ಬಾಂಗ್ಲಾದೇಶದ ವಿರುದ್ಧ ಭಾರತಕ್ಕೆ ಭರ್ಜರಿ ಜಯ..!!!

bangladeshada virudda bharathakke bharjari jaya-naadle
Share This:

ನಾಯಕ ರೋಹಿತ್‌ ಶರ್ಮ ಮತ್ತು ರವೀಂದ್ರ ಜಡೇಜ ಅವರ ಉತ್ತಮ ನಿರ್ವಹಣೆಯಿಂದಾಗಿ ಭಾರತವು ಏಶ್ಯಕಪ್‌ ಕ್ರಿಕೆಟ್‌ ಕೂಟದ ಸೂಪರ್‌ ಫೋರ್‌ ಹಂತದ ಮೊದಲ ಪಂದ್ಯದಲ್ಲಿ ಬಾಂಗ್ಲಾ ದೇಶ ವಿರುದ್ಧ 7 ವಿಕೆಟ್‌ ಅಂತರದ ಗೆಲುವು ದಾಖಲಿಸಿದೆ. ಜಡೇಜ ಸಹಿತ ಭಾರತೀಯ ಬೌಲರ್‌ಗಳ ನಿಖರ ದಾಳಿಯಿಂದಾಗಿ ಬಾಂಗ್ಲಾದೇಶ 173 ರನ್ನಿಗೆ ಆಲೌಟಾಯಿತು. ಇದ ಕ್ಕುತ್ತರವಾಗಿ ರೋಹಿತ್‌ ಅವರ ಅಜೇಯ 83 ರನ್‌ ನೆರವಿನಿಂದ ಭಾರತವು 36.2 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟದಲ್ಲಿ 174 ರನ್‌ ಗಳಿಸಿ ಜಯಭೇರಿ ಬಾರಿಸಿತು. ರೋಹಿತ್‌ 104 ಎಸೆತಗಳಿಂದ 83 ರನ್‌ ಗಳಿಸಿ ಅಜೇಯರಾಗಿ ಉಳಿದರು. 5 ಬೌಂಡರಿ ಮತ್ತು 3 ಸಿಕ್ಸರ್‌ ಬಾರಿಸಿದ್ದರು. ಇದು ಅವರ ಸತತ ಎರಡನೇ ಅರ್ಧ ಶತಕವಾಗಿದೆ. ಶಿಖರ್‌ ಧವನ್‌ (40) ಮತ್ತು ಧೋನಿ 30 ರನ್‌ ಹೊಡೆದರು.bangladeshada virudda bharathakke bharjari jaya-naadle

Upcoming and Ongoing events

View More Events

Want to Promote your Event, contact Naadle at 7090787344 or Email us at [email protected]


ದುಬೈನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಬಾಂಗ್ಲಾದೇಶ ತಂಡ 173 ರನ್‌ಗಳಿಗೆ ಆಲೌಟಾಯಿತು. ದಕ್ಕುತ್ತರವಾಗಿ ಬ್ಯಾಟಿಂಗ್‌ ಮಾಡಿದ ಭಾರತ ತಂಡ 36.2 ಓವರುಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 174 ರನ್‌ ಗಳಿಸಿ ಜಯದ ನಗೆ ಬೀರಿತು. ಜಡೇಜ 29 ರನ್ನಿಗೆ 4 ವಿಕೆಟ್‌ ಕಿತ್ತು ಭರ್ಜರಿ ಪುನರಾಗಮನವನ್ನು ಸಾರಿದರು. 2017ರ ಜುಲೈ ಬಳಿಕ ಜಡೇಜ ಮೊದಲ ಏಕದಿನ ಪಂದ್ಯ ಆಡಲಿಳಿದಿದ್ದರು. ಪೇಸ್‌ ಬೌಲರ್‌ಗಳಾದ ಭುವನೇಶ್ವರ್‌ ಮತ್ತು ಬುಮ್ರಾ ಕೂಡ ಬಾಂಗ್ಲಾದ ಬ್ಯಾಟಿಂಗ್‌ ಸರದಿಯ ಮೇಲೆರಗಿ ತಲಾ 3 ವಿಕೆಟ್‌ ಕಬಳಿಸಿದರು.
naadle If you like this article, click on the button below

Offers

Want to Add your Offers, contact Naadle at 7090787344 or Email us at [email protected]