ಆಳ್ವಾಸ್ ನುಡಿಸಿರಿಯಲ್ಲಿ ಕನ್ನಡ ನಾಡಿನ ಬಹುರೂಪಿ ಆಯಾಮಗಳ ದರ್ಶನ..!!

alvas nudisiriyalli kannada naadina bahuroopi ayamagala darshana-naadle
Share This:

ಕರ್ನಾಟಕ ದರ್ಶನ ಬಹುರೂಪಿ ಆಯಾಮಗಳ ಪರಿಕಲ್ಪನೆಯೊಂದಿಗೆ ‘ಆಳ್ವಾಸ್ ನುಡಿಸಿರಿ 2018’ಕ್ಕೆ ಶುಕ್ರವಾರ ಜೈನ ಕಾಶಿ ಮೂಡಬಿದ್ರೆಯಲ್ಲಿ ಚಾಲನೆ ದೊರೆತಿದೆ. ವಿದ್ಯಾಗಿರಿಯ ಆಳ್ವಾಸ್ ಕಾಲೇಜು ಆವರಣದಲ್ಲಿ ಕನ್ನಡ ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ 2018 ಉದ್ಘಾಟನೆಗೊಂಡಿದೆ.alvas nudisiriyalli kannada naadina bahuroopi ayamagala darshana-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com


ಸಾಹಿತ್ಯ, ಸಾಂಸ್ಕೃತಿಕ, ಕಲೆ, ಕೃಷಿ, ಚಿತ್ರ, ಜಾನಪದ, ವಿದ್ಯಾರ್ಥಿ, ವಿಜ್ಞಾನ-ಹೀಗೆ ಕನ್ನಡ ನಾಡಿನ ಸಮಸ್ತ ಐಸಿರಿಗಳ ಅನಾವರಣಕ್ಕೆ ಆಳ್ವಾಸ್‌ ನುಡಿಸಿರಿ ಸಾಕ್ಷಿಯಾಯಿತು. ಸುಮಾರು 70,000ಕ್ಕೂ ಅಧಿಕ ಮಂದಿ ಶುಕ್ರವಾರ ಸಾಹಿತ್ಯ, ಸಾಂಸ್ಕೃತಿಕ ಜಾತ್ರೆಯನ್ನು ವೀಕ್ಷಿಸಿ, ಆಲಿಸಿ ಆನಂದಿಸಿದರು. ಸಂತ ಶಿಶುನಾಳ ಶರೀಫ ಸಭಾಂಗಣದ ರತ್ನಾಕರ ವೇದಿಕೆಯಲ್ಲಿ ನುಡಿಸಿರಿ ಮುಖ್ಯ ಸಮಾವೇಶ ಹಾಗೂ ವಿಚಾರಗೋಷ್ಠಿಗಳು ನಡೆಯುತ್ತಿದ್ದು, ಕೆ.ವಿ. ಸುಬ್ಬಣ್ಣ ಬಯಲು ರಂಗಮಂದಿರ, ಕು.ಶಿ. ಹರಿದಾಸ್‌ ಭಟ್‌ ವೇದಿಕೆ, ಕಮಲಾ ಚಟ್ಟೋಪಾಧ್ಯಾಯ ವೇದಿಕೆ, ಆನಂದ್‌ ಬೋಳಾರ್‌, ಡಾ| ವಿ.ಎಸ್‌. ಆಚಾರ್ಯ ಸಭಾಭವನದಲ್ಲಿ ಸಂಗೀತ, ನೃತ್ಯ, ಹರಿಕಥಾಕೀರ್ತನ, ದಾಸವಾಣಿ, ನೃತ್ಯರೂಪಕ, ಯಕ್ಷಗಾನ ಮುಂತಾದ ಸಾಂಸ್ಕೃತಿಕ ಸಿರಿ ಪುಳಕಿತಗೊಳಿಸುತ್ತಿವೆ.alvas nudisiriyalli kannada naadina bahuroopi ayamagala darshana-naadleಸಾಹಿತ್ಯ ಜಾತ್ರೆಗೆ ಬರುವ ಜನರಿಗೆ ರುಚಿ, ಶುಚಿಯಾದ ಊಟ ಉಪಾಹಾರದ ಆತಿಥ್ಯ ನೀಡಲು ವಿದ್ಯಾಗಿರಿಯ ಆವರಣದಲ್ಲಿ ಎರಡು ಕಡೆ ಬೃಹತ್‌ ಪಾಕಶಾಲೆಗಳಿದ್ದು, ಸುಮಾರು 200 ಬಾಣಸಿಗರು ಕಾರ್ಯನಿರತರಾಗಿದ್ದಾರೆ. 125ಕ್ಕೂ ಅಧಿಕ ಮಂದಿ ಸ್ವಚ್ಛತಾ ಸಿಬಂದಿ ನಿಯೋಜನೆಗೊಂಡಿದ್ದಾರೆ. ದಿನಂಪ್ರತಿ 60,000 ಮಂದಿಗೆ ಭೋಜನ ಹಾಗೂ 20,000 ಮಂದಿಗೆ ಬೆಳಗ್ಗಿನ ಉಪಾಹಾರ ಸಿದ್ಧಪಡಿಸಲಾಗುತ್ತಿದೆ. ಶುಕ್ರವಾರ ಮಧ್ಯಾಹ್ನ ಹಾಗೂ ರಾತ್ರಿ 50,000ಕ್ಕೂ ಅಧಿಕ ಮಂದಿ ಭೋಜನ ಸ್ವೀಕರಿಸಿದ್ದಾರೆ.
naadle If you like this article, click on the button below

Offers

Want to Add your Offers, contact Naadle at 7090787344 or Email us at info@naadle.com