ಆಯುಷ್ಮಾನ್‌ ಭಾರತ; ದೇಶದ ಜನರ ಭವಿಷ್ಯಕ್ಕೊಂದು ಆಶಾಕಿರಣ..!!

ayushman bharatha; deshada janara bhavishyakondu ashaakiran-naadle
Share This:

ದೇಶದ 10 ಕೋಟಿ ಕುಟುಂಬಗಳ 50 ಕೋಟಿ ಬಡವರ ಆರೋಗ್ಯ ಕಾಪಾಡುವ, ಜಗತ್ತಿನ ಅತಿ ದೊಡ್ಡ ಸರಕಾರ ಪ್ರಾಯೋಜಿತ ಹೆಲ್ತ್‌ ಕೇರ್‌ ಯೋಜನೆ ‘ಆಯುಷ್ಮಾನ್‌ ಭಾರತ್‌’ ಭಾನುವಾರ ಲೋಕಾರ್ಪಣೆಗೊಂಡಿತು. ದೇಶದ 400 ಕ್ಕೂ ಹೆಚ್ಚು ಜಿಲ್ಲೆಗಳಲ್ಲೂ ಆಯುಷ್ಮಾನ್​ ಯೋಜನೆ ಜಾರಿಗೊಳ್ಳಲಿದೆ. ಕಟ್ಟ ಕಡೆಯ ವ್ಯಕ್ತಿಯೂ ಉತ್ತಮ ಆರೋಗ್ಯ ವ್ಯವಸ್ಥೆ ಹೊಂದುವಂತಾಗಬೇಕು. ಆಯುಷ್ಮಾನ್​ ಭಾರತ ಯೋಜನೆಯಿಂದ ಸುಮಾರು 50 ಕೋಟಿ ಜನರು, 5 ಲಕ್ಷ ರೂ.ವರೆಗೆ ವಿಮಾ ಸೌಲಭ್ಯ ಪಡೆಯಲಿದ್ದಾರೆ ಎಂದು ಮೋದಿ ಹೇಳಿದರು. ಈ ವಿಮಾ ಯೋಜನೆ ದೇಶದ 476 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಪ್ರಾರಂಭಗೊಳ್ಳಲಿದ್ದು, 10.74 ಕೋಟಿ ಕುಟುಂಬಗಳಿಗೆ ಅನುಕೂಲವಾಗಿದೆ. ಆಯುಷ್ಮಾನ್​ ಭಾರತ ಯೋಜನೆಯು ಜನರ ಕಷ್ಟಕಾಲದಲ್ಲಿ ಅದೃಷ್ಟದಂತೆ ಕೈ ಹಿಡಿಯಲಿದೆ. ಯೋಜನೆ ಅನುಷ್ಠಾನದ ಹಾದಿ ಸುಲಭದ್ದಾಗಿರಲಿಲ್ಲ. ಆರು ತಿಂಗಳಲ್ಲಿ ರೂಪುರೇಷೆ ತಯಾರಿಸಲಾಗಿದೆ. ಯಶಸ್ವಿಯಾಗಿ ಜಾರಿಯಾಗಲು ಸಹಕರಿಸಿದ ನನ್ನ ತಂಡದ ಎಲ್ಲ ಸದಸ್ಯರಿಗೂ ತುಂಬು ಹೃದಯದ ವಂದನೆಗಳನ್ನು ಸಲ್ಲಿಸುತ್ತೇನೆ ಎಂದರು.ayushman bharatha; deshada janara bhavishyakondu ashaakiran-naadle

Upcoming and Ongoing events

View More Events

Want to Promote your Event, contact Naadle at 7090787344 or Email us at [email protected]


ಆಯುಷ್ಮಾನ್​ ಭಾರತ ಯೋಜನೆಯಡಿ ಸೌಲಭ್ಯ ಪಡೆಯಲು ಯಾವುದೇ ನೋಂದಣಿಯ ಅಗತ್ಯವಿಲ್ಲ. ಇ-ಕಾರ್ಡ್​ನಲ್ಲಿ ಎಲ್ಲ ವಿವರಗಳು ಇರುತ್ತವೆ ಎಂದು ಹೇಳಿದರು. ನನ್ನ ದೇಶದ ಪ್ರತಿಯೊಬ್ಬ ಪ್ರಜೆಯೂ ಸದಾ ಆರೋಗ್ಯದಿಂದ ಇರಬೇಕು ಎಂದು ಬಯಸುತ್ತೇನೆ. ಒಮ್ಮೆ ಯಾರಿಗಾದರೂ ಏನಾದರೂ ತೊಂದರೆಯಾದರೆ ಆಯುಷ್ಮಾನ್​ ಭಾರತ ಕಾಳಜಿ ವಹಿಸುತ್ತದೆ ಎಂದು ಭರವಸೆ ನೀಡಿದರು. ಆಯುಷ್ಮಾನ್​ ಭಾರತ ಯೋಜನೆಯನ್ನು ಕಾರ್ಯಗತಗೊಳಿಸಲು ಈಗಾಗಲೇ 31 ರಾಜ್ಯಗಳು, ಕೇಂದ್ರಾಳಿತ ಪ್ರದೇಶಗಳು ಒಪ್ಪಂದ ಮಾಡಿಕೊಂಡಿವೆ. ಯೋಜನೆಯಡಿ ದೇಶಾದ್ಯಂತ 1.5 ಲಕ್ಷ ಆರೋಗ್ಯ, ಕ್ಷೇಮ ಕೇಂದ್ರಗಳನ್ನು ಉದ್ಘಾಟಿಸಲಾಗುತ್ತಿದೆ.

ಆಯುಷ್ಮಾನ್ ಭಾರತ್ ಯೋಜನೆಯ ಸೌಲಭ್ಯ ಪಡೆಯಲು ಪಡಿತರ ಚೀಟಿ ಇರಬೇಕಾಗುತ್ತದೆ. ಈ ಯೋಜನೆಗೆ ಆಧಾರ್ ಕಾರ್ಡ್ ಕಡ್ಡಾಯ ಅಲ್ಲ. ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಚೀಟಿ ಯಾವುದಿದ್ದರೂ ಸಾಕು. ಕುಟುಂಬದ ಗಾತ್ರ ಹಾಗು ನಿಮ್ಮ ವಯಸ್ಸಿಗೆ ಯಾವುದೇ ಮಿತಿ ಇರುವುದಿಲ್ಲ. ಫಲಾನುಭವಿಗಳಿಗೆ ಆಸ್ಪತ್ರೆಗೆ ಸಂಚರಿಸಲು ನಿಗದಿತ ಪ್ರಯಾಣಕ್ಕೆ ಭತ್ಯೆಯೂ ಸಿಗಲಿದೆ. ಒಮ್ಮೆ ನೋಂದಾಯಿಸಿದರೆ ಒಂದು ವರ್ಷದವರೆಗೆ ಸೌಲಭ್ಯವಿರುತ್ತದೆ.

ಆಯಷ್ಮಾನ್ ಭಾರತ್ ಯೋಜನೆ ಯಾರಿಗೆ ಸಿಗಲಿದೆ?
ಜಾತಿ ಗಣತಿ/ಪಡಿತರ ಚೀಟಿ ಮಾನದಂಡದ ಆಧಾರದ ಮೇಲೆ ವಿಮೆ ಸಗಲಿದೆ. – ಪ.ಜಾತಿ/ಪ.ಪಂಗಡ ಬುಡಕಟ್ಟು ಸಮುದಾಯದವರು – ನಿರ್ವಸಿತರು (ವಸತಿ ಸೌಲಭ್ಯ ಇಲ್ಲದವರು) – ಒಂದು ಕೊಠಡಿಯಲ್ಲಿ ವಾಸಿಸುವ ಕುಟುಂಬಗಳು – ಕೂಲಿ ಕಾರ್ಮಿಕರು, ಜೀತ ವಿಮುಕ್ತರು – ರದ್ದಿ ಆಯುವವರು, ಭಿಕ್ಷುಕರು, ಪೌರಕಾರ್ಮಿಕರು – ಕಟ್ಟಡ ಕಾರ್ಮಿಕರು, ಮನೆ ಕೆಲಸದವರು, ಕುಸುರಿ ಕೆಲಸಗಾರರು – ಟೈಲರ್, ಪ್ಲಂಬರ್, ಸಾರಿಗೆ ನೌಕರರು, ರಿಕ್ಷಾವಾಲಾಗಳು – ಎಲೆಕ್ಟ್ರಿಷಿಯನ್, ಮೆಕಾನಿಕ್, ಸಹಾಯಕರು.ayushman bharatha; deshada janara bhavishyakondu ashaakiran-naadleಆಯುಷ್ಮಾನ್ ಭಾರತ್ ಯೋಜನೆ ಸೌಲಭ್ಯಗಳು ಫಲಾನುಭವಿಗಳು ಸಾಮಾನ್ಯ ದರ್ಜೆಯ ವಾರ್ಡ್ ಗಳಲ್ಲಿ ಶುಶ್ರೂಷೆ ಪಡೆಯಲಿದ್ದಾರೆ. ನೋಂದಣಿ ಶುಲ್ಕ, ವೈದ್ಯರ ಶುಲ್ಕ, ಶಸ್ತ್ರ ಚಿಕಿತ್ಸೆ, ಔಷಧಿಗಳು, ರೋಗಪತ್ತೆ ಪರೀಕ್ಷೆ (ಸ್ಕ್ಯಾನ್, ಎಕ್ಸರೇ) ವಿಮೆಯಡಿ ಸಿಗಲಿದೆ. ಶಸ್ತ್ರಚಿಕಿತ್ಸೆ ಹಾಗೂ ಇತರೆ ವೈದ್ಯಕೀಯ ಚಿಕಿತ್ಸಾ ಸೇವೆ ಸಿಗಲಿದ್ದು, ವಿಮೆ ಪಡೆದ ದಿನದಿಂದಲೇ ಎಲ್ಲಾ ಕಾಯಿಲೆಗಳಿಗೂ ಚಿಕಿತ್ಸೆ ಸಿಗಲಿದೆ. ಧೀರ್ಘಕಾಲಿನ ರೋಗಗಳು, ಹೃದಯದ ಬೈಪಾಸ್, ಸರ್ಜರಿ ಮಂಡಿ ಚಿಪ್ಪು ಅಳವಡಿಕೆ ಕಾಯಿಲೆಗಳಿಗೂ ಚಿಕಿತ್ಸೆ ಸಿಗಲಿದೆ.

ಭಾರತದಲ್ಲಿನ ಪ್ರತಿಯೊಬ್ಬ ವ್ಯಕ್ತಿಗೂ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕು ಎನ್ನುವ ಕಾರಣಕ್ಕೆ ಹಿಂದಿನ ಬಜೆಟ್​ನಲ್ಲಿ ಮೋದಿ ಸರ್ಕಾರ ಈ ಯೋಜನೆ ಪ್ರಕಟಿಸಿತ್ತು. ಪಂಜಾಬ್, ದೆಹಲಿ, ಕೇರಳ, ತೆಲಂಗಾಣ ಹಾಗೂ ಒಡಿಶಾ ಹೊರತುಪಡಿಸಿ ಇನ್ನುಳಿದ ರಾಜ್ಯಗಳು ಕೇಂದ್ರದ ಯೋಜನೆಗೆ ಒಪ್ಪಿಗೆ ಸೂಚಿಸಿವೆ.
naadle If you like this article, click on the button below

Offers

Want to Add your Offers, contact Naadle at 7090787344 or Email us at [email protected]