ಭಾರತ ಈಗ ಹುಲಿರಾಯನ ಸುರಕ್ಷಿತ ತಾಣ, ಕರ್ನಾಟಕಕ್ಕೆ ದೇಶದಲ್ಲಿ ಎರಡನೇ ಸ್ಥಾನ..!!

Share This:

ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳ ಆವಾಸ ಸ್ಥಾನವಾಗಿ ಭಾರತ ಹೊರಹೊಮ್ಮಿದೆ. 2018ರ ಅಖಿಲ ಭಾರತ ಹುಲಿ ಗಣತಿ ವರದಿಯ ಪ್ರಕಾರ, ಭಾರತದಲ್ಲಿ ಪ್ರಸಕ್ತ 2,967 ಹುಲಿಗಳಿರುವುದು ಖಾತ್ರಿಯಾಗಿದೆ. 2006ರಲ್ಲಿ 1,411 ಹುಲಿಗಳಿದ್ದವು. ಈ ಹಿನ್ನೆಲೆಯಲ್ಲಿ, ಭಾರತವು ವಿಶ್ವದಲ್ಲೇ ಹುಲಿಗಳ ಪಾಲಿನ ಅತಿ ಸುರಕ್ಷಾ ವಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತದಲ್ಲಿ ಹುಲಿಗಳ ಸಂಖ್ಯೆ ಏರಿಕೆಯಾಗಿದ್ದು, 524 ಹುಲಿಗಳನ್ನು ಹೊಂದುವ ಮೂಲಕ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. 526 ಹುಲಿಗಳನ್ನು ಹೊಂದಿರುವ ಮಧ್ಯಪ್ರದೇಶ ನಂ.1 ಪಟ್ಟ ಗಿಟ್ಟಿಸಿಕೊಂಡಿದೆ. ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಹಿನ್ನೆಲೆಯಲ್ಲಿ ‘ಅಖಿಲ ಭಾರತ ಹುಲಿಗಳ ಅಂದಾಜು ವರದಿ 2018’ನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬಿಡುಗಡೆ ಮಾಡಿದ್ದಾರೆ. ದೇಶದಲ್ಲಿ 2,967 ಹುಲಿಗಳು ಇರಬಹುದು ಎಂದು ವರದಿಯಲ್ಲಿ ಅಂದಾಜಿಸಲಾಗಿದೆ.bharath iga hulirayana surakshitha taana karnatakakke deshadalli yeradne staana-naadle 

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳಿವೆ. ರಾಷ್ಟ್ರೀಯ ಉದ್ಯಾನ ಬಂಡೀಪುರ, ಬಿಆರ್​ಟಿ ಮತ್ತು ಮಹದೇಶ್ವರ ಬೆಟ್ಟದ ವನ್ಯಜೀವಿಧಾಮದಲ್ಲಿ ಸೂಕ್ತ ಸಂರಕ್ಷಣೆ ಫಲವಾಗಿ ಹುಲಿಗಳು ನೆಲೆ ಕಂಡುಕೊಂಡಿವೆ. ಈ ಬಾರಿ ಗಣತಿಯಲ್ಲಿ ಬಂಡೀಪುರದಲ್ಲಿ ಅಂದಾಜು 150ಕ್ಕಿಂತ ಹೆಚ್ಚು, ಬಿಆರ್​ಟಿಯಲ್ಲಿ 70 ಮತ್ತು ಮಹದೇಶ್ವರ ಬೆಟ್ಟದ ವನ್ಯಜೀವಿಧಾಮದಲ್ಲಿ 18 ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ 110 ಹುಲಿಗಳಿವೆ ಎಂದು ಹೇಳಲಾಗಿದೆ.

 

Offers

Want to Add your Offers, contact Naadle at 7090787344 or Email us at info@naadle.com