ಅಡಿಕೆಯಲ್ಲಿ ತಯಾರಾಗಲಿದೆ ರುಚಿಕರ ಉಪ್ಪಿನಕಾಯಿ: ಮಂಗಳೂರು ಇಂಜಿನಿಯರಿಂಗ್ ವಿದ್ಯಾರ್ಥಿಯ ಹೊಸ ಸಂಶೋಧನೆ..!!

adikeyalli tayaragalide ruchikara uppinakayi mangalore engineering vidhyarthiya hosa samshodane-naadle
Share This:

ಮಾವಿನಕಾಯಿ, ನಿಂಬೆಹಣ್ಣು, ಸೌತೆಕಾಯಿ, ನೆಲ್ಲಿಕಾಯಿ, ಕರಂಡೆ, ಈರುಳ್ಳಿ, ಹಲಸು, ಕಣಲೆ, ಒಣ ಮೀನು ಸೇರಿದಂತೆ ನಾನಾ ಬಗೆಯ ಉಪ್ಪಿನಕಾಯಿಗಳು ಈ ವರೆಗೆ ತಯಾರಾಗುತ್ತಿದ್ದವು. ಆದರೆ ಈಗ ಅಡಿಕೆ ಕಾಲ. ಒಂದೆಡೆ ಅಡಿಕೆ ನಿಷೇಧ, ಆರೋಗ್ಯಕ್ಕೆ ಅಡಿಕೆ ಹಾನಿಕರ ಎಂಬುದೂ ಸೇರಿ ಇನ್ನಿತರ ವಿಚಾರಗಳ ಬಗ್ಗೆ ಗಂಬೀರ ಚರ್ಚೆಯಾಗುತ್ತಿದೆ. ಇನ್ನೊಂದೆಡೆ ಅಡಿಕೆ ಬೆಲೆ ಕುಸಿತ, ಬೆಳೆ ನಷ್ಟದ ಬಗ್ಗೆ ಅಡಿಕೆ ಬೆಳೆಗಾರರು ಅತಂಕದಲ್ಲಿದ್ದಾರೆ. ಈ ಎಲ್ಲದರ ಮಧ್ಯೆ ಮಂಗಳೂರಿನ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯೊಬ್ಬರು ಅಡಿಕೆಯಿಂದಲೂ ಉಪ್ಪಿನಕಾಯಿ ತಯಾರಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.

Upcoming and Ongoing events

View More Events

Want to Promote your Event, contact Naadle at 9035030300 or Email us at info@naadle.com


adikeyalli tayaragalide ruchikara uppinakayi mangalore engineering vidhyarthiya hosa samshodane-naadle adikeyalli tayaragalide ruchikara uppinakayi mangalore engineering vidhyarthiya hosa samshodane-naadle

ಮಂಗಳೂರಿನ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಹೊಸನಗರ ಮಳಲಿ ಮೂಲದ ನಿಖಿಲ್ ಅಡಿಕೆಯಲ್ಲಿ ವಿವಿಧ ಬಗೆಯ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ನಿಖಿಲ್ ಅವರ ತಂದೆ ಕೃಷಿಕರಾಗಿದ್ದು, ಈ ಹಿಂದೆ ಅವರು ಅಡಿಕೆ ಕಷಾಯದ ಪುಡಿ, ಅಡಿಕೆ ಚಾಕೊಲೆಟ್ ಕೂಡ ತಯಾರಿಸಿದ್ದರು. ಈಗ ಮಗ ನಿಖಿಲ್ ಅಡಿಕೆ ಉಪ್ಪಿನಕಾಯಿ ಅನ್ವೇಷಿಸಿದ್ದಾರೆ. ಈ ಅಡಿಕೆ ಉಪ್ಪಿನಕಾಯಿ ತಯಾರಿ ತುಂಬಾ ಸುಲಭ. ಅಡಿಕೆಯಿಂದ ತಯಾರಾಗುವ ಉಪ್ಪಿನಕಾಯಿಗೆ ಸುಲಿದ ಮಧ್ಯಮ ಗಾತ್ರದ ಹಸಿ ಅಡಿಕೆಯನ್ನು 15 ದಿನಗಳ ಕಾಲ ಉಪ್ಪುನೀರಿನಲ್ಲಿ ನೆನೆ ಇಡಬೇಕು. 15 ದಿನಗಳ ಬಳಿಕ ಕೊತ್ತಂಬರಿ, ಜೀರಿಗೆ, ಮೆಣಸು, ಸಾಸಿವೆ ಅರೆದು ಬೆರೆಸಬೇಕು. ಮಾವಿನ ಕಾಯಿಯ ಉಪ್ಪಿನಕಾಯಿ ತಯಾರಿಸುವ ರೀತಿಯಲ್ಲೇ ಅಡಿಕೆ ಉಪ್ಪಿನಕಾಯಿಯನ್ನು ಬೆರೆಸಬೇಕು. ವಾಸನೆ ಬಾರದಿರಲೆಂದು ಅಡಿಕೆಯನ್ನು 5 ದಿನ, 10 ಹಾಗೂ 15 ದಿನ ಎಂಬಂತೆ ಮೂರು ಮಾದರಿಗಳ ಉಪ್ಪಿನಕಾಯಿಯನ್ನು ನಿಖಿಲ್ ತಯಾರಿಸಿದ್ದು, ಯಾವ ಮಾದರಿ ಹೆಚ್ಚು ರುಚಿಕರವೋ ಅದನ್ನೇ ಮಾರುಕಟ್ಟೆಗೆ ಬಿಡುಗಡೆ ಮಾಡುವ ಅಲೋಚನೆ ಇರಿಸಿಕೊಂಡಿದ್ದಾರೆ. ಸಂಶೋಧನೆಗೆಂದೇ ಮಲೆನಾಡಿನಲ್ಲಿ ಅಗ್ರಿ ರಿಸರ್ಚ್ ಅಂಡ್ ಡೆವೆಲಪ್ ಮೆಂಟ್ ಸಂಸ್ಥೆಯನ್ನು ನಿಖಿಲ್ ಸ್ಥಾಪಿಸಿದ್ದಾರೆ.
naadle If you like this article, click on the button below

Offers

Want to Add your Offers, contact Naadle at 9035030300 or Email us at info@naadle.com