ಭಾರತದ ಪ್ರಮುಖ ಕಣ್ಗಾವಲು ಉಪಗ್ರಹ ರಿಸ್ಯಾಟ್‌-2ಬಿ ಯಶಸ್ವಿ ಉಡಾವಣೆ..!!

bharathada pramukha kangavalu upagraha risat 2b yashasvi udavane-naadle
Share This:

ಬಾಹ್ಯಾಕಾಶದಿಂದ ಭೂಮಿಯ ಮೇಲೆ ನಿಗಾ ಇಡುವ ರೇಡಾರ್‌ ಇಮೇಜಿಂಗ್‌ ಉಪಗ್ರಹ ‘ ರಿಸ್ಯಾಟ್‌-2ಬಿ’ ಯನ್ನು ಬುಧವಾರ ಮುಂಜಾನೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಯಶಸ್ವಿಯಾಗಿ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಬುಧವಾರ ಬೆಳಗ್ಗೆ 5.30ಕ್ಕೆ ಉಡಾವಣೆಯಾಗುವ ಈ ರಾಕೆಟ್, 15 ನಿಮಿಷದಲ್ಲಿ 557 ಕಿ.ಮೀ. ದೂರದ ಕಕ್ಷೆ ತಲುಪಲಿದೆ. 615 ಕೆ.ಜಿ. ತೂಕದ ರಿಸ್ಯಾಟ್-2ಬಿಯಿಂದ ಭಾರತದ ಕಣ್ಗಾವಲು ವ್ಯವಸ್ಥೆ ಸುಧಾರಿಸಲಿದ್ದು, ನೈಸರ್ಗಿಕ ವಿಕೋಪ ನಿರ್ವಹಣೆ, ಅರಣ್ಯ ಮತ್ತು ಕೃಷಿ ಕ್ಷೇತ್ರಕ್ಕೂ ಇದು ನೆರವು ನೀಡಲಿದೆ. ಈ ಸೆಟಲೈಟ್​ನ ಜೀವಿತಾವಧಿ ಐದು ವರ್ಷ.bharathada pramukha kangavalu upagraha risat 2b yashasvi udavane-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಈ ಹಿಂದೆ, ರಿಸ್ಯಾಟ್‌-1, ರಿಸ್ಯಾಟ್‌-2 ಎಂಬ ಎರಡು ಗೂಢಚರ್ಯೆ ಉಪಗ್ರಹಗಳನ್ನು ಇಸ್ರೋ ಹಾರಿಬಿಟ್ಟಿತ್ತು. ಇತ್ತೀಚೆಗೆ, ಬಾಲಕೋಟ್‌ ದಾಳಿ ನಡೆದಾಗ ಅಲ್ಲಿ ಹಾನಿಗೀಡಾದ ಕಟ್ಟಡಗಳ ಚಿತ್ರಗಳನ್ನು ತೆಗೆಯುವಲ್ಲಿ ರಿಸ್ಯಾಟ್‌-1ರಲ್ಲಿನ ರೇಡಾರ್‌ಗಳು ಯಶಸ್ವಿಯಾಗಿರಲಿಲ್ಲ. ಇನ್ನು, ರಿಸ್ಯಾಟ್‌-2 ಉಪಗ್ರಹದ ಸೇವೆಯನ್ನು ಇಸ್ರೇಲ್‌ ಪಡೆಯುತ್ತಿರುವುದರಿಂದ ಅದರಿಂದಲೂ ಬಾಲಕೋಟ್‌ ದಾಳಿಯ ಅನಂತರದ ಫೋಟೋಗಳನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಇದಲ್ಲದೆ, ಭೂಮಿಯ ಚಿತ್ರಗಳನ್ನು ಚಿತ್ರಗಳನ್ನು ಪಡೆಯಲೆಂದೇ ಹಾರಿಬಿಡಲಾಗಿರುವ ಕಾಟೋìಸ್ಯಾಟ್‌ ಉಪಗ್ರಹಗಳು ಮೋಡ ಮುಚ್ಚಿದಾಗ ಸಮರ್ಪಕ ಚಿತ್ರಗಳನ್ನು ಕಳಿಸುವುದಿಲ್ಲ. ಹಾಗಾಗಿ, ಇದೂ ಸಹ ಬಾಲಕೋಟ್‌ನಲ್ಲಿ ಆಗಿರುವ ನಷ್ಟದ ಪ್ರಮಾಣ ಅಂದಾಜಿಸುವಲ್ಲಿ ಹಿನ್ನಡೆ ಉಂಟಾಗಿತ್ತು. ಹಾಗಾಗಿ, ಈ ತಾಂತ್ರಿಕ ಹಿನ್ನಡೆಯಿಂದ ಹೊರಬರಲು ತೀರ್ಮಾನಿ ಸಿರುವ ಇಸ್ರೋ, ರಿಸ್ಯಾಟ್‌-2ಬಿ ಉಡಾವಣೆ ಮಾಡುತ್ತಿದೆ.bharathada pramukha kangavalu upagraha risat 2b yashasvi udavane-naadleಭಾರತ ಈಗಾಗಲೇ ಹಲವು ಕಣ್ಗಾವಲು ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಇವುಗಳಲ್ಲಿ ಸಾಮಾನ್ಯ ರಿಮೋಟ್ ಸೆನ್ಸಿಂಗ್ ಅಥವಾ ಆಪ್ಟಿಕಲ್ ಇಮೇಜಿಂಗ್ ವ್ಯವಸ್ಥೆ ಇರುತ್ತದೆ. ಇವುಗಳು ಬೆಳಕನ್ನು ಆಧರಿಸಿದ ಕ್ಯಾಮರಾ ಹೊಂದಿವೆ. ಇದರಿಂದ ಸೂಕ್ಷ್ಮ ಪ್ರದೇಶಗಳ ಚಿತ್ರಗಳನ್ನು ಸೆರೆಹಿಡಿಯುವುದು ಕಷ್ಟ. ಆದರೆ, ರಿಸ್ಯಾಟ್-2ಬಿಯಲ್ಲಿ ಆಕ್ಟಿವ್ ಸೆನ್ಸರ್ ಸಿಂಥೆಟಿಕ್ ಅಪಾರ್ಚರ್ ರೇಡಾರ್(ಎಸ್​ಎಆರ್) ಕ್ಯಾಮರಾ ಇದೆ. ಇದರಿಂದ ಭೂಮಿ ಮೇಲಿನ ಚಟುವಟಿಕೆಯನ್ನು ಹದ್ದಿನ ಕಣ್ಣಿನಿಂದ ಗಮನಿಸಲು ಸಾಧ್ಯ ಮತ್ತು ಇದು ಹಗಲು-ರಾತ್ರಿ, ಮಳೆ-ಮೋಡ ಲೆಕ್ಕಿಸದೆ ಎಲ್ಲ ಹವಾಮಾನದಲ್ಲೂ ಕಾರ್ಯನಿರ್ವಹಿಸುವ ಕ್ಷಮತೆ ಹೊಂದಿದೆ. ಇದರಿಂದ ಶತ್ರು ದೇಶದ ಮೇಲೆ ಭದ್ರತಾ ಪಡೆ ನಿಗಾ ಇರಿಸಬಹುದು ಮತ್ತು ನೈಸರ್ಗಿಕ ವಿಕೋಪ ಸಂದರ್ಭದ ಕಾರ್ಯಾಚರಣೆಯಲ್ಲೂ ಎಸ್​ಎಆರ್ ಒದಗಿಸುವ ಮಾಹಿತಿ ಮುಖ್ಯ ಪಾತ್ರ ವಹಿಸುತ್ತದೆ. ಭಾರತದ ಇನ್ನಿತರ ಗೂಢಚಾರಿ ಉಪಗ್ರಹಗಳಿಗಿಂತ ಹೆಚ್ಚು ಶಕ್ತಿಶಾಲಿ ಮೋಡಗಳು ಕವಿದಿದ್ದರೂ, ಶತ್ರು ಪಾಳಯ ಮೇಲೆ ನಿಗಾ, ಫೋಟೋ ರವಾನೆ ಸಾಧ್ಯ.

 

Offers

Want to Add your Offers, contact Naadle at 7090787344 or Email us at info@naadle.com