‘ಅಕ್ಷಯ ತೃತೀಯ’ ಶುಭ ಕಾರ್ಯಗಳಿಗೆ ಪ್ರಶಸ್ತ..!!

akshaya tritiya shubha karyagalige prashasthya-naadle
Share This:

ಹಿಂದುಗಳ ಪವಿತ್ರ ದಿನಗಳಲ್ಲಿ ಅಕ್ಷಯ ತೃತೀಯವೂ ಒಂದಾಗಿದೆ. ಅಕ್ಷಯ ಎಂದರೆ ಕ್ಷಯವಿಲ್ಲದ್ದು. ತೃತೀಯ ಎಂದರೆ ವೈಶಾಖ ಮಾಸದ ಮೂರನೆಯ ದಿನ. ವೇದ ಪುರಾಣಗಳ ಪ್ರಕಾರ ಅಕ್ಷಯ ತೃತೀಯ ವಿಶೇಷ ದಿನ. ಅಂದು ಯಾವುದೇ ಶುಭ ಕಾರ್ಯ ಪ್ರಾರಂಭಿಸಬಹುದು. ಈ ದಿವಸ ಸಾಮಾನ್ಯವಾಗಿ ಎಲ್ಲಾ ಶುಭ ಕೆಲಸವನ್ನು ಮಾಡಿದರೆ, ಅಕ್ಷಯವಾಗಿ ಪರಿಣಮಿಸುವುದು. ಈ ದಿವಸ ಜೀವನದ ಹೊಸ ಹೊಸ ಕೆಲಸ-ಕಾರ್ಯಗಳನ್ನು ಪ್ರಾರಂಭಿಸುವುದು ಶುಭಕರ. ವಿಶೇಷವೆಂದರೆ ಅಕ್ಷಯ ತೃತೀಯ ದಿವಸ ಚಿನ್ನ, ಬೆಳ್ಳಿ, ವಜ್ರ, ರತ್ನಾಭರಣ ಖರೀದಿಸಿದರೆ ಸಮೃದ್ದಿ ದೊರೆಯುತ್ತದೆಂದೂ ನಂಬಿಕೆ ಇದೆ.akshaya tritiya shubha karyagalige prashasthya-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಗಂಗಾ ಮಾತೆ ಸ್ವರ್ಗದಿಂದ ಭೂಮಿಗಿಳಿದ ದಿನವೇ ಅಕ್ಷಯ ತೃತೀಯ ಎಂಬ ಪ್ರತೀತಿ. ಇದು ಕೃತ ಯುಗದ ಪ್ರಾರಂಭ ದಿನ. ಪರಶುರಾಮ ಹಾಗೂ ಬಸವೇಶ್ವರರು ಜನಿಸಿದ್ದು ಇದೇ ದಿವಸ. ಅಕ್ಷಯ ತೃತೀಯದಂದು ವಿಷ್ಣುವಿನ ಪೂಜೆ ಮಾಡಿದರೆ ಮೋಕ್ಷ ದೊರೆಯುವುದೆಂಬ ಪ್ರತೀತಿ ಇದೆ. ಅದರಲ್ಲೂ ಅಕ್ಷಯ ತೃತೀಯ ತಿಥಿಯ ಜೊತೆ ರೋಹಿಣಿ ನಕ್ಷತ್ರವಿದ್ದರೆ ಮಹಾ ಪುಣ್ಯಕರ ಎಂಬ ನಂಬಿಕೆಯಿದೆ. ಈ ದಿನದಂದು ವಿಷ್ಣು ಮತ್ತು ಲಕ್ಷ್ಮೀ ಗಂಗಾದೇವಿಗೆ ಪೂಜೆ ಸಲ್ಲಿಸಿದ್ದರಿಂದ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಸಕಲ ದೋಷ ಪರಿಹಾರವಾಗುತ್ತದೆಂದು ಪುರಾಣ ಪ್ರತೀತಿ ಇದೆ. ಕ್ಷಣವಿದು. ಪಾಂಡವರ ಪತ್ನಿ ದ್ರೌಪದಿಗೆ ಸೂರ್ಯದೇವನಿಂದ ಅಕ್ಷಯಪಾತ್ರೆ ದೊರೆತ ಶುಭ ಘಳಿಗೆಯಿದು. ಶ್ರೀಲ ವ್ಯಾಸದೇವರು ಮಹಾಭಾರತ ಬರೆಯಲು ಶುರು ಮಾಡಿದ ದಿನವೂ ಹೌದು. ಅಂದು ಬಡ ಬ್ರಾಹ್ಮಣ ಸುಧಾಮ ದ್ವಾರಕೆಗೆ ಹೋಗುತ್ತಾನೆ. ಬಾಲ್ಯ ಸ್ನೇಹಿತ ಕೃಷ್ಣನನ್ನು ಭೇಟಿಯಾಗುತ್ತಾನೆ. ಸುಧಾಮ ಭಗವಂತನಿಂದ ಯಾವುದೇ ಸಹಾಯ ಯಾಚಿಸದಿದ್ದರೂ ಶ್ರೀಕೃಷ್ಣ ಅವನಿಗೆ ಅಪಾರ ಸಂಪತ್ತನ್ನು ಕರುಣಿಸುತ್ತಾನೆ. ಸುಧಾಮ ಕೊಟ್ಟ ಹಿಡಿ ಅವಲಕ್ಕಿಯನ್ನು ತಿಂದು ಕೃಷ್ಣ ಸಂತೃಪ್ತನಾಗುತ್ತಾನೆ. ಹಾಗಾಗಿ ಅಕ್ಷಯ ತೃತೀಯದಂದು ಶ್ರೀಕೃಷ್ಣ ಪರಮಾತ್ಮನ ಕೃಪೆಯನ್ನು ಪಡೆಯಲು ಸೂಕ್ತ ದಿವಸ. ಇದೇ ದಿನದಿಂದ ತ್ರೇತಾಯುಗ ಆರಂಭವಾಯಿತೆನ್ನುತ್ತಾರೆ. ಆದಿ ಶಂಕರಾಚಾರ್ಯರು ಕನಕಧಾರ ಸ್ತೋತ್ರ ರಚಿಸಿದ ದಿನವೆಂದೂ ಪ್ರಸಿದ್ಧವಾಗಿದೆ. ಕುಬೇರನಿಗೆ ಮರಳಿ ಶ್ರೀಮಂತಿಕೆ ಹಾಗೂ ಅಧಿಕಾರ ದೊರೆತ ಕ್ಷಣವಿದು. ಅನ್ನಪೂರ್ಣಾ ದೇವಿ ಗೋಚರವಾದ ದಿನವೆಂದೂ ಹೆಸರಾಗಿದೆ.akshaya tritiya shubha karyagalige prashasthya-naadleಅಕ್ಷಯ ತೃತೀಯ ದಿನ ಸೂರ್ಯ, ಚಂದ್ರ ಏಕಕಾಲದಲ್ಲಿ ಉನ್ನತ ಪ್ರಮಾಣ ಮುಟ್ಟಿ ಉಚ್ಚರಾಶಿಯಲ್ಲಿ ಉಜ್ವಲತೆ ಸಂಭವಿಸುವುದರಿಂದ ಎಲ್ಲಾ ಕಾರ್ಯಗಳಿಗೆ ಶುಭಕರ. ಸೂರ್ಯ ಆತ್ಮಕಾರಕವಾದರೆ, ಚಂದ್ರ ಮನಸ್ಸುಕಾರಕ. ಹೀಗಾಗಿ ಆತ್ಮ ಮತ್ತು ಮನಸ್ಸು ಪರಿಪೂರ್ಣತೆ ಕಾಣುವ ದಿನ ಇದಾಗಿದೆ.

 

Offers

Want to Add your Offers, contact Naadle at 7090787344 or Email us at info@naadle.com