ಅಳಿವಿನಂಚಿನಲ್ಲಿರುವ ತುಳುನಾಡಿನ ಸಂಸ್ಕೃತಿಯನ್ನು ನೆನಪಿಸುತ್ತಿರುವ ಇಲ್ಲ್ ಒಕ್ಕೆಲ್ ಸಿನಿಮಾದ ಮುರ್ಕುದು ಪೋಪುಂಡುಯೇ ಹಾಡು…!!

Share This:

ತುಳುನಾಡು ಎನ್ನುವುದು ಸಂಸ್ಕೃತಿ, ಆಚಾರ ಮತ್ತು ಕಲೆಗಳ ಬೀಡು. ಆದರೆ ಈಗ ಅನೇಕ ಸಂಪ್ರದಾಯಗಳು ಮತ್ತು ವಸ್ತುಗಳು ನಶಿಸಿಹೋಗುತ್ತಿದೆ. ಇಲ್ಲೊಂದು ತುಳುಚಿತ್ರದ ಹಾಡು ನಶಿಸಿ ಹೋಗುತ್ತಿರುವ ತುಳುವರ ಸಂಪ್ರದಾಯ, ವಸ್ತುಗಳ ಬಗ್ಗೆ ಮನಮುಟ್ಟುವಂತೆ ಅದ್ಬುತ ಸಾಹಿತ್ಯ ಮತ್ತು ಸಂಗೀತದೊಂದಿಗೆ ಮೂಡಿಬಂದಿದೆ. ಕೇಳುಗರನ್ನು ತನ್ನತ್ತ ಸೆಳೆಯುತ್ತಿರುವ ಇಲ್ಲ್ ಒಕ್ಕೆಲ್ ತುಳು ಸಿನಿಮಾದ ಮುರ್ಕುದು ಪೋಪುಂಡುಯೇ ಮತಾ ಹಾಡು. ಡಾ. ಸುರೇಶ್ ಚಿತ್ರಾಪು ಇವರ ಮನಮುಟ್ಟುವಂತಹ ಸಾಹಿತ್ಯ, ಮನಸ್ಸಿಗೆ ಮುದ ನೀಡುವ ರಾಜ್ ಷಾ ಅವರ ಅದ್ಬುತ ಸಂಗೀತ ಮತ್ತು ಮೈಮ್ ರಾಮ್ ದಾಸ್, ಡಾ. ಸುರೇಶ್ ಚಿತ್ರಾಪು, ರಾಜ್ ಷಾ ಹಾಗೂ ವೇಲು ಅವರ ಸಿರಿಕಂಠದಲ್ಲಿ ಮೂಡಿಬಂದ ಈ ಹಾಡು ಕೇಳುಗರನ್ನು ತನ್ನತ್ತ ಸೆಳೆಯುತ್ತಿದೆ.

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆಯಾಗಿ ಎಲ್ಲಡೆಯಿಂದಲ್ಲೂ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ. ಪ್ರತಿಯೋಬ್ಬರು ಕೇಳಲೇಬೇಕು ಈ ಹಾಡನ್ನು ಅಷ್ಟು ಸುಂದರವಾಗಿ ತುಳುನಾಡಿನ ಪುರಾತನ ವಸ್ತು, ಸಂಪ್ರದಾಯಗಳ ಬಗ್ಗೆ ಈ ತಲೆಮಾರಿನ ಜನತೆಗೆ ತಿಳಿಸುತ್ತದೆ.

ಕೋಸ್ಟಲ್ ವುಡ್ ನ ಬಹುನಿರೀಕ್ಷಿತ ಇಲ್ಲ್ ಒಕ್ಕೆಲ್ ಸಿನಿಮಾದ ಜಾನಪದ ಶೈಲಿಯಲ್ಲಿ ಮೂಡಿಬಂದ ಮುರ್ಕುದು ಪೋಪುಂಡುಯೇ ಹಾಡಿಗೆ ಶಾನಾಯಿಯಲ್ಲಿ ಬಾಲೇಶ್, ಟೇಪ್ ಮತ್ತು ಪೆರ್ಕಶನ್ನಲ್ಲಿ ಡಿ ವಿಕ್ಕಿ ಮತ್ತು ನವೀನ್ ರಾವ್, ಮ್ಯಾಂಡೊಲಿನ್ ನಲ್ಲಿ ಸೀನು, ಕೀಬೋರ್ಡ್ನಲ್ಲಿ ರಾಜ್ ಷಾ. ರೇಕಾರ್ಡೆಡ್ ಬೈ ರಾಜೇಶ್ ಕಣ್ಣನ್ ೨ ಕೀಸ್ ಸ್ಟುಡಿಯೋ ಚೆನ್ನೈ, ಮಿಕ್ಸಿಂಗ್ ಅಂಡ್ ಮಸ್ಟರಿಂಗ್ ರಾಜೇಶ್ ಕಣ್ಣನ್ ಮೌಂಟ್ ಅಟ್ಲಾಸ್ ಸ್ಟುಡಿಯೋ ಚೆನ್ನೈಯಲ್ಲಿ ಮಾಡಲಾಗಿದೆ.

ಈ ಸಿನಿಮಾದಲ್ಲಿ ಕೋಸ್ಟಲ್ ವುಡ್ನ ಅಗ್ರಮಾನ್ಯ ಕಲಾವಿದರಾದ ಕುಸಲ್ದರಸೆ ನವೀನ್.ಡಿ.ಪಡೀಲ್, ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್, ನವರಸ ರಾಜೆ ಭೋಜರಾಜ್ ವಾಮಂಜೂರ್, ಸ್ಯಾಂಡಲ್ ವುಡ್ ನ ಅದ್ವಿತಿ ಶೆಟ್ಟಿ ಪ್ರಪ್ರಥಮವಾಗಿ ತಮ್ಮ ಮಾತೃಭಾಷೆಯಾದ ತುಳುವಿನಲ್ಲಿ ಅಭಿನಯಿಸುತ್ತಿದ್ದಾರೆ, ಅಪ್ಪೆ ಟೀಚರ್ ಖ್ಯಾತಿಯ ನಿರೀಕ್ಷ ಶೆಟ್ಟಿ, ಭವ್ಯ ಗೌಡ, ವಿಸ್ಮಯ ವಿನಾಯಕ್, ವಿಜೆ ವಿನೀತ್, ಪಿಲಿಬೈಲು ಯಮುನಕ್ಕ ಖ್ಯಾತಿಯ ಚಂದ್ರಕಲಾ ಮೋಹನ್, ಸೀತರಾಮ್ ಕಟೀಲು ಮತ್ತು ಇನ್ನು ಅನೇಕ ಖ್ಯಾತ ಕಲಾವಿದರು ನಟಿಸಿದ್ದಾರೆ. ವಿಶಿಷ್ಟ ಪಾತ್ರದಲ್ಲಿ ಸ್ಯಾಂಡಲ್ ವುಡ್ನ ಹಾಸ್ಯ ಕಲಾವಿದರಾದ ಕುರಿಬಾಂಡ್ ರಂಗ ಅಭಿನಯಿಸಿದ್ದು ಇವರು ಪ್ರಥಮ ಬಾರಿಗೆ ಕೋಸ್ಟಲ್ ವುಡ್ ಗೆ ಕಾಲಿಡುತ್ತಿದ್ದಾರೆ. ಈ ಸಿನೆಮಾವು ಶ್ರೀ ಗಜನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾಗುತ್ತಿದೆ, ಇಲ್ಲ್ ಒಕ್ಕೆಲ್ ಗೆ ಡಾ.ಸುರೇಶ್ ಯಸ್ ಕೋಟ್ಯಾನ್ ಚಿತ್ರಾಪು ಅವರ ನಿರ್ದೇಶನವಿದ್ದು, ವಾಸುದೇವ ಯಸ್ ಚಿತ್ರಾಪು ಮತ್ತು ಡಿ. ಯಂ ಶೆಟ್ಟಿ ಇವರು  ನಿರ್ಮಾಪಕರಾಗಿದ್ದಾರೆ. ಶೀಘ್ರದಲ್ಲಿ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.

 

Offers

Want to Add your Offers, contact Naadle at 7090787344 or Email us at info@naadle.com