ಅರಿತ್ತ ಮುಡಿ… ತುಳುನಾಡ್ದ ಜೀವ ನಾಡಿ..!!

arita mudi tulunadda jeevanaadi-naadle
Share This:

ತುಳುನಾಡಿನಲ್ಲಿ ವ್ಯವಸಾಯವೇ ಪ್ರಧಾನವಾಗಿದ್ದ ಸಮಯದಲ್ಲಿ ಅಕ್ಕಿಯನ್ನು ತುಂಬಾ ಸಮಯದವರೆಗೆ ಶೇಖರಿಸಿಡುವುದೇ ಒಂದು ದೊಡ್ಡ ಜವಾಬ್ದಾರಿಯಾಗಿತ್ತು. ಅಂತಹ ಸಮಯದಲ್ಲಿ ತುಳುನಾಡಿನಲ್ಲಿ ಬೈಹುಲ್ಲು ನಿಂದ ತಯಾರಿಸಿದ ತಿರಿ-ತುಪ್ಪೆ, ಗಲಗೆ, ಮುಡಿ, ಕುರುಂಟು, ಮುಟ್ಟೆ ಇವುಗಳನ್ನು ಉಪಯೋಗಿಸಿಕೊಂಡು ಭತ್ತ, ಅಕ್ಕಿ, ಹೆಸರುಕಾಳು, ಉದ್ದಿನ ಬೆಳೆ, ಹುರುಳಿಕಾಳು ತುಂಬಾ ಸಮಯ ಹಾಳಾಗದ್ದಂತೆ ಕಾಪಾಡಿಕೊಳ್ಳುತ್ತಿದ್ದರು. ಅದರಲ್ಲೂ ಬೈಹುಲ್ಲು ಉಪಯೋಗಿಸಿಕೊಂಡು ಕಟ್ಟುವ ಅಕ್ಕಿಯ ಮೂಟೆಗೆ ತುಳುವಿನಲ್ಲಿ “ಮುಡಿ” ಎನ್ನುತ್ತಾರೆ , ಬೈಹುಲ್ಲುವಿನಲ್ಲಿ ಈ ಮುಡಿಯನ್ನು ಕಟ್ಟುವುದೇ ಒಂದು ಸುಂದರ ತುಳುನಾಡಿನಲ್ಲಿ ಇದಕ್ಕೆ ಅದರದೇ ಆದ ಮಹತ್ವವಿದೆ.arita mudi tulunadda jeevanaadi-naadle

Upcoming and Ongoing events

View More Events

Want to Promote your Event, contact Naadle at 9035030300 or Email us at info@naadle.com


ಮುಡಿಯನ್ನು ತಯಾರಿಸಲು ಮೊದಲಿಗೆ  ಬೈಹುಲ್ಲಿನ ಹಗ್ಗ ತಯಾರಿಸುತ್ತಾರೆ(ಕಲ್ಲೆ) ಅದನ್ನು ನೆಲೆದ ಮೇಲೆ ಹರಡಿರುತ್ತಾರೆ. ಅದಕ್ಕಿಂತ ಮೊದಲು ಒಂದು ದೊಡ್ಡ ಬೈಹುಲ್ಲುವಿನ ಕಟ್ಟನ್ನು ತೆಗೆದುಕೊಂಡು ಅದಕ್ಕೆ ನೀರನ್ನು ಹಾಕಿ ಅದರ ಹಿಂಭಾದಿಯನ್ನು ಒಳಮುಖವಾಗಿ ಬಗ್ಗಿಸಿ ಅದರ ತಲೆಯನ್ನು ಕಟ್ಟುತ್ತಾರೆ, ನಂತರ ಅದನ್ನು ಹಗ್ಗದ ಮಧ್ಯಭಾಗದಲ್ಲಿ ಇಟ್ಟು ಅದರ ತಲೆಯ ಕಟ್ಟನ್ನು ಬಿಚ್ಚುತ್ತಾರೆ. ಕಲ್ಲೆಯ ಮೇಲೆಯಿಟ್ಟ ಬೈಹುಲ್ಲನ್ನು ಮೇಲೆ ಹರಡಿ ಅದರ ಮಧ್ಯಭಾಗಕ್ಕೆ ದಪ್ಪಕ್ಕೆ ಬೈಹುಲ್ಲನ್ನು ಹಾಕುತ್ತಾರೆ ನಂತರ ಅದರ ಮಧ್ಯಭಾಗಕ್ಕೆ ಕಾಲನ್ನು ಇಟ್ಟು ನಿಧಾನವಾಗಿ ಅಕ್ಕಿಯನ್ನು ಹಾಕುತ್ತ ರೌಂಡ್ ಆಗಿ ಕಟ್ಟುತ್ತಾ ಒಂದು ಕೊಲ್ಲನ್ನು ಉಪಯೋಗಿಸಿಕೊಂಡು ಅಕ್ಕಿಯನ್ನು ಒಳಗೆ ದೊಡುತ್ತ ಹಗ್ಗದಿಂದ ಬಿಗಿಯಾಗಿ ಕಟ್ಟುತ್ತಾ ಬರುತ್ತಾರೆ.arita mudi tulunadda jeevanaadi-naadleಅಕ್ಕಿಯನ್ನು ಹಾಕುತ್ತ ಈ ಮುಡಿಯನ್ನು ಹೆಣೆಯುತ್ತಾ ಮೇಲೆ ಮೇಲಕ್ಕೆ ತರುತ್ತಾರೆ ,ಈ ಹಗ್ಗವನ್ನು ಸುತ್ತುವ ಕೆಲಸವನ್ನು ಮಕ್ಕಳ ಕೈಯಲ್ಲಿ ಮಾಡುತ್ತಾರೆ. ಅಕ್ಕಿ ಹಾಕಿ ಆದ ಮೇಲೆ ಆ ಹಗ್ಗವನ್ನು ಮೇಲೆ, ಕೆಳಗೆ, ಎಡ ಮತ್ತು ಬಲಕಡೆಗೆ ಬಿಗಿಯಾಗಿ ಕಟ್ಟುತ್ತಾರೆ ಮತ್ತು ಮರದ ಕೋಲಿನಿಂದ ಬಡಿದು ಅದಕ್ಕೆ ಒಂದು ಚಂದದ ರೂಪಕೊಡುತ್ತಾರೆ. ಅದರ ಬದಿಯಲ್ಲಿರುವ ಹೆಚ್ಚುವರಿ ಹುಲ್ಲನ್ನು ತೆಗೆದು ನಂತರ ಅದನ್ನು ನೆಲದ ಮೇಲೆ ಹೊರಳಾಡಿಸಿದರೆ ಅಕ್ಕಿಯ ಮೂಡಿ ರೆಡಿಯಾಗುತ್ತದೆ.
arita mudi tulunadda jeevanaadi-naadleಮುಡಿಕಟ್ಟಿ ತಿಳಿದಿರುವವರಾದರೆ ದಿನಕ್ಕೆ ಹತ್ತು ಮೂಡಿ ಕಟ್ಟುತ್ತಾರೆ, ಹಿಂದಿನ ಕಾಲದಲ್ಲಿ ಮುಡಿಕಟ್ಟಿದವರಿಗೆ ಕೂಲಿ ರೂಪದಲ್ಲಿ ಅಕ್ಕಿ ಕೊಡುತ್ತಿದ್ದರು. ಒಂದು ಮುಡಿಯಲ್ಲಿ ನಲವತ್ತು ಸೇರು ಅಕ್ಕಿ ಹಿಡಿಯುತ್ತದೆ. ತುಳುನಾಡಿನಲ್ಲಿ ರೈತರು ತಾವು ಬೆಳೆದ ಬೆಳೆಯ ಮೊದಲ ಫಸಲಿನ ಅಕ್ಕಿಯನ್ನು ದೇವರಿಗೆ ಸಣ್ಣ ಮುಡಿ ಅಂದರೆ “ಕುರುಂಟು” ಕಟ್ಟಿ ಅರ್ಪಣೆ ಮಾಡುತ್ತಿದ್ದರು.arita mudi tulunadda jeevanaadi-naadleಗ್ರಹಪ್ರವೇಶ, ದೈವ ದೇವರಿಗೆ ಕೊಡುವ ಮುಡಿಯ ರೂಪದಲ್ಲಿ ಕೊಡುವ ಕಾಣಿಕೆಗೆ ತನ್ನದೇ ಅದ ಮಹತ್ವವಿದೆ. ತುಳುನಾಡಿನಲ್ಲಿ ಇಂತದೆ ಅದ ನಾನಾ ರೀತಿಯ ಆಚರಣೆಗಳು ಇದೆ ಆದರೆ ಈ ಪದ್ದತಿಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎನ್ನುವುದು ಬೇಸರದ ಸಂಗತಿ. ನಮ್ಮ ಸಂಸೃತಿಯನ್ನು ಉಳಿಸುವುದು ನಮ್ಮ ಕರ್ತವ್ಯ ಅದಕ್ಕಾಗಿ ನಮ್ಮಿಂದ ಆಗುವಂತಹ ಕೆಲಸವನ್ನು ನಾವು ಮಾಡಬೇಕು, ಇಂತಹ ತುಳುನಾಡಿನ ಸಂಪ್ರದಾಯಗಳನ್ನು ತಿಳಿಸುವಂತಹ ಕೆಲಸವನ್ನು ನಮ್ಮ ಹಿರಿಯರಿಂದ ತಿಳಿದುಕೊಂಡು ಮಾಡೋಣ.
naadle If you like this article, click on the button below

Offers

Want to Add your Offers, contact Naadle at 9035030300 or Email us at info@naadle.com