ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕಪ್ಪು ರಂಧ್ರದ ನೈಜ ಫೋಟೋ ಬಿಡುಗಡೆ..!!

bahyakasha ithihasadalliye modala barige kappu randrada naija photo bidugade-naadle
Share This:

ಇದು ನಿಜಕ್ಕೂ ಬಾಹ್ಯಾಕಾಶ ವಿಜ್ಞಾನ ಪ್ರಪಂಚ ಸಂಭ್ರಮಿಸುವ ಕ್ಷಣ. ದಶಕಗಳಿಂದ ಚಿದಂಬರ ರಹಸ್ಯವಾಇಯೇ ಉಳಿದಿದ್ದ ಬ್ಲ್ಯಾಕ್ ಹೋಲ್ (ಕಪ್ಪುಕುಳಿ) ಫೋಟೋ ಸೆರೆ ಹಿಡಿಯುವಲ್ಲಿ ಖಗೋಳ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಿಜ್ಞಾನಿಗಳಿಗೆ ಕಪ್ಪುಕುಳಿಯ ನೈಜ ಫೋಟೋ ಸೆರೆ ಹಿಡಿಯುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ದಶಕಗಳ ಪರಿಶ್ರಮದ ಬಳಿಕ ಕೊನೆಗೂ ವಿಜ್ಞಾನಿಗಳು ಕಪ್ಪುಕಳಿಯ ರಹಸ್ಯ ಮಾಹಿತಿಯನ್ನು ಪಡೆದಿದ್ದು, ಇದೇ ಮೊದಲ ಬಾರಿಗೆ ಕಪ್ಪುಕುಳಿಯ ನೈಜ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ನೆದರ್‌ಲೆಂಡ್ಸ್‌ನ ರಾರ‍ಯಡ್‌ಬೌಂಡ್‌ ವಿಶ್ವವಿದ್ಯಾಲಯದ ಪ್ರೊ.ಹೀನೋ ಫ್ಯಾಕಲ್‌ ಅವರು ಈ ಸವಾಲಿನ ಪ್ರಯೋಗದಲ್ಲಿ ಯಶಸ್ಸು ಕಂಡಿದ್ದಾರೆ. bahyakasha ithihasadalliye modala barige kappu randrada naija photo bidugade-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಕಪ್ಪು ಕುಳಿವೊಂದರ ಸುತ್ತಲೂ ಪ್ರಕಾಶಮಾನವಾಗಿ ಕೆಂಪು ಮಿಶ್ರಿತ ಕಿತ್ತಳೆ ಬಣ್ಣದಲ್ಲಿ ಹೊಳೆಯುವ ಬೃಹತ್‌ ಬೆಂಕಿಯ ಬಳೆ ಚಿತ್ರದಲ್ಲಿ ಕಂಡುಬಂದಿದೆ. ಅದರ ಪ್ರಕಾಶಮಾನತೆಯು ಎಂ87 ನಕ್ಷತ್ರಪುಂಜದಲ್ಲಿರುವ ಕೋಟ್ಯಂತರ ನಕ್ಷತ್ರಗಳನ್ನು ಒಟ್ಟಿಗೆ ಸೇರಿಸಿದರೂ ಮೀರುವಷ್ಟು ತೀವ್ರವಾಗಿದೆ ಹೀಗಾಗಿಯೇ ಇದು ಭೂಮಿಯಿಂದಲೂ ಗೋಚರಗೊಂಡಿದೆ,” ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕಪ್ಪುಕುಳಿಯ ಸುತ್ತಲಿನ ಪ್ರಕಾಶಮಾನ ತೇಜೋಮಂಡಲ ಸೃಷ್ಟಿಯಾಗಲು ಅತ್ಯಂತ ಶಾಖದಿಂದ ಕೂಡಿದ ಅನಿಲವನ್ನು ಕಪ್ಪುಕುಳಿ ತನ್ನ ಕೇಂದ್ರ ಭಾಗದತ್ತ ಸೆಳೆದುಕೊಳ್ಳುವುದೇ ಕಾರಣ ಇರಬಹುದು. ಆದರೆ, ಕಪ್ಪುಕುಳಿಯ ಕೇಂದ್ರ ಭಾಗದಲ್ಲಿ ಬೆಳಕೂ ಸಹ ತಪ್ಪಿಸಿಕೊಳ್ಳಲಾರದಷ್ಟು ಅಗಾಧ ಗುರುತ್ವಾಕರ್ಷಣೆ ಸೆಳೆತ ಇರುವುದರಿಂದ ಆ ಭಾಗ ಕಡುಕಪ್ಪು ಬಣ್ಣದಿಂದ ಕೂಡಿದೆ ಎಂದು ಅವರು ವಿವರಿಸಿದ್ದಾರೆ. ವಿಶ್ವವನ್ನೇ ನುಂಗಿ ಹಾಕುವ ಸಾಮರ್ಥ್ಯ‌ವುಳ್ಳ ಕಪ್ಪುಕುಳಿಯ ಬಗ್ಗೆ ಖ್ಯಾತ ಭೌತವಿಜ್ಞಾನಿ ಸ್ಟೀಫನ್‌ ಹಾಕಿಂಗ್ಸ್‌ ಮಹತ್ವದ ಮಾಹಿತಿ ನೀಡಿದ್ದರು. ಆ ಬಳಿಕ ಸಾಕಷ್ಟು ವಿಜ್ಞಾನಿಗಳು ಈ ಕುರಿತು ಸಂಶೋಧನೆ ಕೈಗೊಂಡರೂ ಕಪ್ಪುಕುಳಿಯ ಚಿತ್ರಣ ಬರೀ ಕಾಲ್ಪನಿಕವಾಗಿಯೇ ಉಳಿದಿತ್ತು. ವಿಶೇಷವೆಂದರೆ, ಕಾಲ್ಪನಿಕ ಅಥವಾ ಸಂಶೋಧನೆ ಆಧರಿತ ಚಿತ್ರಕ್ಕೂ ಈಗ ಸೆರೆ ಹಿಡಿದಿರುವ ನೈಜ ಚಿತ್ರಕ್ಕೂ ಬಹುತೇಕ ಸಾಮ್ಯತೆ ಇದೆ. ನೈಜ ಚಿತ್ರ ಆಧರಿಸಿ ಖಗೋಳ ವಿಜ್ಞಾನಿಗಳು ಕಪ್ಪುಕುಳಿಗಳ ಬಗ್ಗೆ ಮತ್ತಷ್ಟು ಆಳ ಅಧ್ಯಯನ ಮಾಡಲು ಅನುಕೂಲವಾಗಲಿದೆ.bahyakasha ithihasadalliye modala barige kappu randrada naija photo bidugade-naadleನಮ್ಮ ಸೂರ್ಯನಿಗಿಂತ ಬರೋಬ್ಬರಿ 6.5 ಬಿಲಯನ್ ಪಟ್ಟು ದೊಡ್ಡಿದಿರುವ ಈ ಕಪ್ಪುಕುಳಿ, ನಮ್ಮ ಇಡೀ ಸೌರವ್ಯೂಹಕ್ಕಿಂತಲೂ ಊಹಿಸಲಾಗದಷ್ಟು ದೊಡ್ಡದಿದೆ ಎನ್ನಲಾಗಿದೆ. ಚಿತ್ರದಲ್ಲಿ ಕಪ್ಪುಕುಳಿಯಲ್ಲಿರುವ ಅಪಾರ ಪ್ರಮಾಣದ ಸೂಪರ್ ಹೀಟೆಡ್ ಗ್ಯಾಸ್ (ಅತ್ಯಂತ ಶಾಖದಿಂದ ಕೂಡಿದ ಅನಿಲ) ತನ್ನ ಬಳಿಯ ಗ್ಯಾಲಕ್ಸಿಗಳನ್ನು ತನ್ನತ್ತ ಸೆಳೆಯುತ್ತಿದೆ. ಈ ಕಪ್ಪುಕುಳಿಯಲ್ಲಿನ ಬೆಳಕಿನ ಅಗಾಧತೆ ಎಷ್ಟಿದೆ ಎಂದರೆ ಸೌರವ್ಯೂಹಕ್ಕಿಂತ ಅನೇಕ ಲಕ್ಷ ಪಟ್ಟು ಪ್ರಕಾಶಮಾನವಾಗಿದೆ. ಈ ಬೃಹತ್ ಕಪ್ಪುಕುಳಿಯ ಗುರುತ್ವಾಕರ್ಷಣೆ ಬಲದಿಂದ ಬೆಳಕೂ ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

 

Offers

Want to Add your Offers, contact Naadle at 7090787344 or Email us at info@naadle.com