ಅಹಂ ಇಲ್ಲದ ಅನನ್ಯ ಭಟ್, ಐಟಿ ಕಂಪೆನಿ ಉದ್ಯೋಗಿಗಳ ಜೊತೆ ಹಾಡಿ, ಬೆರೆತು ಫುಲ್ ಖುಷ್..!!

Share This:

ಕನ್ನಡ ಚಿತ್ರರಂಗದ ಪ್ರಸಿದ್ಧ ಗಾಯಕಿ, ಟಗರು ಸಿನಿಮಾದ ಮೆಂಟಲ್ ಹೊ ಜಾವಾ ಸಾಂಗ್ ನ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ ಮತ್ತು ಇತ್ತೀಚೆಗೆ ತೆರೆಕಂಡು ದೇಶದಾದ್ಯಂತ ಹೊಸ ಅಲೆಯನ್ನೇ ಮೂಡಿಸಿದ KGF ಸಿನೆಮಾದ ಗರ್ಭದಿ ನನ್ನಿರಿಸಿ ಹಾಡಿನ ಮೂಲಕ ಎಲ್ಲರ ಮನಸ್ಸು ಗೆದ್ದ ಖ್ಯಾತ ಗಾಯಕಿ ಅನನ್ಯ ಭಟ್ ಅವರು naadle.com ಆಫೀಸಿಗೆ ಭೇಟಿ ನೀಡಿ ಉದ್ಯೋಗಿಗಳ ಜೊತೆ ಸಂವಾದ ನಡೆಸಿದರು. ಅನನ್ಯ ಭಟ್ ಜೊತೆ ಇಲ್ಲ್ ಒಕ್ಕೆಲ್ ಸಿನಿಮಾದ ಡೈರೆಕ್ಟರ್ ಡಾ. ಸುರೇಶ್ ಚಿತ್ರಾಪು ಕೂಡ naadle.com ಆಫೀಸಿಗೆ ಭೇಟಿ ನೀಡಿದರು.ಈ ಸಮಯದಲ್ಲಿ ಅನನ್ಯ ಭಟ್ ಅವರು ಇಲ್ಲ್ ಒಕ್ಕೆಲ್ ಸಿನಿಮಾದ ಹಾಡು ಕೇಳಿ ಖುಷಿಯಾದರು ಹಾಗೂ ಮೇಕಿಂಗ್ ಅನ್ನು ನೋಡಿ ಮೆಚ್ಚಿದರು ಮತ್ತು ಈ ಸಿನಿಮಾ ಸಕ್ಸಸ್ ಆಗಲಿ ಎಂದು ಶುಭಹಾರೈಸಿದರು.ತಾನು ಒಂದು ಸೆಲೆಬ್ರಿಟಿ ಅನ್ನುದನ್ನು ಮರೆತು ಎಲ್ಲರ ಜೊತೆ ಚೆನ್ನಾಗಿ ಬೆರೆತರು. ಪ್ರೇಕ್ಷಕರ ಅಪೇಕ್ಷೆಯ ಮೇರೆಗೆ ತಮ್ಮ ನೆಚ್ಚಿನ ಹಾಡುಗಳನ್ನು ಹಾಡಿದರು. ಅದರಲ್ಲೂ ಅವರ ಅದ್ಬುತ ಕಂಠದಲ್ಲಿ ಮೂಡಿಬಂದ ಸೋಜುಗಾದ ಸೂಜು ಮಲ್ಲಿಗೆ ಸಾಂಗ್ ಅಂತೂ ಎಲ್ಲರನ್ನು ರೋಮಾಂಚನಗೊಳಿಸಿತು.

ತಾನು ಒಂದು ಸೆಲೆಬ್ರೆಟಿ ಎಂಬ ಆಹಂ ಇಲ್ಲದೆ ಎಲ್ಲರ ಜೊತೆ ಸಾಮಾನ್ಯ ಜನರಂತೆ ಬೆರೆಯುವ ಅನನ್ಯ ಅವರ ವ್ಯಕ್ತಿತ್ವ ಎಲ್ಲರಿಗೆ ಮೆಚ್ಚುಗೆಯಾಗುವಂತದ್ದು. ನಿಮ್ಮ ಮುಂದಿನ ಎಲ್ಲ ಪ್ರಾಜೆಕ್ಟ್ ನಿಮಗೆ ಯಶಸ್ಸನ್ನು ನೀಡಲಿ ಮತ್ತು ಭಾಷೆಯ ಗಡಿ ಮೀರಿ ಇನ್ನು ಹೆಚ್ಚಿನ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿ. ನಿಮ್ಮ ಮುಂದಿನ ಜೀವನಕ್ಕೆ naadle.com ನ ಶುಭಹಾರೈಕೆಗಳು.

Offers

Want to Add your Offers, contact Naadle at 7090787344 or Email us at info@naadle.com