ಏಷ್ಯನ್ ಪ್ಯಾರಾಗೇಮ್ಸ್ ನಲ್ಲಿ ಕರ್ನಾಟಕದ ಪ್ಯಾರಾಥ್ಲೀಟ್​ಗಳ ಭರ್ಜರಿ ಪದಕ ಬೇಟೆ..!!

asian paragamesnalli karnakada parathletgala bharjari padaka bete-naadle
Share This:

ಏಷ್ಯನ್ ಪ್ಯಾರಾ ಗೇಮ್ಸ್​ನಲ್ಲಿ ಎರಡನೇ ದಿನ ಭಾರತ ಪದಕಗಳ ಭರ್ಜರಿ ಬೇಟೆಯಾಡಿದೆ. ಒಂದೇ ದಿನದಲ್ಲಿ ಮೂರು ಸ್ವರ್ಣ ಪದಕಕ್ಕೆ ಮುತ್ತಿಕ್ಕಿದ ಭಾರತೀಯ ಪ್ಯಾರಾಥ್ಲೀಟ್​ಗಳು ಗಮನಾರ್ಹ ನಿರ್ವಹಣೆ ತೋರಿದ್ದಾರೆ. ಕರ್ನಾಟಕದ ಪ್ಯಾರಾಥ್ಲೀಟ್ ರಕ್ಷಿತಾ ರಾಜು , ಜಾವೆಲಿನ್ ಎಸೆತಗಾರ ಸಂದೀಪ್, ಸ್ವಿಮ್ಮರ್ ಸುಯಶ್ ಜಾಧವ್ ಸೋಮವಾರ ಚಿನ್ನದ ಪದಕ ಗೆಲ್ಲುವ ಮೂಲಕ ಕೀರ್ತಿ ಪತಾಕೆ ಹಾರಿಸಿದರು. ಇನ್ನುಳಿದಂತೆ 2ನೇ ದಿನ 4 ಬೆಳ್ಳಿ, ಮತ್ತು 4 ಕಂಚಿನೊಂದಿಗೆ ಭಾರತ ಒಟ್ಟು 11 ಪದಕಗಳ ಬೇಟೆಯಾಡಿತು. ಇದರಿಂದ ಭಾರತ ಕೂಟದ ಪದಕಪಟ್ಟಿಯಲ್ಲಿ 3 ಚಿನ್ನ, 6 ಬೆಳ್ಳಿ ಹಾಗೂ 8 ಕಂಚು ಸಹಿತ ಒಟ್ಟಾರೆ 17 ಪದಕಗಳೊಂದಿಗೆ 8ನೇ ಸ್ಥಾನಕ್ಕೇರಿದೆ.asian paragamesnalli karnakada parathletgala bharjari padaka bete-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com


ಕರ್ನಾಟಕದ ಪ್ಯಾರಾಥ್ಲೀಟ್​ಗಳಾದ ರಕ್ಷಿತಾ ರಾಜು ಹಾಗೂ ರಾಧಾ ವೆಂಕಟೇಶ್ ಅಂಧರ ವಿಭಾಗದಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದರು. ಚಿಕ್ಕಮಗಳೂರಿನ ಮೂಡಿಗೆರೆಯವರಾದ 17 ವರ್ಷದ ರಕ್ಷಿತಾ 1500 ಮೀಟರ್ ಓಟದ ಸ್ಪರ್ಧೆಯ ಟಿ11 ವಿಭಾಗದಲ್ಲಿ 5 ನಿಮಿಷ, 40.64 ಸೆಕೆಂಡ್​ಗಳಲ್ಲಿ ಅಗ್ರಸ್ಥಾನಿಯಾಗಿ ಕ್ರಮಿಸಿ ಚಿನ್ನ ಗೆದ್ದರು. ಇದೇ ಸ್ಪರ್ಧೆಯ ಟಿ12 ವಿಭಾಗದಲ್ಲಿ ಚಿತ್ರದುರ್ಗದ ಚಳ್ಳಕೆರೆಯ ರಾಧಾ 5 ನಿಮಿಷ, 17.65 ಸೆಕೆಂಡ್​ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
naadle If you like this article, click on the button below

Offers

Want to Add your Offers, contact Naadle at 7090787344 or Email us at info@naadle.com