ಬಹಳ ಮಜಾವಾಗಿದೆ, ಇಲ್ಲ್ ಒಕ್ಕೆಲ್ ಸಿನಿಮಾದ ವಿಶಿಷ್ಟ ಪರಿಕಲ್ಪನೆಯ ಹಾಡು, ರಘು ದೀಕ್ಷಿತ್ ಅವರ ಧ್ವನಿಯಲ್ಲಿ..!!

bahala majavaagide illl okkel cinimada vishista parikalpaneya haadu raghu deekshith avara dhwaniyalli-naadle
Share This:

ಎರ್ಮಾಲ್ದ ಜಪ್ಪುಗೆ ಕಂಡೆವುಡು ಅಡೇಪೂಗೆ ಪಗ್ಗುರ್ಡ್ ಸುಗ್ಗಿ ಮುಟ್ಟಾ ಗೌಜಿ ಗಮ್ಮತ್ ಗೆ. ಈ ಹಾಡಿನಲ್ಲಿ ತುಳುನಾಡಿನ ಎಲ್ಲಾ ಹಬ್ಬ ಆಚರಣೆಗಳ ಬಗ್ಗೆ ಸಾಹಿತಿ ಅದ್ಭುತವಾಗಿ ವರ್ಣಿಸಿದ್ದಾರೆ. ಡಾ. ಸುರೇಶ್ ನಿರ್ದೇಶನದ ಇಲ್ಲ್ ಒಕ್ಕೆಲ್ ಸಿನಿಮಾದ ಈ ಟೈಟಲ್ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಡಾ. ಸುರೇಶ್ ಅವರ  ಅದ್ಭುತ ಸಾಹಿತ್ಯಕ್ಕೆ  ಖ್ಯಾತ ಗಾಯಕ ರಘು ದೀಕ್ಷಿತ್ ಅವರು ಧ್ವನಿಯಾಗಿದ್ದಾರೆ ಮತ್ತು ರಾಜ್ ಷಾ ಅವರು ಸಂಗೀತ ನೀಡಿದ್ದಾರೆ.

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com


ಈಗಾಗಲೇ ಬಿಡುಗಡೆಯಾಗಿರುವ ಈ ಸಿನಿಮಾದ ಎಲ್ಲಾ ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ಅತಿಹೆಚ್ಚು ವ್ಯೂ ಪಡೆದು ಜನರಿಂದ ಪ್ರಶಂಸಿಸಲ್ಪಟ್ಟಿದೆ. ಶೀಘ್ರದಲ್ಲೇ ಇಲ್ಲ್ ಒಕ್ಕೆಲ್ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಈ ಸಿನಿಮಾದಲ್ಲಿ ಕೋಸ್ಟಲ್ ವುಡ್ನ ಅಗ್ರಮಾನ್ಯ ಕಲಾವಿದರಾದ ಕುಸಲ್ದರಸೆ ನವೀನ್.ಡಿ.ಪಡೀಲ್, ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್, ನವರಸ ರಾಜೆ ಭೋಜರಾಜ್ ವಾಮಂಜೂರ್, ಸ್ಯಾಂಡಲ್ ವುಡ್ ನ ಅದ್ವಿತಿ ಶೆಟ್ಟಿ ಪ್ರಪ್ರಥಮವಾಗಿ ತಮ್ಮ ಮಾತೃಭಾಷೆಯಾದ ತುಳುವಿನಲ್ಲಿ ಅಭಿನಯಿಸುತ್ತಿದ್ದಾರೆ, ಭವ್ಯ ಗೌಡ, ವಿಸ್ಮಯ ವಿನಾಯಕ್, ವಿಜೆ ವಿನೀತ್, ಪಿಲಿಬೈಲು ಯಮುನಕ್ಕ ಖ್ಯಾತಿಯ ಚಂದ್ರಕಲಾ ಮೋಹನ್, ಸೀತರಾಮ್ ಕಟೀಲು, ಮಿಷಾ, ಸುನಿಲ್ ನೆಲ್ಲಿಗುಡ್ಡೆ, ಉಮೇಶ್ ಮಿಜಾರ್ ಮತ್ತು ಇನ್ನು ಅನೇಕ ಖ್ಯಾತ ಕಲಾವಿದರು ನಟಿಸಿದ್ದಾರೆ. ವಿಶಿಷ್ಟ ಪಾತ್ರದಲ್ಲಿ ಸ್ಯಾಂಡಲ್ ವುಡ್ನ ಹಾಸ್ಯ ಕಲಾವಿದರಾದ ಕುರಿಬಾಂಡ್ ರಂಗ ಅಭಿನಯಿಸಿದ್ದು ಇವರು ಪ್ರಥಮ ಬಾರಿಗೆ ಕೋಸ್ಟಲ್ ವುಡ್ ಗೆ ಕಾಲಿಡುತ್ತಿದ್ದಾರೆ. ಈ ಸಿನೆಮಾವು ಶ್ರೀ ಗಜನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾಗುತ್ತಿದೆ, ಇಲ್ಲ್ ಒಕ್ಕೆಲ್ ಗೆ ಡಾ.ಸುರೇಶ್ ಯಸ್ ಕೋಟ್ಯಾನ್ ಚಿತ್ರಾಪು ಅವರ ನಿರ್ದೇಶನವಿದ್ದು, ವಾಸುದೇವ ಯಸ್ ಚಿತ್ರಾಪು ಮತ್ತು ಡಿ. ಯಂ ಶೆಟ್ಟಿ ಇವರು ನಿರ್ಮಾಪಕರಾಗಿದ್ದಾರೆ.

Offers

Want to Add your Offers, contact Naadle at 7090787344 or Email us at info@naadle.com