕೋಳಿಯಾಗಿ ಕೂಗಿ ಅವರನ್ನು ವಂಚಿಸಿತು. ಬೆಳಗಾಯಿತೆಂದು ಆ ವೀರರು ಪುನರೂರಿನಿಂದ ತೋಡು ಕಡಿದು ಬೆಳಗಾಗುವುದರೊಳಗೆ ಸಿಮಂತೂರಿಗೆ ನೀರು ಹರಿಸಿ ಕೃತಾರ್ಥರಾದರು.bhramakalashotsavada sambrahadalli shri keshtra bappanaadu-naadle-naadleಕಾಂತಾಬಾರೆ -ಬೂದಾಬಾರೆಯವರು ಪರಾಕ್ರಮವನ್ನು ಕೇಳಿ ತಿಳಿದ ಕೋಟಿ – ಚೆನ್ನಯರು ಕಾಂತಾಬಾರೆ – ಬೂದಾಬಾರೆಯವರ ಸಖ, ದುರ್ಗೆಯ ದರ್ಶನ, ಸಾವಂತರ ಭೇಟಿ ಮಾಡುವ ಉದ್ದೇಶವನ್ನು ಇಟ್ಟು ಮುಲ್ಕಿಗೆ ಹೊರಟರು. ಇದನ್ನುತಿಳಿದ ಕಾಂತಬಾರೆ ಬೂದಾವಾರೆಯವರು ಕೋಟಿಚೆನ್ನಯ್ಯರಿಂದ ತಮ್ಮ ವ್ಯಕ್ತಿತ್ವಕ್ಕೆ ಕುಂದು ಬರುವುದು ಎಂದು ಗ್ರಹಿಸಿ, ಮೂಲ್ಕಿ ಸೀಮೆಗೆ ಅಭೇಧ್ಯವಾದ ದರೆ ಹಾಕಿದರು. ಮೂಲ್ಕಿ ಕಡವಿನ ಕರಿಯನನ್ನು ಕರೆದು ಕೋಟಿ ಚೆನ್ನಯರು ಬಂದಲ್ಲಿ ತಮಗೆ ತಿಳಿಸಬೇಕೆಂದು ಹೇಳಿದರು. ಎಣ್ಮೂರಿನಿಂದ ಹೊರಟ ಕೋಟಿ ಚೆನ್ನಯನವರು ಮೂಲ್ಕಿ ಸೀಮೆಯ ಬಳಿಗೆ ಬಂದರು. ಧರೆಯನ್ನು ನೋಡಿ ಕಿಡಿಕಿಡಿಯಾದರು. ಕಡವಿನ ಬಳಿಬಂದು ಕರಿಯನೊಡನೆ ವಿಚಾರಿಸಿದರು. ಕರಿಯನು ಬಾರೆಯವರನ್ನು ಕರೆಯಲು ಒಡನೆಬಂದನು. ಈ ನಾಲ್ವರು ವೀರರೊಳಗೆ ಹೆಜಮಾಡಿ ಬಸ್ತಿಪಡ್ಪಿನಲ್ಲಿಏಳುದಿನ ಅಹೋ ರಾತ್ರಿ ಕದನವಾಯಿತು. ಜಯ – ಅಪಜಯಗಳು ಬರಲಿಲ್ಲ. ಕಡೆಗೆ ದುರ್ಗೆಯು ಪ್ರತ್ಯಕ್ಷಳಾಗಿ ನನ್ನ ಭಕ್ತರಾದ ಬಾರೆಯವರ ಸೀಮೆಗೆ ನೀವು ಬರಬೇಡಿರೆಂದೂ, ನೀವಿದ್ದೇಡೆಗೆ ಅವರೂ ಬರಲಾರರೆಂದೂ ಹೇಳಿದಳು. ಕೋಟಿ ಚೆನ್ನಯರನ್ನು ಒಂದು ದಿನ ಹೆಜಮಾಡಿಯಲ್ಲಿ ತಂಗಲು ಹೇಳಿ, ಒಂದು ದಿನ ಆಹಾರವನ್ನು ತಾನು ಕೊಡುವುದಾಗಿ ಅಭಯವಿತ್ತು ಅಂತರ್ಧಾನವಾದಳು. ಬಿಲ್ಲವ ವೀರರು ದುರ್ಗೆಯ ಆದೇಶದಂತೆ ಐಕ್ಯರಾಗಿ ಸ್ನೇಹ ಬೆಳೆಸಿ ತಮ್ಮ ತಮ್ಮ ಊರಿಗೆ ತೆರಳಿದರು.bhramakalashotsavada sambrahadalli shri keshtra bappanaadu-naadle-naadleಚೇಳಾರುಗುತ್ತಿನ ದುಗ್ಗು ಎಂಬ ಕನ್ನಿಕೆಯನ್ನು ಕಟೀಲು ಗುತ್ತಿನ ನಾರಾಯಣ ಎಂಬಾತನಿಗೆ ಲಗ್ನವಾಗಿತ್ತು. ಅವರಿಗೆ ಬಹುಕಾಲ ಸಂತತಿಯಾಗದಿರಲು, ಬಪ್ಪನಾಡಿಗೆ ಹರಕೆ ಹೊತ್ತರು. ದೇವಿಯ ದಯೆಯಿಂದ ಗಂಡು ಶಿಶುವೊಂದು ಜನಿಸಿತು. ಆತನಿಗೆ ಮಂಜಣ್ಣ ನೆಂದು ನಾಮಕರಣ ಮಾಡಿದರು. ಆತನು ಗಟ್ಟಿ ಮುಟ್ಟಿನ ಆಳು. ಕೃಷಿ ಪ್ರಿಯ: ಉಣ್ಣುವುದರಲ್ಲಿ ಎಲ್ಲರನ್ನೂ ವಿೂೀರಿಸುತ್ತಿದ್ದನು. ಪ್ರಾಯ ಪ್ರಬುದ್ಧನಾದ ಮಂಜಣ್ಣನು ಗುರುಹಿರಿಯರಿಗೆ ವಿಧೇಯನಾಗಿದ್ದನು. ದುಗ್ಗೆಯು ಆತನೊಡನೆ ಹರಕೆ ತೀರಿಸಲು ಹೇಳಿದಳು. ಮಂಜಣ್ಣನು ಒಂದು ದಿನ ಎರ್ಮಾಳು ಜಾತ್ರೆಗೆ ಹೊರಟನು. ಮನೆಯಾಳು ತನಿಯನನ್ನು ಕರೆದು ಗೃಹ ರಕ್ಷಣೆಯನ್ನು ಮಾಡ ಹೇಳಿದನು. ಮಂಜಣ್ಣನು ಬಪ್ಪನಾಡಿಗೆ ಬಂದು ದುರ್ಗೆ – ಕ್ಷೇತ್ರಪಾಲರಿಗೆ ವಂದಿಸಿದ. ಬೈಲ ಉಡುಪರನ್ನು ಕಂಡು ಮಾತಾಡಿದ. ತನ್ನಿಂದಾಗಬೇಕಾದ ಸೇವೆಯನ್ನು ಕೇಳಿದ. ಆಗ ಉಡುಪರು ‘ಧ್ವಜ ಕಂಬದ ಕಲ್ಲು, ಎದುರಿನ ತೋಡಿಗೆ ಹಾಸು ಕಲ್ಲುಗಳು ಬೇಕಾಗಿವೆ’ ಎಂದರು. ಮಂಜಣ್ಣನು ಅಲ್ಲಿಂದ ಹೊರಟು ಎರ್ಮಾಳು ಸೇರಿದ. ಜನಾರ್ಧನ ದೇವರಿಗೆ ಕೈ ಮುಗಿದ. ಯುವಕರ ಗುಂಪಿನಲ್ಲಿ ನುಗ್ಗಿ ಶಕ್ತಿಕಲ್ಲು ಎತ್ತಿದ. ಆತನನ್ನು ಕಂಡ ಆ ಊರ ಯುವಕರು ಕಬ್ಬಿನ ಕಟ್ಟೊಂದರೊಳಗೆ ಕಬ್ಬಿಣದ ಸರಳು ಸೇರಿಸಿ, ಕಟ್ಟಿ ಒಂದೇ ಪಟ್ಟಿನಲ್ಲಿ ಕಡಿದು ಇಕ್ಕಡಿ ಗೈಯಲು ಹೇಳಿದರು. ಮಂಜಣ್ಣನು ತುಂಡರಿಸಿದ. ಕಬ್ಬಿಣದ ಸರಳಿರುವುದನ್ನು ರೋಷಿತನಾದ. ಎಲ್ಲರನ್ನೂ ಹಡಿದು ಬಡಿದನು. ಮುಂದೆ ಹೊರಟನು. ರಸ್ತೆ ಬದಿಯಲ್ಲಿದ್ದ ಹಾಸು ಕಲ್ಲನ್ನು ಮತ್ತು ಧ್ವಜ ಕಂಭದ ಕಲ್ಲನ್ನು ಎತ್ತಿಕೊಂಡು ಬಂದನು. ತಾನು ತಂದ ಹರಕೆಯನ್ನು ದೇವಿಗೆ ಅರ್ಪಿಸಿದನು. ದೇವಿಯ ದರ್ಶನ ಪಡೆದು ತನ್ನ ಬೀಡನ್ನು ಸೇರಿದನು.bhramakalashotsavada sambrahadalli shri keshtra bappanaadu-naadle-naadle
ಬಪ್ಪನಾಡು ತಾಯಿ ದುರ್ಗಾಪರಮೇಶ್ವರಿಗೆ ಬ್ರಹ್ಮಕಲಶೋತ್ಸವದ ಸಂಭ್ರಮ.ಮಾರ್ಚ್ 14 ರಿಂದ 25 ರವರೆಗೆ ಪುನರ್ ಪ್ರತಿಷ್ಠ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯಲಿದೆ ಮತ್ತು ಮಾರ್ಚ್ 30 ರಿಂದ ಮಾರ್ಚ್ 6 ರವರೆಗೆ ವರ್ಷಾವಧಿ ಜಾತ್ರೋತ್ಸವ ನಡೆಯಲಿದೆ.ಇಡೀ ಮುಲ್ಕಿ ಪರಿಸರವು ಅಲಂಕೃತಗೊಂಡು ಭಕ್ತರನ್ನು ಕೈಬೀಸಿ ಕರೆಯುತಿದೆ. ಬಪ್ಪನಾಡಿಗೆ ತಾಯಿ ದುರ್ಗಾಪರಮೇಶ್ವರಿಯ ಆಶೀರ್ವಾದ ಪಡೆಯಿರಿ.
naadle If you like this article, click on the button below

Offers

Want to Add your Offers, contact Naadle at 9035030300 or Email us at info@naadle.com